ಕಾಂಗ್ರೆಸ್‌ನಲ್ಲಿದ್ದಾಗ ಅನೈತಿಕ ದಂಧೆ ನಡೆಸಲು ಅವಕಾಶ ಸಿಗದ ಕಾರಣ ಬಿಜೆಪಿ ಪಕ್ಷವನ್ನು ಸೇರಿ, ಸಿಕ್ಕಸಿಕ್ಕಿದ್ದಕ್ಕೆಲ್ಲ ಪ್ರತಿಭಟನೆ ಮಾಡಿ, ಉಡುಪಿ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಸ್ಥಾನವನ್ನು ಪಡೆದು, ಈಗ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರ ರೆಸಾರ್ಟ್‌ನಲ್ಲಿ ಯಾವುದೇ ದಾಖಲೆಗಳಲ್ಲಿದೆ ವಿದೇಶಿಗರು ಅದೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉಡುಪಿ ಬಿಜೆಪಿ ವಲಯದಲ್ಲಿ ಮಾತ್ರವಲ್ಲ ರಾಜ್ಯದ ಬಿಜೆಪಿ ವಲಯ ಹಾಗೂ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಲ್ಲಿ ಉದ್ಭವಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತಿನಿಖೆ ನಡೆಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
ಚಿಕ್ಕ ವಯಸ್ಸಿನ ಸುಮಾರು ಏಳು ಮಂದಿ ಅನಧಿಕೃತವಾಗಿ ರೆಸಾರ್ಟ್‌ನಲ್ಲಿ ವಾಸಿಸುತ್ತಿರುವುದು ನಿಜವಾಗಿಯೂ ಅಚ್ಚರಿ ಮತ್ತು ಆತಂಕವನ್ನುಂಟು ಮಾಡಿದೆ. ಇಂದಿನ ದಿನಗಳಲ್ಲಿ ಸಾಮಾನ್ಯ ಲಾಡ್ಜ್‌ಗಳಲ್ಲೂ ಉಳಿದುಕೊಳ್ಳಬೇಕಾದರೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕನಿಷ್ಠ ಆಧಾರ್ ಕಾರ್ಡ್ ನೀಡದಿದ್ದರೂ ಅಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿ ನಾಗರಿಕರನ್ನು ರೆಸಾರ್ಟ್‌ನಲ್ಲಿ ಕೆಲಸಕ್ಕಿರಿಸಿಕೊಂಡಿರುವುದು ಕಾನೂನುಬಾಹಿರ. ಇವರು ಯಾವ ಕೆಲಸಕ್ಕೆ ಇರಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆಯೂ ತನಿಖೆ ಆಗಬೇಕಿದೆ. ರೆಸಾರ್ಟ್‌ನ ಹೆಸರು ಕಂಡಾಗ ನಿಜವಾಗಿಯೂ ನೋವಾಗುತ್ತದೆ. “ಸಂಕಮ್ಮ ತಾಯಿ ರೆಸಾರ್ಟ್” ಇಂತಹ ಒಂದು ಉತ್ತಮವಾದ ಹೆಸರಿರುವ ರೆಸಾರ್ಟ್‌ನಲ್ಲಿ ಈ ರೀತಿಯಲ್ಲಿ ಕಾನೂನು ಉಲ್ಲಂಘನೆಯ ಕಾರ್ಯಗಳು ನಡೆಯುತ್ತಿರುವುದು ಎಷ್ಟು ಸಮಂಜಸ ಎಂದು ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.
ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಇವುಗಳನ್ನೆಲ್ಲ ಆಜೀವ ಪರ್ಯಂತ ಗುತ್ತಿಗೆ ಪಡೆದವರಂತೆ ವರ್ತಿಸುವ ಬಿಜೆಪಿ ಪ್ರಮುಖರು ಇಂಥ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬದುನ್ನು ಕಾದು ನೋಡಬೇಕು. ಬೇರೆ ದೇಶಗಳಿಂದ ಜನ ಬಂದರೆ ಅವರು ಬಾಂಬ್ ಹಾಕಲು ಬರುತ್ತಾರೆ, ಅವರು ನಮ್ಮ ಕೆಲಸ ಕಸಿದುಕೊಳ್ಳಲು ಬರುತ್ತಾರೆ ಎಂದು ಸಭೆ ಸಮಾರಂಭಗಲ್ಲಿ ಕೂಗಿ ಪ್ರತಿಭಟನೆ ಮಾಡುವ. ಸಿಕ್ಕ ಸಿಕ್ಕಲ್ಲಿ ಪ್ರತಿಭಟನೆ ಮಾಡುವ ಈ ಯುವ ಮೋರ್ಚಾ ಅಧ್ಯಕ್ಷರ ಚಟುವಟಿಕೆ ನೋಡಿದರೆ ಇವರ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ. ಪಕ್ಷದಿಂದ ಪಕ್ಷಕ್ಕೆ ಹಾರಿದರೂ ಶೀಲ ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂಥ ಸಾಮಾನ್ಯ ವಿಷಯಗಳ ಅರಿವು ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರಿಗೆ ಇರಬೇಕಾದ ಅಗತ್ಯವಿದೆ. ಇಂಥವರು ಯಾವುದೇ ಹುದ್ದೆಯಲ್ಲಿ ಮಾತ್ರವಲ್ಲ ಪ್ರಾಥಮಿಕ ಸದಸ್ಯತ್ವದಲ್ಲೂ ಇರಲು ಅನರ್ಹರು ಎಂದು ನಾಗೇಂದ್ರ ಪುತ್ರನ್ ಕಿಡಿ ಕಾರಿದ್ದಾರೆ.





