ಉತ್ತರ ಕನ್ನಡ | ಸಾವಯವ ಪದ್ಧತಿಯಲ್ಲಿ ಅಡಕೆ ಕೃಷಿ: ಯುವರೈತನ ಯಶೋಗಾಥೆ

Date:

ಅಂದುಕೊಂಡಿದ್ದು ಸರ್ಕಾರಿ ನೌಕರರು ಆಗಬೇಕೆಂದು, ಆಗಿದ್ದು ಮಾತ್ರ ಕೃಷಿಕ. ಆದರೆ ಇವತ್ತು ಸುತ್ತಮುತ್ತಲಿನ ಊರಿನ ರೈತರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಜನರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಿದ್ದಾರೆ. 

ಕೃಷಿಯಲ್ಲಿ ಲಾಭ ಕಡಿಮೆ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಹಲವು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಇವರ ಮಧ್ಯೆ ಕೃಷಿಯಲ್ಲಿ ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಹೊಂದಬಹುದು ಎನ್ನುವುದಕ್ಕೆ ಬಸವರಾಜ ನಡುವಿನಮನಿ ಅವರು ಮಾದರಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯುವ ಕೃಷಿಕರಾಗಿರುವ ಇವರು ತಮ್ಮ ಜಮೀನಿನಲ್ಲಿ ಸಾವಯವ ಸಂಸ್ಕರಣಾ ಘಟಕ ಸ್ಥಾಪಿಸಿ, ಬಹುಪಾಲು ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತ ಉತ್ತಮ ಫಸಲು ಪಡೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಸಾವಯವ ಗೊಬ್ಬರದೊಂದಿಗೆ ರಾಸಾಯನಿಕ ಗೊಬ್ಬರವನ್ನೂ ಉಪಯೋಗಿಸುತ್ತಾರೆ. ಸುಮಾರು 63 ಎಕರೆ ಜಮೀನಿನಲ್ಲಿ ಅಡಕೆ, ಶ್ರೀಗಂಧ, ಮಹಾಗನಿ, ರಕ್ತ ಚಂದನ, ಕರಿಬೇವು, ಕಾಳು ಮೆಣಸು, ಏಲಕ್ಕಿ, ಹಲಸು, ಕಾಫಿ, ತೆಂಗು, ಮೆಕ್ಕೆಜೋಳ ಸೇರಿದಂತೆ ಮುಂತಾದ ಬೆಳೆಗಳನ್ನು ಬೆಳೆದು ಅಧಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಹೈನುಗಾರಿಕೆ, ಜೇನು ಸಾಕಾಣಿಕೆಯೂ ಕೂಡಾ ಕೈಹಿಡಿದಿದೆ.

ರೈತ ಬಸವರಾಜ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಕೃಷಿ ಕಾಡು ಕರ್ತಾರು ಪ್ರಶಸ್ತಿ, ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಜಿಲ್ಲಾ ಮಟ್ಟದ ಯುವ ಶ್ರೇಷ್ಠ ಕೃಷಿಕ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯದ ರಾಜ್ಯಮಟ್ಟದ ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಶ್ರೇಷ್ಠ ಕೃಷಿಕ ಪ್ರಶಸ್ತಿ, ದೆಹಲಿಯ ಕೃಷಿ ಜಾಗರಣ ಅಸೋಸಿಯೇಷನ್ ನೀಡುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ(ಎಂಎಸ್‌ಒಐ) ಪ್ರಶಸ್ತಿ, ಅಂಕೋಲಾದ ಗಾಂವಕರ್ ಮೆಮೋರಿಯಲ್ ಫೌಂಡೇಶನ್ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ. ಇದಲ್ಲದೇ ಅನೇಕ ಸಂಘ-ಸಂಸ್ಥೆಗಳೂ ಕೂಡ ಗೌರವಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಸವರಾಜ ಅವರು ರೈತರು ಅರಣ್ಯ ಕೃಷಿಯನ್ನು ಮಾಡಿ ಆರ್ಥಿಕವಾಗಿ ಸಬಲರಾಗಲಿ ಎಂಬ ಉದ್ದೇಶದಿಂದ ವಿಶ್ವ ಪರಿಸರ ದಿನದಂದು ತಮ್ಮ ತೋಟದಲ್ಲಿ ರೈತರನ್ನು ಸೇರಿಸಿ ಅರಣ್ಯ ಕೃಷಿ ಮಹತ್ವವನ್ನು ತಿಳಿಸಿ, ಉಚಿತವಾಗಿ ಸಸಿಗಳನ್ನು ನೀಡುತ್ತ ಬರುತ್ತಿದ್ದಾರೆ.

ಇದಲ್ಲದೇ ಕೃಷಿ ಕಾರ್ಯಕ್ರಮ, ಕೃಷಿ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರೈತರಿಗೆ ತಿಳುವಳಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಇವರು ಅಂದುಕೊಂಡಿದ್ದು ಸರ್ಕಾರಿ ನೌಕರರು ಆಗಬೇಕೆಂದು, ಆಗಿದ್ದು ಮಾತ್ರ ಕೃಷಿಕ. ಆದರೆ ಇವತ್ತು ಸುತ್ತಮುತ್ತಲಿನ ಊರಿನ ರೈತರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಜನರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಿದ್ದಾರೆ. ಇದೀಗ ಕೃಷಿಯಲ್ಲಿ ಯಶಸ್ಸು ಗಳಿಸಿ ಸಾಧಕ ಕೃಷಿಕ ಎನಿಸಿದ್ದಾರೆ.

ರೈತ ಬಸವರಾಜ ನಡುವಿನಮನೆ

ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಬಸವರಾಜ ನಡುವಿನಮನಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದ ನಿವಾಸಿ ಬಸವರಾಜ ಅವರು ರೈತನ ಮಗನಾದರೂ ತನ್ನ ತಂದೆಯ ಆಸೆಯಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ದೊಡ್ಡ ಕನಸು ಕಂಡಿದ್ದರು. ಆದರೆ, ಸಬ್ ಇನ್‌ಸ್ಪೆಕ್ಟರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಪಟ್ಟಿಯಲ್ಲಿ ಹೆಸರು ಬಾರದ ಕಾರಣ ಕೃಷಿಯತ್ತ ಮುಖ ಮಾಡಿ, ಅಮೋಘ ಸಾಧನೆ ಮಾಡಿದ್ದಾರೆ. ಇಂದು ಬಸವರಾಜ ಅವರು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

ತಂದೆ ರೈತರಾಗಿದ್ದು, ತಮ್ಮ ಮಕ್ಕಳು ವಿದ್ಯಾವಂತರಾಗಿ ಉನ್ನತ ಅಧಿಕಾರಿಗಳಾಗಬೇಕೆಂಬ ಕನಸು ಕಂಡಿದ್ದರು. ಅದರಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

ಬಸವರಾಜ ನಡುವಿನಮನೆ

“2012ರಲ್ಲಿ ಧಾರವಾಡಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದೆ. 2017ರಲ್ಲಿ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಅಂತಿಮ ಸಂದರ್ಶನದಲ್ಲಿ ಕಾರಣಾಂತರಗಳಿಂದ ನೇಮಕಗೊಳ್ಳಲಿಲ್ಲ. ಇದಾದ ಬಳಿಕ ದಿಕ್ಕೇ ತೋಚದಂತಾಯಿತು. ಆಮೇಲೆ ತನ್ನ ಗುರಿಯನ್ನು ಬದಲಾಯಿಸಿಕೊಂಡು ಕೃಷಿಕನಾಗಬೇಕು ಎಂದು ಬಯಸಿದೆ. ಈ ನಿರ್ಧಾರಕ್ಕೆ ಪೋಷಕರು, ಸಹೋದರರು, ಸ್ನೇಹಿತರು, ನೆರೆಹೊರೆಯವರು ಆಶ್ಚರ್ಯ ವ್ಯಕ್ತಿಪಡಿಸಿದರು. ಆಲ್ಲದೆ ಕೃಷಿ ಮಾಡುವುದು ಸುಲಭದ ಕೆಲಸವಲ್ಲ. ಮತ್ತೊಮ್ಮೆ ಆಲೋಚಿಸು ಎಂಬಂತಹ ಸಲಹೆ ನೀಡಿದ್ದರು. ಇದ್ಯಾವುದಕ್ಕೂ ಕಿವಿ ಕೊಡದೆ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಹಠಕ್ಕೆ ಬಿದ್ದೆ. ಹಾಗಾಗಿ ನನ್ನ ತಂದೆ ಈರಯ್ಯ ಹಾಗೂ ಸಮಸ್ತ ಕುಟುಂಬಸ್ಥರು ನೆರವಿಗೆ ನಿಂತರು” ಎಂವುದು ಬಸವರಾಜ ಅವರ ಮಾತುಗಳು.

“ಮನೆಯವರ ನೆರವಿನಂತೆ ಪ್ರಾಯೋಗಿಕವಾಗಿ ಮೊದಲಿಗೆ ನಮ್ಮ ತಂದೆಯೊಂದಿಗೆ ಜಮೀನಿನಲ್ಲಿ ದುಡಿದೆ. ಈ ವೇಳೆ ಅಡಕೆ ಬೆಳೆಯನ್ನು ನೆಟ್ಟಿದ್ದೆವು. ಆದರೆ, ರಾಸಾಯನಿಕ ಗೊಬ್ಬರ ಸಿಂಪಡಣೆ ಹಾಗೂ ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದ ಬೆಳೆಗಳು ಹಾನಿಯಾಗಿದ್ದವು. ಆದರೂ, ಕುಗ್ಗಲಿಲ್ಲ. ಸೋಲೇ ಯಶಸ್ಸಿನ ಮೊದಲ ಮೆಟ್ಟಿಲು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಿದೆ. ಬಳಿಕ ಹುಲಿಹೊಂಡದ 63 ಎಕರೆ ಜಮೀನಿನಲ್ಲಿ ಕೃಷಿ ಮಾಡಿ, ಈಗ ಆರೋಗ್ಯಕರ ಬೆಳೆ ಬೆಳೆದಿದ್ದೇನೆ. ಇದಕ್ಕಾಗಿ ವಿವಿಧ ಕ್ಷೇತ್ರಗಳಿಗೆ ಭೇಟಿ ಮಾಹಿತಿ ಸಂಗ್ರಹಿಸಿದೆ, ಅಲ್ಲದೆ ವ್ಯವಸಾಯದಲ್ಲಿ ಪರಿಣಿತರಾಗಿರುವ ನನ್ನ ತಂದೆಯವರಿಂದಲೂ ಸಲಹೆ ಪಡೆದುಕೊಂಡಿದ್ದೇನೆ” ಎಂದರು.

“ಈ ಸಲ ಮುಂಗಾರು ಪೂರ್ವ ಮಳೆ ಹಾಗೂ ಬೇಸಿಗೆ ಕಾಲದಲ್ಲಿ ವಿಪರೀತ ಬಿಸಿಲಿನಿಂದ ಹಾಗೂ ಅದು ಸಾಲದೆಂಬಂತೆ ಬಿಟ್ಟೂ ಬಿಡದೆ ಈಗ ಸುರಿಯುತ್ತಿರುವ ಮಳೆಯಿಂದ ರೈತರು ಹೈರಾಣಾಗಿದ್ದಾರೆ. ಆ ಸಾಲಿನಲ್ಲಿ ರೈತರು ಅಡಕೆ ಬೆಳೆಯಿಂದ ನಷ್ಟ ಸಂಭವಿಸುವ ಭಯದಲ್ಲಿದ್ದಾರೆ. ಇನ್ನೂ 15ದಿನ ಇದೇ ರೀತಿ ಮಳೆ ಮುಂದುವರೆದರೆ ಅಡಕೆ ಸಂಪೂರ್ಣವಾಗಿ ನಾಶವಾಗುತ್ತದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಿ‌ಬೇಕು. ನಷ್ಟ ಅನುಭವಿಸಿದ ಬೆಳೆಗಳನ್ನು ಸಮೀಕ್ಷೆ ಮಾಡಿಸಿ, ಬೆಳೆವಿಮೆ ಮಾಡಿಸಿ ಆದಷ್ಟು ಬೇಗ ರೈತರಿಗೆ ಪರಿಹಾರವನ್ನು ನೀಡುವಂತೆ ಬೆಳೆವಿಮೆ ಕಂಪನಿಗಳಿಗೆ ಸೂಚಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿದ್ದೀರಾ? ಉಡುಪಿ | ಸ್ಥಳ ಪರಿಶೀಲನೆ ಮಾಡದೆ ಸಾಲ ನೀಡಿದ್ದ ಬ್ಯಾಂಕ್? ಎರಡು ಕುಟುಂಬಗಳು ಬೀದಿಪಾಲು !

“ಇತ್ತಿಚಿನ ದಿನಗಳಲ್ಲಿ ಹಾರ್ಡ್ ವರ್ಕ್ ಜತೆಗೆ ಸ್ಮಾರ್ಟ್ ವರ್ಕ್ ಕೂಡಾ ಮುಖ್ಯವಾಗಿದೆ. ಈ ದಿಸೆಯಲ್ಲಿ ಹಿಡಿದ ಕೆಲಸವನ್ನು ಶ್ರದ್ದೆ, ಭಕ್ತಿ, ಪ್ರಮಾಣಿಕತೆಯಿಂದ ಮಾಡಬೇಕು. ಇದರಿಂದ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕೃಷಿ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಇಂಗಿತವೂ ಇದೆ” ಎಂಬುದು ಆಧುನಿಕ ರೈತ ಬಸವರಾಜ ಅವರ ಅಭಿಪ್ರಾಯವಾಗಿದೆ.

ಸಾವಯವ ಕೃಷಿಯ ಜೊತೆಗೆ ಇತ್ತೀಚಿನ ಕೃಷಿ ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯಕರ ಬೆಳೆಗಳನ್ನು ಬೆಳೆಸಲು ಪುಸ್ತಕಗಳು ಮತ್ತು ಆನ್‌ಲೈನ್ ಮೂಲಕ ಮಾಹಿತಿ ಪಡೆದುಕೊಂಡಿದ್ದು, ಅಡಕೆಯಿಂದ ಕೈ ಸುಟ್ಟುಕೊಂಡ ಬಳಿಕ ಕೃಷಿಯಲ್ಲಿ ವೈಜ್ಞಾನಿಕ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅರಣ್ಯ ಕೃಷಿ ಮಾಡಿ ಇಂದು ರಾಜ್ಯದ ಪ್ರಗತಿ ಪರ ಯುವ ರೈತರಾಗಿ ಹೊರ ಹೊಮ್ಮಿದ್ದಾರೆ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...