ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ನೀಡಿದ ಕರೆಯ ಮೇರೆಗೆ ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ನಾಡ ಗ್ರಾಪಂ ಮುಂದೆ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಡಿ. 8ರಂದು ಜರಗಿತು.
ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು ಮಾತನಾಡಿ, ದಲಿತರನ್ನು ಕಡೆಗಣಿಸಿದರೆ ರಾಜ್ಯಮಟ್ಟದಲ್ಲಿ ಸಂಘಟನೆ ವ್ಯಾಪಕ ಹೋರಾಟ ನಡೆಸಲಿದೆ. ಇದಕ್ಕೆ ಆರಂಭ ಎಂಬಂತೆ ಡಿ. 20, 21ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ದಲಿತರ ಹಕ್ಕೊತ್ತಾಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ದಲಿತ ಹಕ್ಕುಗಳ ಸಮಿತಿ, ಬೈಂದೂರು ತಾಲೂಕು ನಾಡ ಘಟಕದ ಅದ್ಯಕ್ಷರಾದ ಪರಮೇಶ್ ರಾಮನಗರ ಮತ್ತು ಜಿಲ್ಲಾ ಸಮಿತಿ ಕೋಶಾಧಿಕಾರಿ ನಾಗರತ್ನ ಆರ್, ಕೃಷಿಕೂಲಿ ಸಂಘದ ರಾಜ್ಯ ನಾಯಕಿ ನಾಗರತ್ನ ನಾಡ ಮತ್ತು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕಿ ಶ್ರೀಮತಿ ಶೀಲಾವತಿ ಹಾಗೂ ಸಿಐಟಿಯು ಸಂಘಟನೆಯ ರಾಜ್ಯ ಮುಖಂಡರಾದ ಅದ್ಯಕ್ಷರಾದ ಶ್ರೀ ರಾಜೀವ ಪಡುಕೋಣೆ ಹಾಗು ಜಿಲ್ಲಾ ಕಾರ್ಯದರ್ಶಿ ರವಿ ವಿ.ಎಂ., ಹಿರಿಯ ದಲಿತ ಮುಖಂಡರಾದ ಮಹಾಬಲ ಕೊಡೇರಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಉಪಾದ್ಯಕ್ಷರಾದ ಪ್ರಥ್ವೀಶ್ ಶೆಟ್ಟಿ ಇವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿಯನ್ನು ಅರ್ಪಿಸಲಾಯಿತು. ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ ಎಸ್ ಮೂಲಕ ಸಂಘಟಿಸಲಾಗುವುದು ಎಂದು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಹೇಳಿದರು.







