ಹಿರಿಯ ಹೋರಾಟಗಾರ, ಚಳುವಳಿಯ ಒಡನಾಡಿ ಜಿಗಣಿ ಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯವರಾದ ಶಂಕರ್ ಅವರು ದಲಿತ ಸಂಘರ್ಷ ಸಮಿತಿ ಚಳವಳಿಯ ಸಂದರ್ಭದಲ್ಲಿ ಮತ್ತು ಆ ನಂತರವೂ ನಿಷ್ಠುರ ಹೋರಾಟ ಮಾಡಿಕೊಂಡು ಬಂದಿದ್ದು, ಆಳವಾದ ಒಳನೋಟ ಉಳ್ಳವರಾಗಿದ್ದರು. ಅವರ ಸಾಮಾನ್ಯ ತಿಳುವಳಿಕೆ ಅನನ್ಯವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರ ಭೂಮಿಯಲ್ಲಿ ಅಕ್ರಮ; ಭೂ ಮಂಜೂರಾತಿಗೆ ಆಗ್ರಹ
ಜಿಗಣಿ ಶಂಕರ್ ಅವರು ತಮ್ಮ ಬದುಕಿನುದ್ದಕ್ಕೂ ದಲಿತ ಸಂಘಟನೆ ಮತ್ತು ದಲಿತ ಪಕ್ಷಕಟ್ಟಿ ಹೋರಾಟ ಮಾಡಿದವರು.
ಅವರಿಗೆ ಆನಂದ ಆಗುವಷ್ಟು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಹೋರಾಟ ಮಾಡಿದ್ದಾರೆ. ಇದೀಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಚಳುವಳಿಗೆ ಭರಿಸಲಾರದ ನಷ್ಟವುಂಟಾಗಿದೆ.





