ವಿಜಯನಗರ ಜಿಲ್ಲೆಯ ಹಂಪಿ ಪಟ್ಟಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಯುವಕ ನಾಪತ್ತೆಯಾಗಿರುವ ಬಗ್ಗೆ ಪ್ರಕರಣವೊಂದು ದಾಖಲಾಗಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಕ್ಯಾಲಿ ಕುಮಾರ್ ಪ್ರಜಾಪತಿ ಅವರ ಮಗ ಆದಿತ್ಯ ಪ್ರಜಾಪತಿ(20) ಕಳೆದ ಎರಡ್ಮೂರು ದಿನಗಳಿಂದ ಕಾಣೆಯಾಗಿದ್ದಾನೆಂದು ಕೇಳಿಬಂದಿದೆ.
ವಿಶ್ವಪರಂಪರೆ ಪ್ರವಾಸಿ ತಾಣ ಹಂಪಿಗೆ ದೀಪಾವಳಿಯ ರಜೆ ಇರುವುದರಿಂದ ಹಂಪಿಯನ್ನು ನೋಡಲು ಬಂದಿದ್ದು, ಕಳೆದ 3 ದಿನಗಳಿಂದ ಕಾಣೆಯಾಗಿರುವುದಾಗಿ ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದಲಿತ ಯುವಕನ ಮನೆಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮಕ್ಕೆ ಎಸ್‌ಎಸ್‌ಎಚ್‌ಎಸ್ ಆಗ್ರಹ
ದೂರು ದಾಖಲಿಸಿಕೊಂಡು ಪೊಲೀಸರು ಯುವಕನ ಪತ್ತೆಗೆ ಚುರುಕು ತನಿಖಾ ಕಾರ್ಯ ಕೈಗೊಂಡಿದ್ದಾರೆ.





