ಬರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಭಾರತೀಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರು ಮತ್ತು ಕರಾವಳಿ ಭಾಗಗಳ ನಡುವೆ ಸಂಚರಿಸಲು ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆ ಮಾಡಿದೆ.
ನೈರುತ್ಯ ರೈಲ್ವೆಯು ಈ ಸಮಯದಲ್ಲಿ ಹೆಚ್ಚುವರಿ ಒತ್ತಡವನ್ನು ತಗ್ಗಿಸಲು ಯಶವಂತಪುರದಿಂದ ಮಡಗಾಂವ್‌ಗೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 06541 ಯಶವಂತಪುರ-ಮಡಗಾಂವ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 14ರಂದು (ಗುರುವಾರ) ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಟು, ಆಗಸ್ಟ್ 15ರಂದು (ಶುಕ್ರವಾರ) ಸಂಜೆ 6:05ಕ್ಕೆ ಮಡಗಾಂವ್ ತಲುಪಲಿದೆ.
ರೈಲು ಸಂಖ್ಯೆ 06542 ಮಡಗಾಂವ್-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 17ರಂದು (ಭಾನುವಾರ) ರಾತ್ರಿ 10:15ಕ್ಕೆ ಮಡಗಾಂವ್‌ನಿಂದ ಹೊರಟು, ಆಗಸ್ಟ್ 18ರಂದು (ಸೋಮವಾರ) ಸಂಜೆ 4:30ಕ್ಕೆ ಯಶವಂತಪುರಕ್ಕೆ ಹಿಂದಿರುಗಲಿದೆ.

ಈ ರೈಲುಗಳು ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಸುರತ್ಕಲ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಹಾಗೂ ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಂತು ಸಾಗಲಿವೆ.
ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ
ಈ ನಿಲುಗಡೆಗಳು ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಜನರಿಗೆ ನೇರವಾಗಿ ಅನುಕೂಲವಾಗಲಿವೆ. ಈ ವಿಶೇಷ ರೈಲುಗಳ ಘೋಷಣೆಯಿಂದ ಬೆಂಗಳೂರಿನಿಂದ ಕರಾವಳಿ ಮತ್ತು ಉತ್ತರ ಕನ್ನಡದ ಭಾಗಗಳಿಗೆ ಪ್ರಯಾಣಿಸಲು ಯೋಜಿಸುತ್ತಿರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಮೂಲಕ ಪ್ರಯಾಣಿಕರು ಸುಲಭವಾಗಿ ತಮ್ಮ ತವರುಗಳಿಗೆ ತೆರಳಬಹುದಾಗಿದೆ.





