ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗ ಸಾವನ್ನಪ್ಪಿರುವ ದಾರುಣ ಘಟನೆ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ದುಗ್ಗಾವತಿಯ ರಮೇಶ್ (40) ಮತ್ತು ಚಂದ್ರಪ್ಪ (17) ಮೃತರು.
ಒಂದು ಕಂಬದ ತಂತಿಗಳನ್ನು ತುಂಡರಿಸಿ (ಡೆಡ್ ಲೈನ್) ಬೇಲಿ ಮೇಲೆ ಅವೈಜ್ಞಾನಿಕ ಸುತ್ತಲಾಗಿತ್ತು. ಆದರೆ ಕಂಬದ ಮೇಲ್ಗಡೆಯ ವಿದ್ಯುತ್ ಸಂಪರ್ಕ ತಪ್ಪಿಸಿರಲಿಲ್ಲ. ಇದರಿಂದ ವಿದ್ಯುತ್ ಪ್ರವಹಿಸಿದೆ.
ಇದೇ ವೇಳೆ ಅದೇ ಮಾರ್ಗದಲ್ಲಿ ಬಂದಿದ್ದ ರಮೇಶ್ ಅವರಿಗೆ ತಂತಿ ಸ್ಪರ್ಶಿಸಿದೆ. ನಂತರ ಮಗನಿಗೂ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.





