ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು (ರಿ.) ಉಡುಪಿ ಆಯೋಜನೆಯಲ್ಲಿ “ರಂಗಪ್ರಯೋಗಗಳ ಸಮಕಾಲೀನತೆಯ ಸವಾಲುಗಳು” ಒಂದು ದಿನದ ವಿಚಾರ ಸಂಕಿರಣ 23 ನವೆಂಬರ್ ರವಿವಾರ 2025, ಬೆಳಿಗ್ಗೆ 9.00 ರಿಂದ ಸಂಜೆ 5.00 ತನಕ ಉಡುಪಿ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.
ಬೆಳಿಗ್ಗೆ ಗಂಟೆ 9.30 ಕ್ಕೆ ಖ್ಯಾತ ರಂಗಕರ್ಮಿ ಡಾ.ಜನಾರ್ದನ (ಜನ್ನಿ) ಮೈಸೂರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸಲಿರುವರು .ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ.ನಾಗರಾಜಮೂರ್ತಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಆಗಮಿಸಲಿರುವರು.
ದಿನವಿಡೀ ಜರಗುವ ಈ ವಿಚಾರ ಸಂಕಿರಣದಲ್ಲಿ ‘ರಂಗ ಪ್ರಯೋಗಗಲ್ಲಿ ವಸ್ತು, ಆಶಯ ಮತ್ತು ವಿನ್ಯಾಸಗಳಲ್ಲಿ ಸಮಕಾಲಿನತೆ’ ಮತ್ತು ‘ಹವ್ಯಾಸಿ ರಂಗಭೂಮಿಯ ಸ್ವಾಯತ್ತತೆಯ ಪ್ರಶ್ನೆಗಳು ಮತ್ತು ಶಿಥಲೀಕರಣದ ಅಪಾಯಗಳು’ ಗೋಷ್ಠಿಗಳು ರಾಜ್ಯದ ಖ್ಯಾತ ರಂಗಕರ್ಮಿಗಳ ಭಾಗವಹಿಸುವಿಕೆಯಲ್ಲಿ ಜರಗಲಿರುವುದು.
ಅಪರಾಹ್ನ 4.00 ಕ್ಕೆ ಜರಗುವ ಸಮಾರೋಪ ಸಮಾರಂಭದಲ್ಲಿ ನಾಟಕಕಾರ ರೆ.ಫಾ. ಆಲ್ವಿನ್ ಸೆರಾವೋ ಮಂಗಳೂರು ಸಮರೋಪ ಭಾಷಣ ಮಾಡಲಿರುವರು ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು (ರಿ.) ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಟಿ. ಹೆಚ್ ಲವಕುಮಾರ್ ಭಾಗವಹಿಸಲಿರುವರು ಎಂದು ರಥಬೀದಿ ಗೆಳೆಯರು (ರಿ.) ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕರಾದ ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.





