ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಒಟ್ಟು 229 ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಈ ಹುದ್ದೆಗಳಿಗೆ ಡಿ. 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಗಳು https://karnemakaone.kar.nic.in/abcd/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ವಿಧಾನ, ಅರ್ಹತಾ ಮಾನದಂಡಗಳು ಹಾಗೂ ಅಗತ್ಯ ದಾಖಲೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇದೇ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
ತಾಲೂಕಾವಾರು ಖಾಲಿ ಹುದ್ದೆಗಳ ವಿವರ: ಕಾರವಾರ: ಸಹಾಯಕಿ 8. ಅಂಕೋಲಾ: ಕಾರ್ಯಕರ್ತೆ 2, ಸಹಾಯಕಿ 24, ಕುಮಟಾ: ಸಹಾಯಕಿ 9, ಹೊನ್ನಾವರ: ಕಾರ್ಯಕರ್ತೆ 1, ಸಹಾಯಕಿ 12, ಭಟ್ಕಳ: ಕಾರ್ಯಕರ್ತೆ 1, ಸಹಾಯಕಿ 16, ಶಿರಸಿ: ಕಾರ್ಯಕರ್ತೆ 2, ಸಹಾಯಕಿ 39, ಸಿದ್ದಾಪುರ: ಕಾರ್ಯಕರ್ತೆ 4, ಸಹಾಯಕಿ 15, ಯಲ್ಲಾಪುರ: ಕಾರ್ಯಕರ್ತೆ 3, ಸಹಾಯಕಿ 25, ಮುಂಡಗೋಡ: ಕಾರ್ಯಕರ್ತೆ 2, ಸಹಾಯಕಿ 16, ಹಳಿಯಾಳ: ಕಾರ್ಯಕರ್ತೆ 3, ಸಹಾಯಕಿ 18, ದಾಂಡೇಲಿ: ಸಹಾಯಕಿ 8. ಜೋಯಿಡಾ: ಕಾರ್ಯಕರ್ತೆ 5, ಸಹಾಯಕಿ 16, ಒಟ್ಟು 23 ಕಾರ್ಯಕರ್ತೆ ಹಾಗೂ 206 ಸಹಾಯಕಿ ಹುದ್ದೆಗಳು ಖಾಲಿ ಇವೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ನಕಲಿ ಜಾತಿ ಪ್ರಮಾಣ ಪತ್ರದಿಂದ ನೌಕರಿ ಪಡೆದವರು ಸತ್ಯ ಬಹಿರಂಗಪಡಿಸಬೇಕು: ಭೀಮ ಘರ್ಜನೆ ಆಗ್ರಹ
ಅರ್ಹ ಹಾಗೂ ಆಸಕ್ತ ಮಹಿಳೆಯರು ತಮ್ಮ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.





