‘ಜನದಿನಿಯ ಸಾರಥಿ’ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ 23 ವರ್ಷಗಳಿಂದ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ವಾರ್ತಾಭಾರತಿ ದಿನಪತ್ರಿಕೆಯ ಕಲ್ಯಾಣ ಕರ್ನಾಟಕ ಆವೃತ್ತಿಗೆ ನಾಳೆ(ಡಿ.20) ಚಾಲನೆ ದೊರೆಯಲಿದೆ.
ಕಲಬುರಗಿಯ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಡಿ.20ರ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಆವೃತ್ತಿಯು ಬಿಡುಗಡೆಯಾಗಲಿದೆ.
ಇದೇ ಸಂದರ್ಭದಲ್ಲಿ 23ನೇ ವಾರ್ಷಿಕ ವಿಶೇಷ ಸಂಚಿಕೆ ಹಾಗೂ ಆಯ್ದ ಸಂಪಾದಕೀಯಗಳ ಸಂಗ್ರಹ ಕೃತಿ ಕೂಡ ಬಿಡುಗಡೆಗೊಳ್ಳಲಿದೆ.
ಈ ಸಮಾರಂಭದಲ್ಲಿ ವಿಧಾನ ಸಭೆಯ ಅಧ್ಯಕ್ಷ ಸ್ಪೀಕರ್ ಯು.ಟಿ.ಖಾದರ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಅರಣ್ಯ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ, ಸಾಮಾಜಿಕ ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್, ದಿ ವೈರ್ನ ಸಂಪಾದಕರಾದ ಸಿದ್ದಾರ್ಥ ವರದರಾಜನ್, ಸಚಿವರಾದ ಎನ್.ಎಸ್.ಬೋಸರಾಜು, ರಹೀಮ್ ಖಾನ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕರಾದ ಬಿ.ಆರ್. ಪಾಟೀಲ್, ಸಂಸದ ಬಿ.ಕುಮಾರ್ ನಾಯಕ್, ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಝ್ರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಶಾಸಕರಾದ ಅಜಯ್ ಸಿಂಗ್, ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವರಾದ ಎಸ್ ಕೆ ಕಾಂತ, ಕೋರಣೇಶ್ವರ ಸ್ವಾಮೀಜಿ, ರಾಬರ್ಟ್ ಮಿರಾಂಡ, ಭಂತೆ ವರಜ್ಯೋತಿ, ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ಚಾಮರಸ ಮಾಲಿ ಪಾಟೀಲ್, ಡಿ .ಜಿ. ಸಾಗರ್, ಅಂಬಣ್ಣ ಅರೋಲಿಕರ್, ಉದ್ಯಮಿಗಳಾದ ನಾಸಿರ್ ಸೈಯ್ಯದ್, ಝಕರಿಯಾ ಜೋಕಟ್ಟೆ, ಸೈಯದ್ ಮುಹಮ್ಮದ್ ಬ್ಯಾರಿ ಹಾಗೂ ಎಚ್ ಎಂ ಅಫ್ರೋಝ್ ಅಸ್ಸಾದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಲಬುರಗಿ ಕಚೇರಿ ಉದ್ಘಾಟನೆ
ವಾರ್ತಾಭಾರತಿ’ ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿಯು ಡಿ.20ರಂದು ಲೋಕಾರ್ಪಣೆಯಾಗಲಿರುವ ಮುಂಚಿತವಾಗಿ ಕಲಬುರಗಿ ನಗರದಲ್ಲಿ ‘ವಾರ್ತಾಭಾರತಿ’ಯ ನೂತನ ಕಚೇರಿಯ ಉದ್ಘಾಟನೆಯು ಡಿ.18ರ ಸಂಜೆ ನೆರವೇರಿತು.

ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಪಿಡಿಎ ಕಾಲೇಜಿಗೆ ಹೋಗುವ ರಸ್ತೆಯಲ್ಲಿರುವ ಮನೋರಮಾ ಎಸ್ ಆರ್ ಎಂಬಸಿ ಕಟ್ಟಡದ ಎರಡನೇ ಮಹಡಿಯಲ್ಲಿ ವಾರ್ತಾಭಾರತಿ ಪತ್ರಿಕೆಯ ಹೊಸ ಕಚೇರಿಯನ್ನು ಕಲಬುರಗಿಯ ಖ್ಯಾತ ಉದ್ಯಮಿ ಅಝೀಝ್ ಶಹನಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಸಿಖ್ ಸಮುದಾಯದ ನಾಯಕ ಗುರುಮಿತ್ ಸಿಂಗ್ ಅಹುಜಾ, ಸುಭಾಷ್ ರಾಠೋಡ್, ಭೀಮರಾವ್ ಟಿ.ಟಿ, ವಹಾಜ್ ಬಾಬಾ, ಇಟ್ಬಾಲ್ ಅಲಿ, ನಿವೃತ್ತ ತಹಶೀಲ್ದಾರ್ ನಿಸಾರ್ ಅಹ್ಮದ್ ವಜೀರ್, ಅಸ್ಕರ್ ಚುಲಬುಲ್, ಸಂತಗುರು ಶ್ರೀ ಬುದ್ಧಾನಂದ ಸ್ವಾಮೀಜಿ, ಸುನೀಲ್ ಮಾನ್ಪಡೆ, ಅಪ್ಪಲ್ ಮಹಮೂದ್, ಸಂಧ್ಯಾರಾಜ್ ಸ್ಯಾಮ್ಯುಯೆಲ್, ಲೂಯಿಸ್ ಕೋರಿ, ಶಿವಾನಂದ ಹೊನಗುಂಟಿ, ಆರ್.ಜೆ ಶೇಟಕಾರ್, ದಿಗಂಬರ ಬೆಳಮಗಿ, ಮಹೇಶ್ ಹುಬ್ಬಳ್ಳಿ, ತಿಪ್ಪಣ್ಣ ಒಡೆಯರ್, ಮಲ್ಲಿಕಾರ್ಜುನ್ ಬೋವಿ, ಲಕ್ಷ್ಮಣ ಪೂಜಾರಿ, ನಾಗೇಂದ್ರ ಜವಳಿ, ಆಕಾಶ್ ನಂದಾ, ನಂದಕುಮಾರ್ ಮಾಲಿಪಾಟೀಲ್, ಇರ್ಫಾನುಲ್ಲಾ ಶರೀಫ್, ಝೀಶಾನ್ ಅಖೀಲ್ ಸಿದ್ದೀಕ್, ನ್ಯಾಯವಾದಿ ಜಬ್ಬಾರ್ ಗೋಲಾ, ಎಸ್.ಎಸ್.ತಾವಡೆ, ‘ವಾರ್ತಾ ಭಾರತಿ’ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ, ಕಲ್ಯಾಣ ಕರ್ನಾಟಕ ಕೋ ಆರ್ಡಿನೇಟರ್ ಸಾಜಿದ್ ಅಲಿ, ಜಿಲ್ಲಾ ವರದಿಗಾರ ದಸ್ತಗೀರ್ ನದಾಫ್, ಅಂಕಣಕಾರರಾದ ಹೊನಕೆರೆ ನಂಜುಂಡೇಗೌಡ, ರಾಜಶೇಖರ ಹತಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





