ಭಟ್ಕಳಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ.
ಶಿರಾಲಿ ವಿಳಾಸದಲ್ಲಿ ವಾಸವಿದ್ದ ಜಿಯಾನ ಅಬ್ದುಲ್ ಮುನಾಫ್ (18) ನಾಪತ್ತೆಯಾದ ಯುವತಿ. ಶುಕ್ರವಾರ ಸಂಜೆ ತನ್ನ ಮನೆಯಿಂದ ಭಟ್ಕಳ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತನ್ನ ತಂಗಿ ಜೊತೆ ತೆರಳಿರುತ್ತಾಳೆ. ಸುಮಾರು 5.45 ಗಂಟೆಗೆ ತಂಗಿಯನ್ನು ತಟ್ಟಿಹಕ್ಕಲು ಮೈದಾನದ ಹತ್ತಿರ ಬಿಟ್ಟು, ತನ್ನ ಸ್ನೇಹಿತೆಯೊಂದಿಗೆ ರೀಕ್ಷಾದಲ್ಲಿ ಹೋದವಳು ಈ ವರೆಗೆ ಮರಳಿ ಮನೆಗೆ ಬಂದಿಲ್ಲ ಎಂದು ಯುವತಿ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಹುಡಗಿಯ ಚಹರೆ: ಉದ್ದನೆ ಮುಖ, ಸಾಧಾರಣ ಮೈ ಕಟ್ಟು, ಗೋಧಿ ಬಣ್ಣ, ಸುಮಾರು 5.2 ಅಡಿ ಎತ್ತರ, ಹಸಿರು ಮತ್ತು ಬಿಳಿ ಬಣ್ಣದ ಚೂಡಿದಾರ, ಬ್ರೌನ್ ಬಣ್ಣದ ಪರ್ಸ್ ಧರಿಸಿರುತ್ತಾಳೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ.
ಇದನ್ನೂ ಓದಿ: ಉತ್ತರ ಕನ್ನಡ | ಸಾವಯವ ಪದ್ಧತಿಯಲ್ಲಿ ಅಡಕೆ ಕೃಷಿ: ಯುವರೈತನ ಯಶೋಗಾಥೆ
ಈ ಯುವತಿ ಸಾರ್ವಜನಿಕರಲ್ಲಿ ಕಂಡುಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08385-227333, ಪಿಎಸ್‌ಐ ಭಟ್ಕಳ ಗ್ರಾಮೀಣ ಠಾಣೆ :9480805252, ಪೊಲೀಸ್ ಕಂಟ್ರೋಲ್ ರೂಂ ಕಾರವಾರ:08382-226550/112/100 ನ್ನು ಸಂಪರ್ಕಿಸುವಂತೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





