ಉತ್ತರ ಕನ್ನಡ | ಸಣ್ಣವರ ಬಂಧನ, ದೊಡ್ಡವರಿಗೆ ರಕ್ಷಣೆ: ಮಟ್ಕಾ, ಇಸ್ಪಿಟ್ ದಂಧೆಯ ಹಿಂದಿರುವ ಕಾಣದ ಕೈ ಯಾವುದು?

Date:

ಉತ್ತರ ಕನ್ನಡ ಜಿಲ್ಲೆಯಲ್ಲಿ‌ ದಿನನಿತ್ಯವೂ ಪೊಲೀಸರು ಮಟ್ಕಾ ಮತ್ತು ಇಸ್ಪಿಟ್ ಆಟದ ವಿರುದ್ಧ ದಾಳಿ ನಡೆಸಿ ಈ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಬಂಧಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಪೋಲೀಸರ ಈ ಪ್ರಯತ್ನಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಕ್ರಮಗಳ ಹಿಂದೆಯೇ ಜನರ ಮನದಲ್ಲಿ ಹೊಸ ಬಗೆಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಪೊಲೀಸರಿಂದ ಬಂಧನಕ್ಕೆ ಒಳಗಾಗುತ್ತಿರುವವರು ಬಹುಪಾಲು ಜನ ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಹಾಗೂ ಗೂಡಂಗಡಿ ನಡೆಸುವವರು. ಬಂಧನದ ವೇಳೆ ಅವರಿಂದ ವಶಪಡಿಸಿಕೊಳ್ಳುತ್ತಿರುವ ಮೊತ್ತ ಸಹ ರೂ. 400 ರಿಂದ 1000ರ ನಡುವೆ ಮಾತ್ರವಿದೆ. ಆದರೆ ಇವರ ಹಿಂದೆ ನಿಂತು ಪ್ರತಿದಿನ ಲಕ್ಷಾಂತರ ಹಣ ಸಂಗ್ರಹಿಸುತ್ತಿರುವ ನಿಜವಾದ ದಂಧೆ ಮಾಲೀಕರು ಯಾರೂ ಅವರ ಹೆಸರು ಎಲ್ಲಿಯೂ ಬೆಳಕಿಗೆ ಬರುತ್ತಿಲ್ಲಾ ಏಕೆ. ಅವರಿಂದ ಆದೇಶ ಪಡೆದು ಮಟ್ಕಾ ಚೀಟಿ ಬರೆಯುತ್ತಿರುವವರ ಬಂಧನ ವಾಗುತ್ತಿದ್ದರೆ. ಬಂಧನಕ್ಕೆ ಒಳಗಾದವರು ವಿಚಾರಣೆ ವೇಳೆ ಅವರ ಹೆಸರುಗಳನ್ನು ಹೇಳುತ್ತಿಲ್ಲಾ ಅವರು ಅಷ್ಟೊಂದು ಪ್ರಭಾವಿಗಳಾ ಇಲ್ಲಾ ಅವರ ಹಿಂದೆ ರಾಜಕೀಯ ನಾಯಕರ ಆರ್ಶಿವಾದ ಇದಿಯಾ ಎಂದು ತಿಳಿದುಬರುತ್ತಿಲ್ಲಾ.

ಮಟ್ಕಾ ಬರೆಯುವವರಲ್ಲಿ ಹೆಚ್ಚಿನವರು ಅಕ್ಷರ ಜ್ಞಾನ ಕಡಿಮೆ ಇರುವವರೆ. ಹೊಟ್ಟೆಪಾಟಿಗಾಗಿ ಕೆಲವರು ರೂ. 100–200 ಆಸೆಗೆ ಈ ಕೆಲಸ ಮಾಡುತ್ತಿದ್ದಾರೆ. ಇವರು ಮಾಡುತ್ತಿರುವ ಕೆಲಸ ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ಮರೆಯಬಾರದು ಆದರೆ ಇವರೇ ಬಂಧಿತರಾಗುತ್ತಿದ್ದಾರೆ, ನಿಜವಾದ  ಮಾಲೀಕರು ಸುರಕ್ಷಿತವಾಗಿ ಉಳಿಯುತ್ತಿದ್ದಾರೆಯೆ ಎಂಬ ಅನುಮಾನ ಸ್ಥಳೀಯರಲ್ಲಿದೆ. ಪ್ರತಿಯೊಂದು ದಾಳಿಯೂ ಸಣ್ಣ ಜನರ ಮೇಲೆ ನಡೆಯುತ್ತಿದ್ದೆ ಅದು ತಪ್ಪಲ್ಲ ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳಲ್ಲಿ ಯಾರೆ ಭಾಗಿಯಾಗಿದ್ದರು ಸಹ ಅವರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಆದರೆ ಪ್ರತಿದಾಳಿ ಯಲ್ಲೂ ಇವರ ಮೇಲಿರುವ ಮಾಲೀಕರು ಯಾರೂ ಎಂಬುದು ಪತ್ತೆಯಾಗುತ್ತಿಲ್ಲಾ ಇದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಜಿಲ್ಲೆಯ ಜನರ ಮನದಲ್ಲಿ ಹಲವು ಪ್ರಶ್ನೆಗಳು ಮೊಳೆಯುತ್ತಿವೆ—ಮಟ್ಕಾ ಬರೆಯುವವರನ್ನು ಹಿಡಿಯುವುದರಿಂದ ಸಮಾಜ ಶುದ್ಧವಾಗುತ್ತದೆ ನಿಜ ಆದರೆ ಇವರ ಹಿಂದೆ ಇರುವ ಹಣದ ಜಾಲ ಮತ್ತು ರಹಸ್ಯ ಸಂಪರ್ಕಗಳು ಏಕೆ ಪತ್ತೆಯಾಗುತ್ತಿಲ್ಲ? ಎನ್ನುವ ಪ್ರಶ್ನೆ ಕಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? 12 ಗಂಟೆ ಹೋರಾಡಿ ಆ್ಯಂಬುಲೆನ್ಸ್‌ನಲ್ಲೇ ಅಂತ್ಯ ಕಂಡ ಬಡ ಕಾರ್ಮಿಕ; ಇದೇನಾ ಆರೋಗ್ಯ ವ್ಯವಸ್ಥೆಯ ನಿಜಮುಖ?

*ಮುಂಡಗೋಡ ಅರಣ್ಯ ಪ್ರದೇಶಗಳಲ್ಲಿ ಇಸ್ಪಿಟ್ ಆಟ ರಾಜಾರೋಷವಾಗಿ ನಡೆಯುತ್ತಿದ್ದಿಯಾ*; ಇತ್ತಿಚೆಗೆ ಮುಂಡಗೋಡ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಪಟ್ಟಣಕ್ಕೆ ಹತ್ತಿರ ಇರುವ ಅರಣ್ಯ ಪ್ರದೇಶಗಳಲ್ಲಿ ದುಡ್ಡು ಕಟ್ಟಿ ಅಂದರ್–ಬಾಹರ್ ಎಂಬ ಇಸ್ಪಿಟ್ ರೀತಿಯ ಆಟಗಳು ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಪಟ್ಟಣದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಪ್ರತಿದಿನ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಮಾಹಿತಿಯನ್ನು ಸ್ಥಳೀಯ ಮುಖಂಡರು ಹೇಳುತ್ತಿದ್ದಾರೆ.

ಆಟಕ್ಕೆ ಬರುವ ಬೇರೆ ಜಿಲ್ಲೆಯ ಹಾಗೂ ಮುಂಡಗೋಡ ಗಡಿಭಾಗದ ತಾಲ್ಲೂಕಿನ ಆಟಗಾರರಿಗೆ ಅವರ ವಾಹನ ನಿಲುಗಡೆಗೆ ಜಾಗ, ಊಟದ ವ್ಯವಸ್ಥೆ,  ಮತ್ತು ಎಲ್ಲ ರೀತಿಯ ಸೌಲಭ್ಯಗಳನ್ನೂ ಆಯೋಜಕರು ರಾಜಾರೋಷವಾಗಿ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಬರುತ್ತಿದೆ. ಆದರೆ ಮುಂಡಗೋಡ ಪಟ್ಟಣಕ್ಕೆ ಹೊರಗಿನಿಂದ ಇಷ್ಟೊಂದು ಜನರು ಪ್ರತಿನಿತ್ಯ ಬರುತ್ತಿದ್ದರು ಕೂಡಾ ಪೊಲೀಸ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಏಕೆ ಬರುತ್ತಿಲ್ಲ ಹಾಗೂ ಅರಣ್ಯ ಪ್ರದೇಶದಲ್ಲಿ ರಾತ್ರಿಯೆಲ್ಲಾ ಇದ್ದರು ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯವರು ಗಮನಿಸದೇ ಇರುವುದು ಹೇಗೆ ಸಾಧ್ಯ.

ಇಲ್ಲಾ ಅರಣ್ಯ ಇಲಾಖೆಯವರು ಗಸ್ತು ತಿರುಗುವುದನ್ನು ಮರೆತ್ತಿದ್ದಾರ ಎಂಬುದು ತಾಲ್ಲೂಕಿನ ಜನರ ಪ್ರಶ್ನೆಯಾಗಿದೆ.ಅರಣ್ಯ ಪ್ರದೇಶದಲ್ಲಿ ನಡೆಯುವ ಇಸ್ಪಿಟ್ ಆಟಗಳಿಗೆ ಬೇಕು ಬೇಡಗಳನ್ನು ಇಷ್ಟೊಂದು ರಾಜಾರೋಷವಾಗಿ ಪೂರೈಕೆ ಮಾಡುತ್ತಿರುವವರು ಯಾರು? ಜಿಲ್ಲೆಯ ಅಕ್ರಮ ಚಟುವಟಿಕೆಗಳ ಮೇಲೆ ನಿಜವಾದ ಕ್ರಮ ಕೈಗೊಂಡು ಮೂಲ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸುವುದು ಯಾವಾಗಾ ಆಗಲಿದೆ? ಮಟ್ಕಾ ಚೀಟಿ ಬರೆಯುವುದು ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆ ಆಗಿದೆ, ಅದೇ ರೀತಿ ಇಸ್ಪೀಟ ಆಟ ಕೂಡ ಕಾನೂನು ಬಾಹಿರ ಚಟುವಟಿಕೆ ಆಗಿದೆ.

ಆದರೆ ಕೇವಲ ಬರೆಯುವವರನ್ನು, ಅಂದರ ಬಾಹರ ಇಸ್ಪೀಟ ಆಡುವಾಗ ಸಿಕ್ಕವರ ಮೇಲೆ ಕಾನೂನು ಕ್ರಮ ಕೈಗೊಳ್ಳುವದರ ಜೊತೆ ಅದನ್ನು ಆಯೋಜಿಸುವ ಆಯೋಜಕರ ಕೂಡ ಅಪರಾಧಿಗಳು ಎಂದು ಪರಿಗಣಿಸಿ, ಅವರ ಹಿಂದೆ ನಿಂತು ದಂಧೆ ನಡಸುತ್ತಿರುವ “ಕಾಣದ ಕೈಗಳನ್ನು” ಯಾರವು ಎಂದು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಅವರ ಮೇಲೂ ಸಹ ಕಾನೂನು ಕ್ರಮ ಕೈಗೊಂಡ. ಅಕ್ರಮ ಚಟುವಟಿಕೆಗಳ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಹಾಗೂ ಸ್ಥಳೀಯರ ಒಕ್ಕೊರಲ ಅಭಿಪ್ರಾಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...