ಉತ್ತರ ಕನ್ನಡ | ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ

Date:

ಉತ್ತರ ಕನ್ನಡ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಕರಡು ಮೀಸಲಾತಿ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಸಲು ಕೇವಲ ಏಳು ದಿನಗಳಾವಕಾಶ ನೀಡಿರುವುದು ಇದೀಗ ಸಾರ್ವಜನಿಕರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಕಣ್ಣಿಟ್ಟಿದ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರ ಅವಧಿ ಮುಗಿಸಿರುವ ಕಾರವಾರ ಮತ್ತು ಶಿರಸಿ ನಗರಸಭೆಯ 62 ವಾರ್ಡ್‌ಗಳು, ಹಳಿಯಾಳ, ಕುಮಟಾ ಮತ್ತು ಅಂಕೋಲಾ ಪುರಸಭೆಯ 66 ವಾರ್ಡ್‌ಗಳು, ಸಿದ್ದಾಪುರ, ಮುಂಡಗೋಡ ಮತ್ತು ಹೊನ್ನಾವರ ಪಟ್ಟಣ ಪಂಚಾಯಿತಿಗಳ 54 ವಾರ್ಡ್‌ಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗಿದೆ.

ಆದರೆ, ದಾಂಡೇಲಿ ನಗರಸಭೆ ಮತ್ತು ಯಲ್ಲಾಪುರ ಪಟ್ಟಣ ಪಂಚಾಯಿತಿಯ ಮೀಸಲಾತಿ ಪಟ್ಟಿ ಪ್ರಕಟವಾಗಿಲ್ಲ. ಭಟ್ಕಳ ಪುರಸಭೆ ನಗರಸಭೆ ಮಟ್ಟಕ್ಕೆ ಏರಿಕೆಯಾದ ಕಾರಣದಿಂದ ಹಾಗೂ ಜಾಲಿ ಪಟ್ಟಣ ಪಂಚಾಯಿತಿಯ ಅಧಿಕಾರ ಅವಧಿ ಇನ್ನೂ ಪೂರ್ಣಗೊಳ್ಳದ ಕಾರಣದಿಂದ ಪಟ್ಟಿ ಪ್ರಕಟಿಸಲಾಗಿಲ್ಲ. ರಾಜ್ಯ ಸರ್ಕಾರವು ನವೆಂಬರ್ 10 ರಂದು ಹೊರಡಿಸಿದ ಅಧಿಸೂಚನೆಯನ್ವಯ, ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಈ ಕರಡು ಮೀಸಲಾತಿಗೆ ಏಳು ದಿನಗಳೊಳಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಕ್ರಮವನ್ನು ವಾರ್ಡ್ ಚುನಾವಣೆಯ ಆಕಾಂಕ್ಷಿಗಳು ಮತ್ತು ಹಾಲಿ ಸದಸ್ಯರು ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಪ್ರಕಟಿಸಿರುವ ಪಟ್ಟಿ ಅನೇಕ ತಪ್ಪುಗಳನ್ನು ಒಳಗೊಂಡಿದೆ. ಕೇವಲ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ತಿಳಿಸಿರುವುದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಈ ಕಾಲಾವಕಾಶ ಸಾಲುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆಡಳಿತಾಧಿಕಾರಿ ನೇಮಕಾತಿ ಕುರಿತು ಕೋರ್ಟ್ ತಡಯಾಜ್ಞೆ ನೀಡಿರುವ ನಡುವೆಯೇ ನಗರಾಭಿವೃದ್ಧಿ ಇಲಾಖೆ ಕರಡು ಪಟ್ಟಿ ಪ್ರಕಟಿಸಿರುವುದೂ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರು ಸರ್ಕಾರದ ಈ ಕ್ರಮವನ್ನು ಪರಿಶೀಲನೆ ನಡೆಸಿ, ಆಕ್ಷೇಪಣೆ ಸಲ್ಲಿಸಲು ಸಮಯ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ಮಿಸಲಾತಿ ಪಟ್ಟಿ ಈ ಕೆಳಗಿನಂತಿದೆ: ಕಾರವಾರ ನಗರಸಭೆ: ವಾರ್ಡ್ ನಂ.2, 4, 8, 9, 15, 16, 20, 21 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ವಾರ್ಡ್‌ ನಂ.6, 12, 18, 23, 24, 25, 28, 29 ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಿದೆ. 1, 7, 14, 19, 26 ಹಿಂದುಳಿದ ವರ್ಗ (ಎ) ಮಹಿಳೆಯರಿಗೆ ಮೀಸಲಿದ್ದರೆ, 11, 17, 22, 27 ಮತ್ತು 30 ಹಿಂದುಳಿದ ವರ್ಗ (ಎ) ಮೀಸಲಿದೆ. 3 ಹಿಂದುಳಿದ ವರ್ಗ (ಬಿ) ಮಹಿಳೆ, 13 ಹಿಂದುಳಿದ ವರ್ಗ (ಬಿ) ಸ್ಥಾನಕ್ಕೆ ಮೀಸಲಾಗಿದೆ. 5 ಪರಿಶಿಷ್ಟ ಪಂಗಡಕ್ಕೆ, 10 ಪ.ಜಾತಿ ಮಹಿಳೆಗೆ, 31 ಪ.ಜಾತಿಗೆ ಮೀಸಲಾಗಿದೆ. ಶಿರಸಿ ನಗರಸಭೆ ವಾರ್ಡ್ ನಂ.5, 7, 12, 13, 16, 17,22, 23 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ವಾರ್ಡ್‌ ನಂ.10, 15, 20, 25, 27, 29, 30 ಸಾಮಾನ್ಯ ಮಹಿಳೆಗೆ ಮೀಸಲಿದೆ. 4, 21, 26, 28 ಹಿಂದುಳಿದ ವರ್ಗ (ಎ) ಮಹಿಳೆಯರಿಗೆ ಮೀಸಲಿದ್ದರೆ, 8, 14, 18, 24 ಹಿಂದುಳಿದ ವರ್ಗ (ಎ) ಮೀಸಲಿದೆ. 6 ಹಿಂದುಳಿದ ವರ್ಗ (ಬಿ) ಮಹಿಳೆ, 11 ಹಿಂದುಳಿದ ವರ್ಗ (ಬಿ) ಸ್ಥಾನಕ್ಕೆ ಮೀಸಲಾಗಿದೆ. 2, ಪರಿಶಿಷ್ಟ ಪಂಗಡಕ್ಕೆ, 3, 19 ಪ.ಜಾತಿ ಮಹಿಳೆಗೆ, 1 ಮತ್ತು 9ಪ.ಜಾತಿಗೆ ಮೀಸಲಾಗಿದೆ. (ಕುಮಟಾ ಪುರಸಭೆ:) ಸಾಮಾನ್ಯ ವರ್ಗಕ್ಕೆ (ವಾರ್ಡ್‌ ನಂ.2, 4, 10, 11, 14, 15), ಸಾಮಾನ್ಯ ಮಹಿಳೆಗೆ (ವಾರ್ಡ್ ನಂ.6, 13, 16, 18, 22, 23), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್‌ ನಂ.1, 17, 19), ಹಿಂದುಳಿದ ವರ್ಗ (ಎ) (ವಾರ್ಡ್ ನಂ.5, 12, 21), ಹಿಂದುಳಿದ ವರ್ಗ (ಬಿ) ಮಹಿಳೆ (ವಾರ್ಡ್‌ ನಂ.3), ಹಿಂದುಳಿದ ವರ್ಗ (ಬಿ) (ವಾರ್ಡ್ ನಂ.7), ಪರಿಶಿಷ್ಟ ಪಂಗಡ (ವಾರ್ಡ್ ನಂ.8), ಪ.ಜಾತಿ ಮಹಿಳೆ (ವಾರ್ಡ್ ನಂ.20), ಪ.ಜಾತಿ (ವಾರ್ಡ್‌ ನಂ.9).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಕಾರವಾರ | ಆನ್‌ಲೈನ್‌ ಟ್ರೇಡಿಂಗ್‌ ಮೋಸದ ಬಲೆಗೆ ಸಿಕ್ಕು 59 ಲಕ್ಷ ಕಳೆದುಕೊಂಡ ಹೊಟೇಲ್ ಉದ್ಯಮಿ

ಹಳಿಯಾಳ ಪುರಸಭೆ ಸಾಮಾನ್ಯ ವರ್ಗಕ್ಕೆ (ವಾರ್ಡ್ ನಂ.1, 2, 6, 7, 11, 12), ಸಾಮಾನ್ಯ ಮಹಿಳೆಗೆ (ವಾರ್ಡ್ ನಂ.3, 9, 14, 20, 22, 23), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್‌ ನಂ.5, 10, 15), ಹಿಂದುಳಿದ ವರ್ಗ (ಎ) (ವಾರ್ಡ್ ನಂ.8, 13, 21), ಹಿಂದುಳಿದ ವರ್ಗ (ಬಿ) (ವಾರ್ಡ್ ನಂ.4), ಪರಿಶಿಷ್ಟ ಪಂಗಡ (ವಾರ್ಡ್ ನಂ.19), ಪ.ಜಾತಿ ಮಹಿಳೆ (ವಾರ್ಡ್‌ ನಂ.18), ಪ.ಜಾತಿ (ವಾರ್ಡ್ 30.16, 17). (ಮುಂಡಗೋಡ ಪ.ಪಂ:) ಸಾಮಾನ್ಯ ವರ್ಗಕ್ಕೆ (ವಾರ್ಡ್‌ ನಂ.1, 2, 8, 9, 11), ಸಾಮಾನ್ಯ ಮಹಿಳೆಗೆ (ವಾರ್ಡ್ ನಂ.5, 10, 15, 17, 19), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್ ನಂ.7), ಹಿಂದುಳಿದ ವರ್ಗ (ಎ) (ವಾರ್ಡ್ ನಂ.3, 12), ಹಿಂದುಳಿದ ವರ್ಗ (ಬಿ) (ವಾರ್ಡ್‌ ನಂ.6), ಪರಿಶಿಷ್ಟ ಪಂಗಡ (ವಾರ್ಡ್ ನಂ.18), ಪ.ಜಾತಿ ಮಹಿಳೆ (ವಾರ್ಡ್‌ ನಂ.13, 14), ಪ.ಜಾತಿ (ವಾರ್ಡ್ ನಂ.4). (ಸಿದ್ದಾಪುರ ಪ.ಪಂ:) ಸಾಮಾನ್ಯ ವರ್ಗಕ್ಕೆ (ವಾರ್ಡ್ ನಂ.2, 3, 9, 10), ಸಾಮಾನ್ಯ ಮಹಿಳೆಗೆ (ವಾರ್ಡ್ ನಂ.5, 12, 13, 15), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್ ನಂ.1, 14), ಹಿಂದುಳಿದ ವರ್ಗ (ಎ) (ವಾರ್ಡ್ ನಂ.4, 11), ಹಿಂದುಳಿದ ವರ್ಗ (ಬಿ) (ವಾರ್ಡ್ ನಂ.8), ಪರಿಶಿಷ್ಟ ಪಂಗಡ (ವಾರ್ಡ್‌ ನಂ.6), ಪ.ಜಾತಿ (ವಾರ್ಡ್ ನಂ.7).

(ಹೊನ್ನಾವರ ಪ.ಪಂ:) ಸಾಮಾನ್ಯ ವರ್ಗಕ್ಕೆ (ವಾರ್ಡ್ ನಂ.1, 3, 8, 9, 14), ಸಾಮಾನ್ಯ ಮಹಿಳೆಗೆ (ವಾರ್ಡ್‌ ನಂ.5, 11, 15, 16, 17), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್‌ ನಂ.7, 13, 18), ಹಿಂದುಳಿದ ವರ್ಗ (ಎ) (ವಾರ್ಡ್ ನಂ.4, 10, 19), ಹಿಂದುಳಿದ ವರ್ಗ (ಬಿ) ಮಹಿಳೆ (ವಾರ್ಡ್ ನಂ.2), ಹಿಂದುಳಿದ ವರ್ಗ (ಬಿ) (ವಾರ್ಡ್ ನಂ.12), ಪರಿಶಿಷ್ಟ ಪಂಗಡ (ವಾರ್ಡ್‌ ನಂ.20), ಪ.ಜಾತಿ (ವಾರ್ಡ್.6). (ಅಂಕೋಲಾ ಪುರಸಭೆ:) ಸಾಮಾನ್ಯ ವರ್ಗಕ್ಕೆ (ವಾರ್ಡ್‌ನಂ.2, 6, 11, 12, 15, 16), ಸಾಮಾನ್ಯ ಮಹಿಳೆಗೆ (ವಾರ್ಡ್ ನಂ.8, 14, 19, 20, 21, 23), ಹಿಂದುಳಿದ ವರ್ಗ (ಎ) ಮಹಿಳೆಗೆ (ವಾರ್ಡ್ ನಂ.1, 10), ಹಿಂದುಳಿದ ವರ್ಗ (ಎ) (ವಾರ್ಡ್ ನಂ.7, 13, 18), ಹಿಂದುಳಿದ ವರ್ಗ (ಬಿ) (ವಾರ್ಡ್ ನಂ.9), ಪರಿಶಿಷ್ಟ ಪಂಗಡ (ವಾರ್ಡ್ ನಂ.17), ಪ.ಜಾತಿ ಮಹಿಳೆ (ವಾರ್ಡ್‌ ನಂ.3, 4), ಪ.ಜಾತಿ (ವಾರ್ಡ್ ನಂ.5).

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...