ಉತ್ತರ ಕನ್ನಡದ ಆಯ್ದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫ್ರಾಂಚೈಸಿ ಮೂಲಕ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಉ.ಕ ಅಪರ ಜಿಲ್ಲಾಧಿಕಾರಿ ಹಾಗೂ ಗ್ರಾಮ ಒನ್ ಯೋಜನೆಯ ಸದಸ್ಯ ಕಾರ್ಯದರ್ಶಿ ಸಾಜಿದ್ ಮುಲ್ಲಾ, “ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸರ್ಕಾರಿ ಹಾಗೂ ಇತರೆ ವಿವಿಧ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ‘ಗ್ರಾಮ ಒನ್ ಕೇಂದ್ರ’ಗಳು ಪ್ರಾರಂಭವಾಗುತ್ತಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಸರ್ಕಾರದ ಸೇವೆಗಳು ಒಂದೇ ಸೂರಿನಡಿ ಒದಗಲಿದೆ. ಮುಂಡಗೋಡ ತಾಲೂಕಿನ ಗುಂಜಾವತಿ, ಸಿದ್ದಾಪುರ ತಾಲೂಕಿನ ಹಲಗೇರಿ, ಸೂಪಾ ತಾಲೂಕಿನ ಗಂಗೋಡ, ಅಣಶಿ, ಬಜಾರ್ ಕುಣಂಗ, ನಾಗೋಡ ಹಾಗೂ ಯಲ್ಲಾಪುರ ತಾಲೂಕಿನ ಆನ್‌ಗೊಡ್ ಸೇರಿದಂತೆ ಒಟ್ಟು 7 ಗ್ರಾಮ ಪಂಚಾಯತಿಗಳಲ್ಲಿ ಶೀಘ್ರದಲ್ಲೇ ಹೊಸ ಗ್ರಾಮ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಗಳು ಆರಂಭಗೊಳ್ಳಲಿವೆ” ಎಂದು ತಿಳಿಸಿದ್ದಾರೆ.
ಆಸಕ್ತರು ಸೆಪ್ಟೆಂಬರ್ 15ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು https://www.karnatakaone.gov.in/Public/GramOneFranchiseeTerms ಈ ವೆಬ್‌ಸೈಟ್‌ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಗಾಂಧೀಜಿ ಕುರಿತು ರಾಜ್ಯ ಮಟ್ಟದ ‘ಬಾಪೂಜಿ ಪ್ರಬಂಧ ಸ್ಪರ್ಧೆ’





