ಮಂಗಳೂರಿನ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಜಾಯ್ ಲ್ಯಾಂಡ್ ಶಾಲೆಯ ಬಳಿಯ ಕೊಲ್ಯ ಸಾರಸ್ವತ ಕಾಲೋನಿಯಲ್ಲಿ ಭಾರಿ ಗಾಳಿ ಮಳೆಗೆ ಮರ ಭಾನುವಾರ ಬೆಳಗ್ಗೆ ವಿದ್ಯುತ್ ತಂತಿಯ ಮೇಲೆ ಬಿದ್ದು, ಮೂರು ಕಂಬಗಳು ಧರೆಗೆ ಉರುಳಿದೆ. ಒಂದು ವಿದ್ಯುತ್ ಕಂಬವು ಆಟೋ ರಿಕ್ಷಾದ ಮೇಲೆ ಬಿದ್ದು, ಆಟೋ ಪಲ್ಟಿಯಾಗಿ ಜಖಂಗೊಂಡಿದೆ.
ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
ಹಾನಿಗೊಂಡ ಆಟೋ ರಿಕ್ಷಾವು ಮಾಧವ ಗಟ್ಟಿ ರವರಿಗೆ ಸೇರಿದೆ. ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ ಹಿನ್ನೆಲೆ ಸೋಮೇಶ್ವರ-ತೊಕ್ಕೊಟ್ಟು ಒಳ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಮತ್ತುಸದಸ್ಯರು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.





