ಉತ್ತರ ಕನ್ನಡ | ಮಂಗನಬಾವು ಸೋಂಕು 130ಕ್ಕೆ ಏರಿಕೆ: ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

Date:

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳಲ್ಲಿ ಮಂಗನಬಾವು ಸೋಂಕಿನ ಸಂಖ್ಯೆ ಪ್ರಸ್ತುತ 130ಕ್ಕೆ ಏರಿದ್ದು, ಕಳೆದ ನಾಲ್ಕೈದು ದಿನಗಳಿಂದ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಮತ್ತು ಮುಖದ ಬಾವು ಕಾಣಿಸಿಕೊಳ್ಳಲು ಶುರುವಾಗಿ, ಮಕ್ಕಳಲ್ಲಿ ಕಾಣಿಸಿಕೊಂಡ ಮಂಗಬಾವು ಇದೀಗ ಮತ್ತಷ್ಟು ಗಂಭೀರವಾಗಿದೆ ಉಲ್ಬಣಗೊಂಡಿದೆ.

ಮಂಗನಬಾವು ಸೋಂಕು ಕಾಣಿಸಿಕೊಂಡ ಮಕ್ಕಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ವಸತಿ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಎಲ್ಲರಿಗೂ ಸೋಂಕಿನ ಭೀತಿ ಶುರುವಾದ ಕಾರಣ, ಇನ್ನುಳಿದ ವಿದ್ಯಾರ್ಥಿಗಳನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂಜಾಗೃತಾ ಕ್ರಮಕ್ಕಾಗಿ ಮನೆಗೆ ಕಳುಹಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮೂರು ದಿನದ ರಜೆ ಘೋಷಿಸಿದ್ದಾರೆ.

ಈ ಕುರಿತು ಈದಿನ.ಕಾಮ್ ಜೊತೆಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ನೀರಜ.ಬಿ.ವಿ‌‌ ಮಾತನಾಡಿ, ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 105 ಗಂಡು ಮಕ್ಕಳು 101 ಹೆಣ್ಣುಮಕ್ಕಳು‌ ಒಟ್ಟು 206 ವಿದ್ಯಾರ್ಥಿಗಳಿದ್ದಾರೆ. ಮಂಗನಬಾವು ರೋಗಕ್ಕೆ ಹೆಚ್ಚು ಭಯಪಡಬೇಕಿಲ್ಲ. ಆದರೆ ಮಂಗನಬಾವು ರೋಗ ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಉಂಟಾಗಿದೆ. ಕ್ರಮೇಣ ವಿದ್ಯಾರ್ಥಿಗಳಲ್ಲಿ ಸೋಂಕು ಹರಡಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ 31 ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 5 ಮಕ್ಕಳಿಗೆ ಸೋಂಕಿನ ಗುರುತು ಕಾಣಿಸಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನವೆಂಬರ್ 22ರಂದು ಮತ್ತೆ 5 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 130 ಮಕ್ಕಳಿಗೆ ಸೋಂಕು ತಗುಲಿದೆ. ವೈದ್ಯಕೀಯ ಪರೀಕ್ಷೆಯ ನಂತರ ಹೆಚ್ಚಿನ ಪರಿಶೀಲನೆಗೆ ಬೆಂಗಳೂರಿನ ಅಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವೈದ್ಯಕೀಯ ವರದಿ ಬಂದನಂತರ ಮುಂದಿನ ಚಿಕಿತ್ಸಾ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಕ್ಕಳಿಗೆ 3 ದಿನಗಳ ರಜೆ ಘೋಷಣೆ ಮಾಡಿದ್ದಾರೆ. ಮಂಗನಬಾವು ವೈರಾಣು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ದೊಡ್ಡ ವೈರಸ್ ಎಂತಲೂ ಅಲ್ಲ. ಸಾಮಾನ್ಯವಾಗಿ ಈ ಸೋಂಕಿಗೆ ಜ್ವರ, ಕಮ್ಮು, ನೆಗಡಿ, ಮುಖ ಮತ್ತು ಗಂಟಲು ಬಾವು, ತಲೆನೋವು ಗುರುತುಗಳನ್ನು ಕಾಣಬಹುದು. ಒಂದಿಷ್ಟು ಚಿಕಿತ್ಸೆ, ಸ್ವಚ್ಛತಾ ಜಾಗೃತಿ ವಹಿಸಿದರೆ‌ ಬೇಗ ವಾಸಿ ಆಗುತ್ತದೆ ಎಂದರು.

IMG 20241122 223828

ಮಂಗನ ಬಾವು ಗಂಭೀರವಾದ ವೈರಾಣು ಕಾಯಿಲೆ‌ ಆಗಿದ್ದು, ಇದರಿಂದ ಕಿವಿಯ ಕೆಳಗೆ ಮತ್ತು ಮುಂಭಾಗದಲ್ಲಿ ನೋವು ಉಂಟಾಗುತ್ತದೆ. ವೈರಾಣುವಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾದ ಮಂಗನಬಾವು ಸೊಂಕಿತ ಜೊಲ್ಲಿನ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 2 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಸೋಂಕು ತಗುಲುವ ಸಂಭವ ಹೆಚ್ಚಾಗಿದ್ದು, ಸಾಧಾರಣವಾಗಿ 2 ರಿಂದ 24 ದಿನಗಳು ಈ ರೋಗದಿಂದ ಹೊರಬರಲು ಸಮಯ ಹಿಡಿಯುತ್ತದೆ.

ಆಹಾರವನ್ನು ನುಂಗುವಾಗ ಮತ್ತು ಅಗಿಯುವಾಗ ನೋವು ಆಗುತ್ತದೆ. ಹುಳಿಯಾದ ಮತ್ತು ಹೆಚ್ಚು ಜೊಲ್ಲು ತರಿಸುವ ಆಹಾರ ಪದಾರ್ಥಗಳು, ಪಾನಿಯಗಳು ನೊವನ್ನು ಹೆಚ್ಚಿಸುತ್ತವೆ. ಅತಿಹೆಚ್ಚು ಜ್ವರ, ತಲೆನೋವು ಮತ್ತು ಹಸಿವಾಗದಿರುವುದು ಇದರ ಲಕ್ಷಣವಾಗಿದೆ. ಈ ಅವಧಿಯಲ್ಲಿ ಮಗುವನ್ನು ಇತರರಿಂದ ದೂರವಿಡಬೇಕು. ಶಾಲೆಗೆ ಕಳಿಸಬಾರದು. ಒಂದು ಸಲ ಮಂಗನ ಬಾವು ಬಂದರೆ ಅದು ಮತ್ತೆ ಬರುವುದಿಲ್ಲ. ಜೀವಮಾನಪರ್ಯಂತ ನಿರೋಧತೆ ಬಂದಿರುತ್ತದೆ. ಮಂಗನ ಬಾವು ಕೆಲವು ಸಲ ಮೆದುಳಿನ ಸೋಂಕಿಗೆ ಕಾರಣವಾಗಬಹುದು (ಎನ್ಸೆಫಲೆಟಿಸ). ಅದು ಬಹು ಗಂಭೀರವಾದ ಸಮಸ್ಯೆ ತರಡು ಬೀಜಗಳ ಸೋಂಕಿಗೆ ಒಳಗಾದರೆ ಬಂಜೆತನ ಬರಬಹುದು ಎಂದು ವೈದ್ಯಕೀಯ ವರದಿಯಿಂದ ತಿಳಿದುಬರುತ್ತದೆ.

ಈ ವರದಿ‌ ಓದಿದ್ದೀರಾ? ಧಾರವಾಡ | ಗೋವಾ ಕಡೆಗೆ ಹೊರಟಿದ್ದ ಗೂಡ್ಸ್ ಲಾರಿಗೆ ಆಕಸ್ಮಿಕ ಬೆಂಕಿ

ಈಗಾಗಲೇ ವಸತಿ ನಿಲಯಕ್ಕೆ ತಾಲೂಕು ವೈದ್ಯಾಧಿಕಾತಿ ಭೆಟ್ಟಿನೀಡಿ ಪರಿಶೀಲನೆ ನಡೆಸಿ, ಸೋಂಕಿನ ಲಕ್ಷಣವುಳ್ಳ ಮಕ್ಕಳನ್ನು ಪಾಲಕರ ಕೈಗೆ ಒಪ್ಪಿಸಿದ್ದಾರೆ. ಪ್ರಾರಂಭದಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡು ಬಳಿಕ ಮುಖದ ಮೇಲೆ, ಗಂಟಲಿನಲ್ಲಿ ಬಾವು ಕಾಣಿಸುತ್ತದೆ. ಸರ್ಕಾರ ಈ ಕುರಿತು ಗಮನ ಹರಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ, ರೋಗ ಹೆಚ್ಚು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...