ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಬೇಡ್ತಿ-ವರದಾ ನದಿ ಜೋಡಣೆಗೆ ಉತ್ತರ ಕನ್ನಡ ಜಿಲ್ಲೆಯ ಜನರ ಜೊತೆ ನನ್ನ ವಿರೋಧವೂ ಸಹ ಇದೆ ಎಂದು ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಸಚಿವರು, “2006-07ರಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕಲ್ಪಿಸಿದಾಗಿನಿಂದಲೇ ನಾನು ಅದನ್ನು ವಿರೋಧಿಸುತ್ತಿದ್ದೇನೆ. ಮೊದಲ ದಿನದಿಂದಲೇ ನನ್ನ ನಿಲುವು ಸ್ಪಷ್ಟವಾಗಿತ್ತು. ಯೋಜನೆಯನ್ನು ಕೈಬಿಡುವಂತೆ ನಾನು ನಿರಂತರವಾಗಿ ಸರ್ಕಾರಗಳನ್ನು ಒತ್ತಾಯಿಸಿದ್ದೇನೆ” ಎಂದರು.
“ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಜನರು ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಭಾವನೆಗೆ ನಾನು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ವೈದ್ಯಕೀಯ ಕಾಲೇಜು ಸ್ಥಾಪನೆ ಚರ್ಚೆ: ಅನಿರ್ದಿಷ್ಟಾವಧಿ ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ
“ಸಿದ್ದಾಪುರ ತಾಲೂಕನ್ನು ಸಾಗರ ತಾಲೂಕಿಗೆ ಸೇರಿಸಿ ಸಾಗರ ಪಟ್ಟಣವನ್ನು ಜಿಲ್ಲೆ ಯಾಗಿ ಮೇಲ್ದರ್ಜೆಗೇರಿಸುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ” ಎಂದು ಸ್ಪಷ್ಟನೆ ನೀಡಿದರು.





