ಉಡುಪಿ | ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥನ ರಕ್ಷಣೆ

Date:

ಮಾನಸಿಕ ಅಸ್ವಸ್ಥನ ರಂಪಾಟ, ಉಗ್ರವರ್ತನೆಯಿಂದ ಕೆಲಹೊತ್ತು ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಾನಸಿಕ ಅಸ್ವಸ್ಥನಿಂದ ವಿನಾಕಾರಣ ದಾಂಧಲೆ, ಅಶ್ಲಿಲ ವರ್ತನೆಗಳು ನಡೆದವು. ಸಾರ್ವಜನಿಕರು ಯಾತ್ರಿಕರು ಏನೂ ಮಾಡಲಾಗದೆ ಅಸಹಾಯಕರಾಗಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು, ಯುವಕನನ್ನು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದುಕೊಂಡು ರಂಪಾಟವನ್ನು ನಿಯಂತ್ರಿಸಿದರು. ಬಳಿಕ ನಗರ ಪೋಲಿಸ್ ಠಾಣೆಗೆ‌ ಮಾಹಿತಿ ನೀಡಿದರು.

ಬಳಿಕ ಒಳಕಾಡುವರು ಘಟನಾ ಸ್ಥಳಕ್ಕೆ ಬಂದಿರುವ, ಪೋಲಿಸರ ನೆರವು ಪಡೆದು, ಯುವಕನನ್ನು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಯುವಕನ‌ ಮಾನಸಿಕ ಸ್ಥಿತಿ ಸಹಜ ಸ್ಥಿತಿಗೆ‌ ಬಂದ ಬಳಿಕ, ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ. ಕಾರ್ಯಚರಣೆಯಲ್ಲಿ ಪೋಲಿಸರಾದ ಹೆಡ್ ಕಾನ್ಸಟೇಬಲ್ ಸತೋಷ್ ಶೆಟ್ಟಿ , ವಿನಯ ಕುಮಾರ್, ರಾಜೇಂದ್ರ‌ಮತ್ತು ಶ್ರೀಕೃಷ್ಣ‌ಮಠದ ಕಾವಲು ಸಿಬ್ಬಂದಿಗಳು ಭಾಗಿಯಾಗಿದ್ದರು.

ರಕ್ಷಿಸಲ್ಪಟ್ಟ ಯುವಕ ಹೆಸರು ರಮೇಶ ಪರಶುರಾಮ, ತಂದೆ ವೀರಪ್ಪ, ಗದಗದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.‌ ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆ ಅಥವಾ ಹೊಸಬದುಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...