ಉತ್ತರ ಕನ್ನಡ: ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ಚಾಲಕರ ಒಕ್ಕೂಟ (ರಿ.) ಪದಾಧಿಕಾರಿಗಳಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನವೆಂಬರ್ 30, 2025ರ ಭಾನುವಾರ, ರಾಜ್ಯಾಧ್ಯಕ್ಷ ಜಿ. ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಶ್ರೀ ಮುನ್ನಾ ಗಣೇಶಪುರ, ಉಪಾಧ್ಯಕ್ಷ ಅಶೋಕ ಅಂಬಿಗ, ಸಂಚಾಲಕರಾದ ಲಿಂಗರಾಜ ಖನ್ನೂರ, ಮುಂಡಗೋಡ ತಾಲೂಕು ಅಧ್ಯಕ್ಷ ಸಲೀಮ್ ಶೇಖ್, ಕಾರ್ಯದರ್ಶಿ ಉದಯ ಗೊಂದಳೆ, ಹಾಗೂ ಪದಾಧಿಕಾರಿ ಉದಯ ಗೊಂಡಳೆ, ಹಳಿಯಾಳ ತಾಲೂಕು ಅಧ್ಯಕ್ಷ ಬಸವರಾಜ ಗೌಳಿ, ಅಧ್ಯಕ್ಷ ಬಸವರಾಜ ಗೌಳಿ, ಅಂಕೋಲಾ ಅಧ್ಯಕ್ಷ ಪ್ರವೀಣ್ ನಾಯ್ಕ್, ಜೊಯಿಡಾ ಅಧ್ಯಕ್ಷ ಪ್ರಶಾಂತ ಠಾಣೆಕರ, ಯಲ್ಲಾಪುರ ಅಧ್ಯಕ್ಷ ಇರ್ಫಾನ್, ಹಾಗೂ ಎಲ್ಲಾ ತಾಲೂಕಿನ ಚಾಲಕ ಮಿತ್ರರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳ ಸೇವೆ, ಸಂಘಟನೆ ಶಕ್ತಿ ಹಾಗೂ ಚಾಲಕರು ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು. ಜಿಲ್ಲೆಯ ಪ್ರತಿ ತಾಲೂಕು ಘಟಕದ ನಾಯಕರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ಕಾರ್ಯಕ್ರಮದ ಮೂಲಕ ಚಾಲಕರ ನಡುವಿನ ಬಾಂಧವ್ಯ, ಕನ್ನಡ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯಿತು. ಮುಂದಿನ ದಿನಗಳಲ್ಲಿ ಚಾಲಕರ ಹಿತಕ್ಕಾಗಿ ಇನ್ನಷ್ಟು ಬಲವಾಗಿ ಕೆಲಸ ಮಾಡುವುದಾಗಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.





