ಉತ್ತರ ಕನ್ನಡ | ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪಹಣಿ ತಿದ್ದುಪಡಿ ತಾನಾಗಿಯೇ ಆಗುತ್ತೆ!

Date:

ಜಮೀನಿನ ಪಹಣಿ ಅಥವಾ ಖಾತೆ ಬದಲಾವಣೆಗಾಗಿ (ಮ್ಯುಟೇಶನ್) ರೈತರು ಕಂದಾಯ ಕಚೇರಿಗಳಿಗೆ ಅಲೆಯುವ ಮತ್ತು ಅಧಿಕಾರಿಗಳ ಸಹಿಗಾಗಿ ಕಾಯುವ ದಿನಗಳು ಇನ್ನು ಮುಗಿಯಲಿವೆ. ಸರ್ಕಾರದ ಹೊಸ ಡಿಜಿಟಲ್ ವ್ಯವಸ್ಥೆಯಿಂದಾಗಿ ಈಗ ಪಹಣಿ ತಿದ್ದುಪಡಿ ಪ್ರಕ್ರಿಯೆ ‘ಸ್ವಯಂಚಾಲಿತ’ವಾಗಿ ನಡೆಯಲಿದೆ.

ಏನಿದು ಹೊಸ ಬದಲಾವಣೆ? ಈ ಮೊದಲು ನೀವು ಜಮೀನು ಖರೀದಿ ಮಾಡಿದಾಗ (ಕ್ರಯ), ದಾನ ಪತ್ರ ಅಥವಾ ವಿಭಾಗ ಪತ್ರ ಮಾಡಿಸಿದಾಗ ಪಹಣಿ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಿದ್ದಿರಿ. ಇದಕ್ಕೆ ಕನಿಷ್ಠ 7 ರಿಂದ 15 ದಿನಗಳ ಕಾಲ ನೋಟೀಸ್ ಅವಧಿ ಇರುತ್ತಿತ್ತು.

ಈ ಅವಧಿ ಮುಗಿದ ಮೇಲೆ ರೆವೆನ್ಯೂ ಇನ್ಸ್‌ಪೆಕ್ಟರ್ (RI) ಅವರು ಖುದ್ದಾಗಿ ಡಿಜಿಟಲ್ ಸಹಿ ಮಾಡಬೇಕಿತ್ತು. ಇದರಿಂದಾಗಿ ಸಾವಿರಾರು ಅರ್ಜಿಗಳು ಬಾಕಿ ಉಳಿದು ರೈತರಿಗೆ ತೊಂದರೆಯಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ, ಈಗ ಜಾರಿಗೆ ಬಂದಿರುವ ಹೊಸ ತಂತ್ರಾಂಶದ ಪ್ರಕಾರ, 7 ಅಥವಾ 15 ದಿನಗಳ ನೋಟೀಸ್ ಅವಧಿ ಮುಗಿಯುತ್ತಿದ್ದಂತೆಯೇ ಯಾವುದೇ ಅಧಿಕಾರಿಯ ಸಹಿಯ ಅಗತ್ಯವಿಲ್ಲದೆ, ಸರ್ವರ್ ಮೂಲಕವೇ ‘ಸ್ವಯಂಚಾಲಿತವಾಗಿ’ (Automatic) ನಿಮ್ಮ ಮ್ಯುಟೇಶನ್ ಅನುಮೋದನೆಗೊಳ್ಳುತ್ತದೆ. ಕೆಲಸ ಮುಗಿದ ತಕ್ಷಣ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಕೂಡ ಬರಲಿದೆ.

ಈ ಸುದ್ದಿ ಓದಿದ್ದೀರಾ? ದಾಂಡೇಲಿಯಲ್ಲಿ ಕರಗುತ್ತಿರುವ ಕಲರವ; ಪ್ರವಾಸಿಗರ ಅಬ್ಬರಕ್ಕೆ ಬೆದರಿದ ʼಹಾರ್ನ್‌ಬಿಲ್‌ʼ ಪಕ್ಷಿ ಪ್ರಭೇದ!

ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ: ಒಂದು ವೇಳೆ ಈ ಮ್ಯುಟೇಶನ್ ಬಗ್ಗೆ ಯಾರಿಗಾದರೂ ವಿರೋಧವಿದ್ದರೆ ಅಥವಾ ಸರ್ಕಾರಿ ಆಕ್ಷೇಪಣೆಗಳಿದ್ದರೆ, ಆ ನಿಗದಿತ 7 ಅಥವಾ 15 ದಿನಗಳ ಒಳಗಾಗಿ ಆನ್‌ಲೈನ್ ಮೂಲಕವೇ ದೂರು ನೀಡಬಹುದು. ದೂರು ದಾಖಲಾದರೆ ಮಾತ್ರ ಅಂತಹ ಪ್ರಕರಣಗಳನ್ನು ತಹಶೀಲ್ದಾರರ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಯಾವುದೇ ತಕರಾರು ಇಲ್ಲದಿದ್ದರೆ ಕೆಲಸ ಫಟಾಫಟ್ ಆಗಲಿದೆ.

ಆಧಾರ್ ಜೋಡಣೆ ಯಾಕೆ ಮುಖ್ಯ? ನಿಮ್ಮ ಪಹಣಿಗೆ (RTC) ಆಧಾರ್ ಕಾರ್ಡ್ ಜೋಡಣೆ ಮಾಡಿಸುವುದು ಈಗ ಬಹಳ ಮುಖ್ಯವಾಗಿದೆ. ನಿಮ್ಮ ಜಮೀನಿನ ದಾಖಲೆಗಳಲ್ಲಿ ಏನಾದರೂ ಬದಲಾವಣೆಯಾದರೆ ಅಥವಾ ಯಾರಾದರೂ ಅದನ್ನು ಬದಲಿಸಲು ಪ್ರಯತ್ನಿಸಿದರೆ ತಕ್ಷಣ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಇದರಿಂದ ಮೋಸ ಹೋಗುವುದನ್ನು ತಡೆಯಬಹುದು. ಹೀಗಾಗಿ, ಈವರೆಗೆ ಆಧಾರ್ ಜೋಡಣೆ ಮಾಡದ ರೈತರು ಕೂಡಲೇ ಅದನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಮನವಿ ಮಾಡಿದ್ದಾರೆ.

ರೈತರಿಗಾಗುವ ಲಾಭಗಳು: ಅಧಿಕಾರಿಗಳಿಗಾಗಿ ಕಾಯುವ ಕಿರಿಕಿರಿ ಇರುವುದಿಲ್ಲ,  ಲಂಚ ಅಥವಾ ಮಧ್ಯವರ್ತಿಗಳ ಕಾಟ ತಪ್ಪುತ್ತದೆ, ಕೆಲಸ ಮುಗಿದ ಬಗ್ಗೆ ಮೊಬೈಲ್‌ನಲ್ಲೇ ಮಾಹಿತಿ ಸಿಗುತ್ತದೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...