ಉತ್ತರ ಕನ್ನಡ | ನಗರಸಭೆ ಅಧಿಕಾರಿಗಳಿಂದಲೇ ನೀರಿನ ಪೈಪ್ ಕಳ್ಳತನ

Date:

ಬೇಲಿಯೇ ಎದ್ದು ಹೊಲ ಮೇಯ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಸಭೆಯಲ್ಲಿ ಜರುಗಿದೆ. ಕಬ್ಬಿಣದ ಪೈಪ್ ಗಳನ್ನು ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಚುನಾಯಿತ ಸದಸ್ಯರು ಸೇರಿ ಮಾರಾಟ ಮಾಡಿರುವ ಪ್ರಕರಣ ತನಿಖೆಯಿಂದ ಹೊರಬಿದ್ದಿದೆ. 

ಫೆಬ್ರವರಿ 20 ರಿಂದ 27ರವರೆಗೆ ಶಿರಸಿ ನಗರಸಭೆಗೆ ಸೇರಿದ ಕೆಂಗ್ರಿ ನೀರು ಸರಬರಾಜು ಕೇಂದ್ರದಿಂದ ಹುತ್ಗಾರ ಪಂಪಿನ ಘಟಕಕ್ಕೆ 1969 ನೇ‌ ಸಾಲಿನಲ್ಲಿ ಸುಮಾರು 8 ಕಿಮೀ ಭೂಮಿ ಒಳಗಡೆ 900 ಮೀ. ಉದ್ದದ 116 ಕಬ್ಬಿಣದ ಪೈಪ್ ಗಳನ್ನು ಅಳವಡಿಸಲಾಗಿತ್ತು. ಇದನ್ನು ಗುಜರಿ ಗುತ್ತಿಗೆದಾರ ಸೈಯದ್ ಜಕ್ರಿಯಾ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ನಗರಸಭೆ ಜೆಇ ಸುಫಿಯಾನ ಅಹ್ಮದ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಮಾಡಿದ ಸಂದರ್ಭದಲ್ಲಿ ದೂರುದಾರ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ ಎಂದು ಎಸ್‌ಪಿ ಎಂ ನಾರಾಯಣ ಹೇಳಿದ್ದಾರೆ.

ಶಿರಸಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಕಾರಿಪುರದ‌ ಗುಜರಿ ಗುತ್ತಿಗೆದಾರ ಸೈಯದ್ ಜಕ್ರಿಯಾ ನನ್ನು ಬಂಧಿಸಿ ತನಿಖೆ ಮಾಡಿದ ಸಂದರ್ಭದಲ್ಲಿ ಈ ಪ್ರಕರಣ ಹೊರಗೆ ಬಿದ್ದಿದೆ. ಬಂಧನದ ಸಂದರ್ಭದಲ್ಲಿ ಆರೋಪಿಯಿಂದ 7.02 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತನು ಪೌರಾಯುಕ್ತ ಎಚ್ ಕಾಂತರಾಜ್ ಎಇಇ, ಪ್ರಶಾಂತ್ ವೇರ್ಣೆಕರ, ಜೆಇ ಸುಫಿಯಾನ್, ಬ್ಯಾರಿ ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ್ ಬೊರ್ಕೆರ್, ಯಶವಂತ  ಮರಾಠಿ ಇವರುಗಳ ಸಹಕಾರ ಮತ್ತು ಅನುಮತಿಯಿಂದ 116 ಕಬ್ಬಿಣದ  ಪೈಪ್ ಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಗುಜರಿ ಗುತ್ತಿಗೆದಾರ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಎಲ್ಲರನ್ನೂ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ಉತ್ತರ ಕನ್ನಡ | 330 ಗ್ರಂಥಾಲಯ ಸ್ಥಾಪನೆಗೆ ಕೇಂದ್ರ ಅನುಮತಿಸಿದೆ: ಸಂಸದ ಕಾಗೇರಿ

ಪ್ರಕರಣದಲ್ಲಿ ಸರ್ಕಾರಿ ನೌಕರರ ಮತ್ತು ಮೂವರು ಸದಸ್ಯರು ಶಾಮೀಲಾಗಿರುವುದರಿಂದ ಅವರನ್ನು ಸೇವೆಯಿಂದ ವಜಾ ಮಾಡುವ ಅಧಿಕಾರ ಯಾರಿಗೆ ಇದೆ ಎಂದು ಪೌರಾಡಳಿತ ನಿರ್ದೇಶನಾಲದ ನಿರ್ದೇಶಕರಿಗೆ ಕೋರಲಾಗಿದೆ. ಅವರಿಂದ ಮಾಹಿತಿ ಬಂದ‌ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. 

ಆರೋಪಿ ಸೈಯದ್ ಜಕ್ರಿಯಾ ಖಾತೆಯಿಂದ ನಗರಸಭೆ ಸದಸ್ಯ ಯಶವಂತ ಮರಾಠೆ ಖಾತೆಗೆ 1 ಲಕ್ಷ ರೂಪಾಯಿ ಜಮಾ ಆಗಿರುವ ದಾಖಲೆ ಸಂಗ್ರಹಿಸಲಾಗಿದೆ. ಒಟ್ಟು 3 ಜೆಸಿಬಿ, 1 ಕ್ರೇನ್, 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 116 ಕಬ್ಬಿಣದ ಪೈಪ್ ಗಳ ಪ್ರಸ್ತುತ ಮಾರುಕಟ್ಟೆ ಬೆಲೆ ಅಂದಾಜು 21.18 ಲಕ್ಷ ರೂಪಾಯಿ ಎಂದು ವರದಿ ಮಾಡಲಾಗಿದೆ. 

ಡಿಎಸ್ಪಿ ಗೀತಾ ಪಾಟೀಲ್ ಪಿಐಗಳಾದ ಶಶಿಕಾಂತ ವರ್ಮಾ, ಜೆ ಬಿ ಸಿತಾರಾಮ, ಮಂಜುನಾಥ ಗೌಡ, ರಂಗನಾಥ್ ನೀಲಮ್ಮನವರ,  ರಮೇಶ್ ಹಾನಾಪುರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...