ಚಿಕ್ಕಮಗಳೂರು l ರಸ್ತೆ ಮಧ್ಯೆ ಅನಧಿಕೃತ ಗೋಪುರ ನಿರ್ಮಾಣ, ವಾಹನ ಸಂಚಾರಕ್ಕೆ ಅಡಚಣೆ: ಬೇಸತ್ತು ಹೋದ ಸಾರ್ವಜನಿಕರು

Date:

ಕಳಸ ತಾಲ್ಲೂಕಿನ ಹೊರನಾಡು ಗ್ರಾಮಕ್ಕೆ ಬೇರೆ ಭಾಗಗಳಿಂದ  ಪ್ರವಾಸಿಗರು ಹಾಗೂ ಜನರು ಬರುತ್ತಾರೆ, ಅದರಲ್ಲೂ, ಹೊರನಾಡು ಎಂದರೆ ತಕ್ಷಣ ನೆನಪು ಆಗುವುದೇ ಹೊರನಾಡಿನಲ್ಲಿ ನೆಲೆಸಿರುವ  ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರು ಎಂದು ಜನರ ನಂಬಿಕೆ ಮಾತಾಗಿದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಇರುವ ಜಾಗದಲ್ಲಿ, ನನ್ನದೇ ಜಾಗ ಎಂಬುವ ರೀತಿಯಲ್ಲಿ ಸರ್ಕಾರದ ಜಾಗ, ಅದರಲ್ಲೂ ಡಾಂಬರೀಕರಣ ಹಾಕಿರುವ ಜಾಗದಲ್ಲಿ ಗೋಪುರ ನಿರ್ಮಾಣ ಮಾಡಲು ಓರ್ವ ವ್ಯಕ್ತಿ ಮುಂದಾಗಿದ್ದಾನೆ. ದೇವಾಲಯದ ಎದುರಿಗೆ ಇರುವ ಹೊರನಾಡು ಮುಖ್ಯ ರಸ್ತೆಯಲ್ಲಿ ತಿರುಗಾಡುವ ರಸ್ತೆಯ ಮಧ್ಯ ಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೊಂದರೆ ಆಗುತ್ತಿದೆ.

Screenshot 2025 05 07 10 39 21 41 7352322957d4404136654ef4adb64504

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದುರು ಭಾಗದಿಂದ ಹೊಕ್ಕಳಿಕೊಪ್ಪ, ದಿಂಡಿನಮಕ್ಕಿ, ಮಕ್ಕಿಹಾಳಿ, ಗೋಳಿಬಿಳಲು ಗ್ರಾಮಸ್ಥರು ದೇವಾಲಯದ ದಕ್ಷಿಣಕ್ಕೂ ಮತ್ತು ಹೊಕ್ಕಳಿಕೊಪ್ಪಕ್ಕೆ ಹೋಗುವ ತಿರುವಿನಲ್ಲಿ ಪ್ರಯಾಣ ಮಾಡಬೇಕಿದೆ. ಈ ಸಮಸ್ಯೆಯನ್ನ ಸೃಷ್ಟಿ ಮಾಡಿರುವುದು ಬೇರೆ ಯಾರು ಅಲ್ಲ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಭೀಮೇಶ್ವರ ಜೋಷಿ. ತನ್ನ ಪೂರ್ವಜರ ಪುತ್ಥಳಿ ಗೋಪುರ ನಿರ್ಮಾಣ ಮಾಡುವುದಕ್ಕೆ, ಈ ರಸ್ತೆಯ ಅಂಚಿನಲ್ಲಿ ವಸತಿ ಗೃಹ, ಹೋಟೆಲ್, ಬಸದಿ, ಮನೆಗಳು, ಹೋಂಸ್ಟೇಗಳು, ವಸತಿ ಗೃಹಗಳಿಗೆ ನೂರಾರು ಗ್ರಾಹಕರು ತೊಂದರೆ ಕೊಟ್ಟು ಗೋಪುರ ನಿರ್ಮಾಣ ಮಾಡಿ ಅದನ್ನ ಅನಾವರಣಗೊಳಿಸುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ನಮ್ಮ ಮಾತಿಗೆ ಬೆಲೆ ಇಲ್ಲದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವ ಕ್ರಮ ತೆಗೆದುಕೊಂಡಿಲ್ಲ, ಎಂದು ಸಾರ್ವಜನಿಕರು ಈದಿನ.ಕಾಮ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪುತ್ಥಳಿ ಜಾಗವನ್ನು ವಿಸ್ತರಿಸಲು ದೇವಾಲಯದವರು ಮುಂದಾಗಿದ್ದು,  “ನೂರಾರು ವರ್ಷಗಳಿಂದ ತಿರುಗಾಡುವ ರಸ್ತೆಯ ಮಧ್ಯಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದು ಯಾವ ನ್ಯಾಯ ಅವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯನಾ” ಇದರಿಂದಾಗಿ ಎಂಟು ಚಕ್ರದ ವಾಹನಗಳನ್ನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಅಕ್ರಮವಾಗಿ ನಿರ್ಮಿಸಿರುವ ಗೋಪುರವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಭಾಗದ ಗ್ರಾಮಸ್ಥರು ಈದಿನ.ಕಾಮ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು

ಪಟ್ಟಣಗಳಿಗೆ ಹೋಗಬೇಕಾದ ವಾಹನಗಳ ಸಂಚಾರಕ್ಕೆ ಅಡಚಣೆ ಹಾಗೂ ಇದರಿಂದ ಆ ಭಾಗದಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಜಾಗ ಹಾಗೂ ಡಾಂಬರೀಕರಣ ಮಾಡಿರುವ ಮಧ್ಯ ರಸ್ತೆಯಲ್ಲಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪುತ್ಥಳಿ ಗೋಪುರವನ್ನು ಸಂಬಂಧ ಪಟ್ಟ, ಅಧಿಕಾರಿಗಳು ತೆರವುಗೊಳಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡುವರೇ ಕಾದು ನೋಡಬೇಕಾಗಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...