ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೂಕಾರ ಗ್ರಾಮದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಅಲೆಯುತ್ತಿದ್ದ ಕೇರಳ ಮೂಲದ ನಟರಾಜ ಮಲಬಾರಿ ಎನ್ನುವ ವೃದ್ಧ ವ್ಯಕ್ತಿಯನ್ನು ರಕ್ಷಿಸಿ ತಾಲೂಕಿನ ಮುಗದೂರು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಂಡಿದ್ದಾರೆ.
ಈ ಕುರಿತು ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಮಾತನಾಡಿ, ಹಲವು ವರ್ಷಗಳಿಂದ ಹೂಕಾರ ಗ್ರಾಮದಲ್ಲಿ ಅನಾಥ ಸ್ಥಿತಿಯಲ್ಲಿ ಇದ್ದ ವೃದ್ಧ ವ್ಯಕ್ತಿಗೆ ಗ್ರಾಮದ ನಾಗರೀಕರು ಊಟ ನೀಡಿ ಆಶ್ರಯ ನೀಡಿದ್ದಾರೆ. ಈಗ ಈ ವೃದ್ಧನು ಹಲವು ಕಾಯಿಲೆಗಳಿಂದ ಬಳಲುತ್ತಿರುವುದರಿಂದ ಆತನ ಮುಂದಿನ ಜೀವನಾಧಾರಕ್ಕೆ ನಮ್ಮ ಅನಾಥಾಶ್ರಮಕ್ಕೆ ಸೇರಿಸುವಂತೆ ಹೂಕಾರಿನ ದಯಾನಂದ ಗೊವಿಂದ ನಾಯ್ಕ ಮತ್ತು ಲಕ್ಷ್ಮಣ ಗೋವಿಂದ ನಾಯ್ಕ ಎನ್ನುವವರು ಸಿದ್ದಾಪುರ ಪೋಲೀಸ್ ಠಾಣೆಗೆ ಮನವಿ ಮಾಡಿಕೊಂಡಿದ್ದರು. ಸಿದ್ದಾಪುರ ಪೋಲೀಸರುಆ ವೃದ್ಧನನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ಕೇಳಿದರು. ನಾನು ಹೋಗಿ ಆಶ್ರಮಕ್ಕೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದೆನೆ ಎಂದರು.
ಈ ವ್ಯಕ್ತಿಯು ತನ್ನ ಹೆಸರನ್ನು ನಟರಾಜ ಮಲಬಾರಿ ಎಂದು ಹೇಳುತ್ತಿದ್ದು, ತಾನು ಕಳೆದ 50 ವರ್ಷಗಳ ಹಿಂದೆ ಗಾರೆ ಕೆಲಸಕ್ಕಾಗಿ ಕೇರಳದಿಂದ ಸಿದ್ದಾಪುರಕ್ಕೆ ಬಂದಿದ್ದಾಗಿ ತಿಳಿದು ಬಂದಿದೆ. ತಾಲೂಕು ಸರಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣದಲ್ಲಿ, ಎಂ ಜಿ ಸಿ ಕಾಲೇಜಿನ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಈಗ ಈ ವೃದ್ಧ ವ್ಯಕ್ತಿ ವಯಸ್ಸಾದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದು ಕೆಲಸ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಈ ವರದಿ ಓದಿದ್ದೀರಾ? ಧಾರವಾಡ | ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಹುದ್ದಗಳಿಗೆ ಅರ್ಜಿ ಆಹ್ವಾನ
ಈ ವೃದ್ಧ ವ್ಯಕ್ತಿಯ ಬಂಧುಗಳು ಅಥವಾ ಪರಿಚಯದವರು ಇದ್ದರೆ 8073197439, 9481389187 ಈ ನಂಬರ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.





