ವಿಜಯನಗರ | ಮಹಿಳಾ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ‍ ‘ಹಿಜಾಬ್’: ಶಾರದಾ ಉಡುಪಿ

Date:

ಹಿಜಾಬ್ ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ ಎಂದು ನಿವೃತ್ತ ಪ್ರಾಂಶುಪಾಲೆ ಶಾರದಾ ಉಡುಪಿ ಅಭಿಪ್ರಾಯಪಟ್ಟರು.

ವಿಜಯನಗರದ ಹೊಸಪೇಟೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

“ಧರ್ಮ, ಹಿಜಾಬ್ ಬಗ್ಗೆ ನಾವು ಮಾತನಾಡಲೇಬೇಕು. ಸದ್ಯ ಹಿಜಾಬ್ ವಿಷಯ ಮುನ್ನಲೆಗೆ ಬಂದಿದ್ದು ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ಬಹುದೊಡ್ಡ ತಂತ್ರವಾಗಿದೆ. ಮಹಿಳೆಯರು ಪ್ರಶ್ನೆ ಮಾಡದೇ ಯಾವುದಕ್ಕೂ ಉತ್ತರ ಸಿಗೋದಿಲ್ಲ. ಅತ್ಯಾಚಾರಕ್ಕೊಳಗಾದ ಹೆಣ್ಣು ಠಾಣೆಗೆ ಪಿರ್ಯಾದಿ ಕೊಡಲು ಹೋದರೆ, ಮತ್ತೆ ಪೊಲೀಸ್‌‌ರಿಂದಲೇ ಅತ್ಯಾಚಾರಕ್ಕೊಳಗಾಗುವ ದರಿದ್ರ ಪರಿಸ್ಥಿತಿಯಲ್ಲಿದ್ದೀವಿ” ಎಂದು ಕಳವಳವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 03 07 at 4.30.32 PM 1

ಡಾ. ಭಾನುಮತಿ ಕಲ್ಲೂರಿ ಮಾತನಾಡಿ, “ಕಾರ್ಖಾನೆಯ ಹೊಗೆಯಿಂದ ಮಹಿಳೆಯರು ಗರ್ಭಕೋಶದ ತೊಂದರೆಗೆ ಈಡಾಗುತ್ತಿದ್ದಾರೆ. ಗಣಿಗಾರಿಕೆಗಳು ಸಾಮಾನ್ಯ ಜನರ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತವೆ. ಸಾಲದಂತೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಪರ್ಯಾಯ ಸಂಪನ್ಮೂಲಗಳ ಜತೆ ಹೆಚ್ಚು ತೊಡಗಿಸಿಕೊಳ್ಳುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ವಲಸೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡಬೇಕು” ಎಂದರು.

ಡಾ.ಜೋಗತಿ ಮಂಜಮ್ಮ ಮಾತನಾಡಿ, “ಸಮಾನತೆ ಜೊತೆಗೆ ಇಕ್ವಿಟಿ ಕೊಟ್ಟರೆ ಮಾತ್ರ ಸಮಾನತೆ ಆಗುತ್ತದೆ. ಇಲ್ಲಿ ಎಲ್ಲಾ ಲಿಂಗದವರು ಇದ್ದಾರೆ ಇದು ಸಮಾನತೆ ಆಗುತ್ತದೆ. ನನ್ನಂತ ಮಗು ಹುಟ್ಟಿದರೆ ಆ ಮಗುವನ್ನ ಬೀದಿಗೆ ಬಿಡಬೇಡಿ, ಆ ಮಗುವಿಗೆ ಉ‌ನ್ನತ ಶಿಕ್ಷಣ‌ಕೊಡಿ. ಅದು ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ. ಆ ಮೂಲಕ ಸಮಾನತೆ ಕೊಟ್ಟ ಸಂವಿಧಾನಕ್ಕೆ ಗೌರವ ಕೊಡೋಣ, ಅದನ್ನ‌ರಕ್ಷಿಸೋಣ” ಎಂದರು.

WhatsApp Image 2025 03 07 at 4.30.34 PM

ಇದನ್ನೂ ಓದಿ: ವಿಜಯನಗರ | ಲಿಂಗ ಸಮಾನತೆ ನಮ್ಮ ಹೊಣೆ: ಪ್ರೊ. ರೋನಿತ್ ಕಾರ್ಕ

ಕಾರ್ಯಕ್ರಮದಲ್ಲಿ ಸೌಭಾಗ್ಯ ಎಚ್ ಸೇರಿದಂತೆ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು.

WhatsApp Image 2025 03 07 at 4.30.34 PM 1
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...