ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಈ ವರ್ಷ ಈದುಲ್ ಫಿತ್ ಹಬ್ಬವನ್ನು ಮಾರ್ಚ್ 21ರಂದು ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.
ಶವ್ವಾಲ್ ತಿಂಗಳ ಚಂದ್ರದರ್ಶನದ ಆಧಾರದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವಿವಿಧ ಪ್ರದೇಶಗಳಿಂದ ಲಭಿಸಿದ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಸಮಿತಿ ಈ ಘೋಷಣೆಯನ್ನು ಹೊರಡಿಸಿದೆ. ಕರಾವಳಿ ಭಾಗಗಳಲ್ಲಿ ಚಂದ್ರದರ್ಶನ ಸಂಭವಿಸಿರುವ ಹಿನ್ನೆಲೆ, ನಾಳೆ ಹಬ್ಬದ ಆಚರಣೆ ಮಾಡಲಾಗುತ್ತದೆ.




