ಉಡುಪಿ | ಮಾ.8ರಂದು ರಾಜ್ಯ ಮಟ್ಟದ ‘ಮಹಿಳಾ ಚೈತನ್ಯ ದಿನ’

Date:

‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ ಎಂದು ಒಕ್ಕೂಟದ ಅಖಿಲ ವಿಧ್ಯಾಸಂದ್ರ ಹೇಳಿದರು.

ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ರಾಜ್ಯಾದ್ಯಂತ ಮಹಿಳಾ ಚಳವಳಿ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಪರಿಣಿತರು, ರಂಗಭೂಮಿ, ಜನಪದ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅನೇಕ ವ್ಯಕ್ತಿ-ಸಂಘಟನೆಗಳು ಈ ಒಕ್ಕೂಟದೊಂದಿಗಿದ್ದಾರೆ. ಮಹಿಳಾ ಸಂಘಟನೆಗಳು, ದಲಿತ ದಮನಿತರ ಸಂಘಟನೆಗಳು, ಅಂಗನವಾಡಿ, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ಮನೆಕೆಲಸದ ಕಾರ್ಮಿಕರು, ಗಾರ್ಮೆಂಟ್ ಮತ್ತು ಇನ್ನಿತರ ಕಾರ್ಮಿಕರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರ ಗುಂಪುಗಳು, ಲೇಖಕಿಯರ ಸಂಘ, ರಂಗಕರ್ಮಿಗಳು, ಅಕಾಡೆಮಿಕ್ ವಲಯದ ಸಮಾನ ಮನಸ್ಕರು ಮೊದಲಾಗಿ ನೂರಾರು ಸಂಘ-ಸಂಸ್ಥೆ-ಸಂಘಟನೆಗಳು ಒಕ್ಕೂಟದಲ್ಲಿ ಭಾಗಿಯಾಗಿವೆ” ಎಂದು ಹೇಳಿದರು.

“ಜೀವಪರ ಚಿಂತನೆ ಇರುವ, ಸಮಾನತೆಯ ಆಶಯ ಹೊಂದಿದ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ. ಸರ್ವಧರ್ಮ ಸಮಭಾವ ಇರುವ ಯಾರಾದರೂ ಒಕ್ಕೂಟದಲ್ಲಿ ಭಾಗಿಯಾಗಬಹುದು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“2012ರಲ್ಲಿ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಆ ವೇಳೆಯಲ್ಲಿ ‘ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಮಂಗಳೂರಿನಲ್ಲಿ ರಚನೆಯಾಯಿತು. ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ, ಲಿಂಗತಾರತಮ್ಯ, ಅಸಮಾನತೆಗಳನ್ನು ವಿರೋಧಿಸುತ್ತ, ಮಹಿಳಾ ಘನತೆಯನ್ನು ಎತ್ತಿ ಹಿಡಿಯುತ್ತ ‘ಇನ್ನು ಸಾಕು’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಮಂಗಳೂರಿನಲ್ಲಿ 2013ರಲ್ಲಿ ಒಕ್ಕೂಟವು ಮೊದಲ ಸಮಾವೇಶ ನಡೆಸಿತು. ಸಮಾವೇಶದ ಬಳಿಕ ರಾಜ್ಯದಾದ್ಯಂತ ಇರುವ ಮಹಿಳಾಪರ ಸಂಘಟನೆಗಳು ಒಗ್ಗೂಡಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ನಿರ್ಮಾಣವಾಯಿತು. ಅಲ್ಲಿಂದ ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಲಿಂಗಸೂಕ್ಷ್ಮತೆಯ ಕಾರ್ಯಾಗಾರ ನಡೆಸುತ್ತಾ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಿಕೊಂಡು ಬಂದಿದ್ದೇವೆ” ಎಂದರು.

ಈವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರಗಿ, ತುಮಕೂರುಗಳಲ್ಲಿ ಹನ್ನೊಂದು ಸಮಾವೇಶಗಳನ್ನು ನಡೆಸಿ 2024ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳನ್ನು ಸಮಸಮಾಜದ ನಿರ್ಮಾಣಕ್ಕಾಗಿ ಅರಿವಿನ ಆಂದೋಲನಗಳು ನಡೆದ ಉಡುಪಿ ನಾಡಿನಲ್ಲಿ ಹಮ್ಮಿಕೊಂಡಿದ್ದೇವೆ. ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಎಂಟು ತಿಂಗಳಿನಿಂದ ಉಡುಪಿಯಲ್ಲಿ ಸಿದ್ಧತಾ ಸಭೆ, ತರಬೇತಿ ಕಾರ್ಯಾಗಾರ ನಡೆಸಿದ್ದು, ತಂಡಗಳನ್ನು ಸಿದ್ಧಪಡಿಸಲಾಗಿದೆ” ಎಂದು ಹೇಳಿದರು.

“ಜಿಲ್ಲಾದ್ಯಂತ ‘ಅರಿವಿನ ಪಯಣ’ ಎಂಬ ಲಿಂಗಸೂಕ್ಷ್ಮತಾ ಅಭಿಯಾನದ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸೋದರಿ-ಸೋದರರು ಮತ್ತು ರಾಜ್ಯದೆಲ್ಲೆಡೆಯಿಂದ ಬರುವ ಸಂಗಾತಿಗಳು ಜೊತೆಗೂಡಲಿದ್ದಾರೆ” ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಳ ವಿವರ

ಮಾರ್ಚ್ 8ರ ಶುಕ್ರವಾರ ಆರೂರು ಲಕ್ಷ್ಮೀನಾರಾಯಣ ರಾವ್ ಟೌನ್ ಹಾಲ್ ಅಜ್ಜರಕಾಡು ಉಡುಪಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ‘ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ’ ಎಂಬ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಚೆನ್ನೈನ ನ್ಯಾಯವಾದಿ, ಹೋರಾಟಗಾರ್ತಿ ಆರುಳ್ ಮೌಳಿ ಮಹಿಳಾ ದಿನದ ಸಂದೇಶ ನೀಡಲಿದ್ದಾರೆ.

ಕೆ ಎಸ್ ಲಕ್ಷ್ಮಿ ಬೆಂಗಳೂರು, ಶಾಹೀನ್ ಮೊಕಾಶಿ ಹುಬ್ಬಳ್ಳಿ, ಮೈತ್ರಿ ಬೆಂಗಳೂರು, ಯು ಟಿ ಫರ್ಜಾನಾ ಮಂಗಳೂರು, ಡಾ ಸಬಿತಾ ಕೊರಗ ಮಂಗಳೂರು ಇವರುಗಳು ವಿಚಾರ ಮಂಡನೆ ಮಾಡಿ ಚರ್ಚೆ ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 5.30ರಿಂದ ಉಡುಪಿಯ ಜೋಡುಕಟ್ಟೆಯಲ್ಲಿ ಬೆಳಕಿನೊಂದಿಗೆ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ನಮ್ಮ ಉಡುಪು ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ನಡೆಯಲಿದೆ.

ಮಾರ್ಚ್ 9ರ ಶನಿವಾರ ಬೆಳಿಗ್ಗೆ 10ಕ್ಕೆ ಉಡುಪಿಯ ‘ಹುತಾತ್ಮ ಚೌಕ’ದಲ್ಲಿ ಹಕ್ಕೊತ್ತಾಯ ಜಾಥಾ, ಮೆರವಣಿಗೆ ಉದ್ಘಾಟನೆ ನಡೆಯಲಿದೆ. ತೆಲಂಗಾಣದ ಜನಪರ ಹೋರಾಟಗಾರ್ತಿ, ಡಾ ಜಿ ವಿ ವೆನ್ನೆಲ ಗದ್ದರ್ ಅವರು ಮೆರವಣಿಗೆ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಳಿಕ ಬಾಸೆಷನ್ ಚರ್ಚ್ ಹಾಲಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಬಂದ ಸಂಗಾತಿಗಳು ಮಾತನಾಡಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಬಹುರೂಪಿ ಚಲನಚಿತ್ರೋತ್ಸವಕ್ಕೆ ಲೋಕೇಶ ಮೊಸಳೆ ಚಾಲನೆ

“ಒಕ್ಕೂಟ ಮತ್ತದರ ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ಲಗತ್ತಿಸಿರುವ ಕರಪತ್ರ, ಆಹ್ವಾನ ಪತ್ರಿಕೆಯಲ್ಲಿ ನೀಡಿದ್ದೇವೆ. ಎಂದಿನಂತೆ ಮಾಧ್ಯಮ ಬಂಧುಗಳು ಈ ಕಾರ್ಯಕ್ರಮ ಸಫಲವಾಗಲು ಕಾಳಜಿ, ಪ್ರಚಾರ, ಸಹಕಾರ ನೀಡುವಿರೆಂದು ನಿರೀಕ್ಷಿಸುತ್ತೇವೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಾನಕಿ ಬ್ರಹ್ಮಾವರ, ಧಾರವಾಡದ ಲಿನೆಟ್, ಉಡುಪಿಯ ವೆರೋನಿಕಾ ಕರ್ನೇಲಿಯೊ, ಕಾರ್ಕಳದ ಹುಮೈರಾ, ಕೃತಿ, ರೇಖಾ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...