ಉತ್ತರ ಕನ್ನಡ | ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆಯವರ ತಪ್ಪೇನು?

Date:

ಉತ್ತರ ಕನ್ನಡದ ಸಂಸದರಾಗಿದ್ದ ಅನಂತ ಕುಮಾರ ಹೆಗಡೆಯವರನ್ನು ಬದಲ‍ಾಯಿಸಿ ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೆ ಸೀಟು ಕೊಡಲಾಗಿದೆ. ಅದಕ್ಕೆ ಕಾರಣ ಒಂದು ಅನಂತ ಕುಮಾರ್ ಹೆಗಡೆ ಏನೂ ಕೆಲಸ ಮಾಡಿಲ್ಲ. ಎರಡನೆಯದು ಅನಂತ ಕುಮಾರ್ ಹೆಗಡೆ ಮತೀಯವಾದದ ಮಾತುಗಳನ್ನೇ ಆಡುತ್ತಾರೆ ಎಂಬುದು.

ಇಲ್ಲಿ ಅನಂತ ಕುಮಾರ ಮೊದಲ ಬಾರಿ ಎಂಪಿಯಾದಾಗ, ಅಥವಾ ಎರಡನೇ ಬಾರಿ ಆಯ್ಕೆಯಾದಾಗ ಬಿಜೆಪಿ ಹೈ ಕಮಾಂಡ್ ಅವರ ಬಳಿ ಸರಿಯಾಗಿ ಕೆಲಸ ಮಾಡುವಂತೆ ಯಾಕೆ ಸೂಚಿಸಲಿಲ್ಲ. ಇದೇ ರೀತಿ ಕೆಲಸ ಮಾಡದ ನೂರು ಎಂಪಿಗಳನ್ನು ಬಿಜೆಪಿ ಬದಲಾಯಿಸಿದೆಯಂತೆ. good, ಹಾಗಾದರೆ ಪ್ರಧಾನಿ ತನ್ನ ಕೈ ಕೆಳಗಿನ ಎಂಪಿ ಗಳನ್ನು ದುಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದೇ ಅರ್ಥ. ಮೋದಿ ನೋಡಿ ವೋಟು ಕೊಟ್ಟದ್ದಲ್ಲವಾ? ಕೆಲಸ ಮಾಡಿಸಬೇಕಾದ ಪ್ರಧಾನಿಯೇ ಫೇಲ್ ಆದ ಮೇಲೆ ಮೋದಿಯನ್ನೇ ಬದಲಾಯಿಸಿ ಎನ್ನುವುದರಲ್ಲಿ ತಪ್ಪೇನಿದೆ?ಕಾಗೇರಿ ಹೆಗಡೆಯವರು ಶಾಸಕರಾಗಿ, ಮಂತ್ರಿಯಾಗಿ ಅಂತಹ ಮಹಾ ಕೆಲಸ ಮಾಡಿದ್ದು ಯಾವುದು? ಅಂಕೋಲ ಕ್ಷೇತ್ರದಲ್ಲಿ ಶಾಸಕರಾಗಿದ್ದ ಇವರು ಅಲ್ಲಿ ಜನರ ಭೇಟಿಗೆ ಒಂದು ಕಚೇರಿಯನ್ನೂ ಮಾಡಿದವರಲ್ಲ. ಹಾಗಾದ ಮೇಲೆ ಇವರಿಗೆ ಯಾಕೆ ವೋಟು ಕೊಡಬೇಕು ಅನ್ನುವುದು ಸ್ಥಳೀಯರ ವಾದ.

ಮೂರನೇ ವಿಷಯ- ಸಂವಿಧಾನ ಬದಲು ಮಾಡುತ್ತೇವೆ, ಅಥವಾ ಹಿಂದೂ ರಾಷ್ಟ್ರ ಇತ್ಯಾದಿ ವಿಷಯ ಅನಂತ ಹೆಗಡೆಯ ಸ್ವಂತ ಮಾತುಗಳಲ್ಲ. ಅದು ಸಂಘ ಪರಿವಾರದ ಮೀಟಿಂಗ್‌ನಲ್ಲಿ ಬಂದಿರುವ ಮತ್ತು ದೇಶದಾದ್ಯಂತ ಬಿಜೆಪಿ ನಾಯಕರು ಹೇಳಿದ ಮಾತುಗಳೇ. ಇದೀಗ ಸ್ವತಃ ಮೋದಿಯವರೇ ಕಮ್ಯೂನಲ್ ಭಾಷಣ ಮಾಡುತ್ತಿದ್ದಾರಲ್ಲವೆ? ಹಾಗಾದರೆ ಅನಂತ ಹೆಗಡೆ, ನಳಿನ್‌, ಪ್ರತಾಪ ಸಿಂಹ, ಸಿ ಟಿ ರವಿ ಅವರುಗಳ ತಪ್ಪೇನಿದೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿ ಅನಂತ ಕುಮಾರ್ ತನ್ನ ಸ್ವಂತ ಶಕ್ತಿ ಬೆಳೆಸಿಕೊಂಡರು. ಇದನ್ನು ಸಹಿಸಲಾಗಲಿಲ್ಲ. ಕಮ್ಯುನಲ್ ಬೇಕಾದಾಗ ಮಾತ್ರ ಮಾತನಾಡಬೇಕು. ಅದು ಜಾರಿಗೆ ತರುವ ಸಂಗತಿ ಈಗ ಹೇಳಬಾರದು. ಇದು ಬಿಜೆಪಿ ಪರಿವಾರದ ತಂತ್ರ. ಬಿಜೆಪಿ ಅಧಿಕಾರಕ್ಕೆ ಹೊಡೆತ ಬಂತು ಎಂದಾದರೆ ಮುಲಾಜಿಲ್ಲದೇ ಮೂಲೆಗೆ ತಳ್ಳುತ್ತಾರೆ. ಮಹೇಂದ್ರ ಕುಮಾರ್, ಸತ್ಯಜಿತ್ ಸುರತ್ಕಲ್, ಡಾ ಪ್ರವೀಣ ತೊಗಾಡಿಯಾ, ನೂಪೂರ್ ಶರ್ಮಾ ಇವರಂತಹ ನೂರಾರು ನಾಯಕರ ಕಥೆಯೂ ಹೀಗೇ ಆದದ್ದು.

ಅನಂತ ಹೆಗಡೆಯವರ ತೀವ್ರವಾದ ಹಿಂದುತ್ವದಿಂದಲೇ ಹಿಂದೂ ಯುವಕರು ಸಂಘಟಿತರಾಗಿದ್ದು. ಅವರ ತಲೆಯಲ್ಲೂ ಹಿಂದೂ ತೀವ್ರವಾದದ ಕನಸುಗಳನ್ನೇ ಬಿತ್ತಲಾಗಿತ್ತು. ಈಗ ಅದನ್ನೆಲ್ಲ ಬಿಡಿ ಎಂದರೆ ಹೇಗೆ ಸಾಧ್ಯ ಅನ್ನುವುದು ಕಾರ್ಯಕರ್ತರ ವಾದ. ಹಿಂದೂ ಹುಲಿ, ಮುಂದಿನ ಮುಖ್ಯಮಂತ್ರಿ, ಯೋಗಿ ಮಾದರಿ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಅನಂತ ಹೆಗಡೆಯವರ ಬಗ್ಗೆ ಬರೆಯುತ್ತಿದ್ದ ಉಗ್ರವಾದಿ ಹಿಂದುತ್ವದ ಜನಗಳಿಗೆ ಈಗ ಅಸಹಾಯಕ ಪರಿಸ್ಥಿತಿ ಬಂದಿದೆ. ಗೊಂದಲವಿದೆ. ಬಿಜೆಪಿಯ ನಿಲುವುಗಳೇ ಅರ್ಥವಾಗುತ್ತಿಲ್ಲ. ಹೀಗಾಗಿ ಆ ಗುಂಪು ಈಗಲೂ ಅನಂತ, ನಳಿನ, ಪ್ರತಾಪರ ಪರ ನಿಂತಿದೆ.

ಇಲ್ಲಿ ಬಿಜೆಪಿಯ ಹೈ ಕಮಾಂಡ್ ನ ದ್ವಂದ್ವ ನೀತಿಯೇ ಇದಕ್ಕೆಲ್ಲ ಕಾರಣ ಎಂಬ ಆಕ್ರೋಶವಿದೆ. ಬಿಜೆಪಿಯಲ್ಲಿ ಒಮ್ಮೆ ಮೂಲೆಗೆ ತಳ್ಳಿದರೆ ರಾಜಕೀಯವೇ ಫುಲ್‌ಸ್ಟಾಪ್. ಅದು ಅಡ್ವಾಣಿ, ತೊಗಾಡಿಯಾ, ನೂಪುರ್ ಶರ್ಮಾರ ಉದಾಹರಣೆ ಇದೆ. ಈ ಎಲ್ಲಾ ಕಾರಣಕ್ಕೆ ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿ ಕಾಣುತ್ತಿದೆ.

ಇದನ್ನು ಕಾಂಗ್ರೆಸ್ ಹೇಗೆ ಬಳಸುತ್ತದೋ ಗೊತ್ತಿಲ್ಲ. ದೇಶಪಾಂಡೆ ಮತ್ತು ಕಾಗೇರಿ ಗಳಸ್ಯ ಕಂಠಸ್ಯ ಸ್ನೇಹ. ಅಂಕೋಲಾ ಕ್ಷೇತ್ರದಲ್ಲಿ ದೇಶಪಾಂಡೆ ಬಿಜೆಪಿಗೆ ಹೈ ಲೀಡ್ ಕೊಡಿಸುತ್ತಾರೆ ಅನ್ನುವ ಮಾತು ಜಗಜ್ಜಾಹೀರು ಆಗಿದೆ. ಹಾಗಾಗಿ ಇಲ್ಲಿನ ಕದನ ಕುತೂಹಲಕಾರಿಯಾಗಿದೆ.

-ನಾರಾಯಣ ನಾಯ್ಕ, ಕುಮಟಾ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದಾಪುರ | ಇತಿಹಾಸದ ಹಾದಿಯಲ್ಲಿ ಹುಲ್ಕುತ್ರಿ ಶಾಲಾ ಮಕ್ಕಳು; ಜೈನ ನೆಲೆಗಳ ಅಧ್ಯಯನ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ...

ಕಾರವಾರ | ‘ಆಪರೇಷನ್ ಕ್ಲೀನ್’ ದಾಳಿ: ಫುಟ್‌ಪಾತ್ ಅತಿಕ್ರಮಣಕಾರರಿಗೆ ಮಂಜಾನೆ ಶಾಕ್

ಕಾರವಾರ: ನಗರದ ಸೌಂದರ್ಯಕ್ಕೆ ಮುಳುವಾಗಿದ್ದ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ...

ಕಾರವಾರ | ನೌಕಾಬಲಕ್ಕೆ ಆನೆಬಲ: ಕಲ್ವರಿ ಸಬ್‌ಮೆರಿನ್ ನಿರ್ವಹಣಾ ಕೇಂದ್ರ ಲೋಕಾರ್ಪಣೆ

ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ 'ಕದಂಬ' ನೌಕಾನೆಲೆಯು...

ಉತ್ತರ ಕನ್ನಡ | ರೈತರ ಮಕ್ಕಳಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿ; ಅರ್ಜಿ ಆಹ್ವಾನ

ಉತ್ತರ ಕನ್ನಡ: ತೋಟಗಾರಿಕೆ ಇಲಾಖೆಯ ವತಿಯಿಂದ ಸಿದ್ದಾಪುರ ತಾಲೂಕಿನ ಹೊಸೂರು ತೋಟಗಾರಿಕೆ...