ಯುದ್ಧವನ್ನು ಧರ್ಮಾಧಾರಿತವಾಗಿ ಬೆಂಬಲಿಸುವುದು ಬಹಳ ಅಪಾಯಕಾರಿ ಎಲ್ಲಾ ರೀತಿಯ ಯುದ್ಧಗಳು ಎಲ್ಲಾ ಧರ್ಮದ ಜನರ ಬದುಕನ್ನು ಹಾಳು ಮಾಡುತ್ತದೆ.
ಯುದ್ಧದ ಪರಿಣಾಮವಾಗಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ ಆದುದರಿಂದ ಯುದ್ಧವನ್ನು ಮತಧರ್ಮ ಮರೆತು ವಿರೋಧಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಅವರು ಹೇಳಿದರು.
ಅವರು ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದ 8 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಸೇವಾ ಕೇಂದ್ರ ಹಾಗೂ ಉಚಿತ ಆರೋಗ್ಯ ತಪಾಸಣಾ ಹೆಸರಿನಲ್ಲಿ ಕಲ್ಯಾಣ ಮಂಡಳಿಯ ಹಣ ಖಾಸಗೀಯವರ ಪಾಲಾಗುವಂತೆ ಮಾಡುತ್ತಿದೆ ಇದು ಕಾರ್ಮಿಕರ ಹಣ ಭ್ರಷ್ಟಾಚಾರ ನಡೆಸಲು ಅನುಕೂಲವಾಗಿದೆ ಎಂದು ಅವರು ದೂರಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ ಗಳು ರಾಜ್ಯ ಸರ್ಕಾರ ಜಾರಿ ಮಾಡಿದರೆ ಬಹುತೇಕ ಸೌಲಭ್ಯಗಳಿಂದ ಕಟ್ಟಡ ಕಾರ್ಮಿಕರು ಹಾಗೂ ಸಂಘಟಿತ ಕಾರ್ಮಿಕರು ವಂಚಿತರಾಗುತ್ತಾರೆ. ಇದರ ಭಾಗವಾಗಿಯೇ ಬಂದ ಸೆಸ್ 50 ಲಕ್ಷಕ್ಕೆ ಏರಿಸಿರುವುದು ಸೌಲಭ್ಯ ಕಸಿಯುವ ಪ್ರಯತ್ನ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಕೌಶಲ್ಯ ತರಬೇತಿ ಹೆಸರಿನಲ್ಲಿ ರೂ 600 ಕೋಟಿ ಹಾಗೂ ಶ್ರಮಿಕ ಶಾಲೆಗಳ ಹೆಸರಿನಲ್ಲಿ 3000 ಕೋಟಿ ಹಾಗೂ ಕಿಟ್ ಗಳ ಖರೀದಿ ಹಾಗೂ ತಾತ್ಕಾಲಿಕ ವಸತಿ ಹೆಸರಿನಲ್ಲಿ 200ಕ್ಕೂ ಅಧಿಕ ಕೋಟಿ ಕಲ್ಯಾಣ ಮಂಡಳಿ ಹಣವನ್ನು ಲೂಟಿ ಹೊಡೆಯಲು ರಾಜ್ಯ ಬಜೆಟ್ ನಲ್ಲಿ ಘೋಷಿಸಿದೆ ಆದರೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಎರಡು ವರ್ಷಗಳಿಂದ ಖಾತೆಗೆ ಜಮೆ ಮಾಡದೇ ವಂಚಿಸಿದೆ ಇದು ನೈಜ ಕಾರ್ಮಿಕರಿಗೆ ಮಾಡಿದ ಮೋಸ ಇದರ ವಿರುದ್ಧ ಅಧಿವೇಶನಕ್ಕೂ ಮುಂಚಿತವಾಗಿ ರಾಜ್ಯದ ಎಲ್ಲಾ ಶಾಸಕರಿಗೂ ಮನವಿ ನೀಡಲು ಕಟ್ಟಡ ಕಾರ್ಮಿಕರ ರಾಜ್ಯ ಸಮಿತಿ ಕರೆ ನೀಡಿದೆ ಎಪ್ರಿಲ್ 20 ರಂದು ಮಂಡಳಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೇಳಿದರು.
ವಾರ್ಷಿಕ ಮಹಾಸಭೆ ಅಧ್ಯಕ್ಷತೆ ಸಂಘದ ಅಧ್ಯಕ್ಷರಾದ ರಾಜೀವ ಪಡುಕೋಣೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು.

ಸ್ವಾಗತವನ್ನು ನಾಗರತ್ನ ಪಡುವರಿ ಮಾಡಿದರು.ಶ್ರದ್ಧಾಂಜಲಿ ಠರಾವು ಮರ್ಲ ದೇವಾಡಿಗ ಮಾಡಿದರು.ಗೋಪಾಲಕ್ರಷ್ಣ ದೇವಾಡಿಗ ಅತಿಥಿಗಳನ್ನು ಗೌರವಿಸಿದರು.
ಜನವಾದಿ ಮಹಿಳಾ ಸಂಘಟನೆಯ ಶೋಭಾ ಕೆರೆಮನೆ ಮಹಾಸಭೆಗೆ ಶುಭಕೋರಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಶ್ರೀಧರ ಉಪ್ಪುಂದ,ಮಂಜು ಪೂಜಾರಿ, ಅಮ್ಮಯ್ಯ ಪೂಜಾರಿ, ನಾಗರತ್ನ ನಾಡ, ಪದ್ಮಾವತಿ, ವಿಜಯ ಬಿ,ರಾಮ ಕಂಬದಕೋಣೆ, ಉದಯ ಗಾಣಿಗ, ರೋನಿ ವಿನೋದ್ ನಜ್ರತ್, ಅಣ್ಣಪ್ಪ ದೇವಾಡಿಗ, ಶಾಂತಾ ಪೂಜಾರಿ,ಲಕ್ಷ್ಮಣ ದೇವಾಡಿಗ ಇದ್ದರು.
ಮಹಾಸಭೆ ಹೊಸ ಸಮಿತಿ ಆಯ್ಕೆ ಮಾಡಿತು. ಅಧ್ಯಕ್ಷರಾಗಿ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ತೊಂಡೆಮಕ್ಕಿ, ಕೋಶಾಧಿಕಾರಿಯಾಗಿ ಗೋಪಾಲ ಕೃಷ್ಣ ದೇವಾಡಿಗ ಸೇರಿದಂತೆ 19 ಮಂದಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿತು. ಗಣೇಶ್ ತೊಂಡೆಮಕ್ಕಿ ವಂದಿಸಿದರು.





