ʼನನಗೆ ಬಹಳಷ್ಟು ಜನ ಹಂಪಿಯನ್ನು ವೀಕ್ಷಣೆ ಮಾಡಿ ಎಂದು ಹೇಳುತ್ತಿದ್ದರು. ಇಂದು ಆ ಅವಕಾಶ ನನಗೆ ಸಿಕ್ಕಿರೊದು ನನ್ನ ಅದೃಷ್ಟ. ಹಂಪಿಯ ಸಾಂಸ್ಕೃತಿಕ ಪರಂಪರೆಯನ್ನ ಕಣ್ತುಂಬಿಕೊಂಡಿರುವುದು ತುಂಬಾ ಹೆಮ್ಮಯ ಅನುಭವʼ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ರಾಜ್ಯ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು, ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿಸಿಕೊಂಡಿದ್ದು, ಪೂಜೆ ಬಳಿಕ ಮಾತನಾಡಿದರು.
“ಇಲ್ಲಿಯ ಕಲೆ, ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯು ಇಲ್ಲಿನ ಪರಂಪರೆಯನ್ನು ಪ್ರತಿಬಿಂಬಿಸುವಂತಿದೆ. ಇಲ್ಲಿ ಅನೇಕ ಉತ್ಖನನ ಕಾರ್ಯಗಳ ಜತೆಗೆ ಹಂಪಿಯ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ. ನನಗೆ ಇಲ್ಲಿಯ ಇತಿಹಾಸ ಪರಂಪರೆಯ ಬಗ್ಗೆ ಸಂಸದ ತುಕರಾಂ ಹಾಗೂ ರಾಜ ವಶಂಸ್ಥ ಶ್ರೀ ಕೃಷ್ಣದೇವರಾಯ ವಿವರಿಸಿದ್ದರು. ಹಂಪಿಯ ಪ್ರಾಚೀನ ಸಂಸ್ಕೃತಿ ಕಣ್ತುಂಬಿಕೊಳ್ಳುವುದು ಹೆಮ್ಮೆಯ ಸಂಗತಿ ಎನಿಸುತ್ತಿದೆ” ಎಂದು ಹೇಳಿದರು.
“ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೀನೆ. ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ” ಎಂದು ತಿಳಿಸಿದರು.
ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೀನೆ.
— Nirmala Sitharaman (@nsitharaman) October 14, 2025
ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು -ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ.
ನನ್ನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ…
ಈ ಸುದ್ದಿ ಓದಿದ್ದೀರಾ? ಬೀದರ್ | ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ವಕೀಲ ರಾಕೇಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಲು ಆಗ್ರಹ
ಈ ವೇಳೆ ಬಳ್ಳಾರಿ ಸಂಸದ ಇ.ತುಕಾರಾಂ, ಸಚಿವೆ ನಿರ್ಮಲಾ ಸೀತಾರಾಮನ್ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಆನೆಗುಂದಿ ಸಂಸ್ಥಾನದ ರಾಜ ವಂಶಸ್ಥ ಶ್ರೀಕೃಷ್ಣದೇವರಾಯ ಇದ್ದರು.





