ʼಕಾಂಗ್ರೆಸ್‌ನವರೇ ನಿಜವಾದ ರಾಮ ಭಕ್ತರು, ನೀವಲ್ಲʼ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ವಿಜಯನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ರಾಮ ದೇವರಲ್ಲ, ರಾಮ ದೇವರಲ್ಲ, ರಾಮ ಮನುಷ್ಯ. ಆತ ರಾಜಕುಮಾರ, ರಾಜ” ಎಂದು ಒತ್ತಿ ಹೇಳಿದರು.
“ಈ ಬಾರಿ ರಾಮನ ಹೆಸರಲ್ಲಿ ಲೋಕಸಭಾ ಚುನಾವಣೆಯಲ್ಲಿ ಎತ್ತಿಕಟ್ಟುತ್ತಾರೆ. ಕಳೆದ ಬಾರಿ ಪುಲ್ವಾಮಾ ಹೆಸರಲ್ಲಿ ಚುನಾವಣೆ ಮಾಡಿದ್ದೀರಿ. ಈ ಬಾರಿ ರಾಮನ ಹೆಸರಲ್ಲಿ ಚುನಾವಣೆ ನಡೆಸಲು ಹೊರಟಿದ್ದೀರಿ. ಆದರೆ ರಾಮನ ಹೆಸರು ಹೇಳೋದಕ್ಕೆ ನಿಮಗೆ ಯೋಗ್ಯತೆ ಇಲ್ಲ. ರಾಮನ ಹೆಸರು ಹೇಳೋದಕ್ಕೆ ಯೋಗ್ಯರಿರುವರು ಕಾಂಗ್ರೆಸ್‌ನವರು. ಶಿಲಾನ್ಯಾಸ ಮಾಡಿದ್ದು ಕಾಂಗ್ರೆಸ್‌ನವರೇ, ಇದೀಗ ಟ್ರಸ್ಟ್ ಅನ್ನೇ ಹೈಜಾಕ್ ಮಾಡಿದ್ದಾರೆಂದು ಆರೋಪಿಸಿ, ರಾಮ ಕೊಟ್ಟ ವಚನವನ್ನು ಈಡೇರಿಸಿದನು. ಆದರೆ ನರೇಂದ್ರ ಮೋದಿ ವಚನಭ್ರಷ್ಟರಾಗಿದ್ದಾರೆ” ಎಂದು ಮಾಜಿ ಸಂಸದ ಉಗ್ರಪ್ಪ ಗುಡುಗಿದರು.
“ರಾಮನ ಬಗ್ಗೆ ನಿಮಗೇನಾದರೂ ಭಕ್ತಿ ಇದೆಯಾ, ರಾಮ ದೇವರಲ್ಲ, ಆತ ಮನುಷ್ಯ. ಆತ ರಾಜನಾಗಿದ್ದು, ತನ್ನ ಆದರ್ಶಗಳ ಮೂಲಕ ರಾಮ ದೈವತ್ವವನ್ನು ಪಡೆದ” ಎಂದು ಉಗ್ರಪ್ಪ ಪ್ರತಿಪಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಶ್ಚಿಮ ಬಂಗಾಳದ ವರದಿಗಾರ ಸಂತುಪನ್ ಬಂಧನಕ್ಕೆ ಖಂಡನೆ
“ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400 ಸೀಟ್ ಗೆದ್ದೇ ಗೆಲ್ಲುತ್ತೇವೆ” ಎಂಬ ಬಿಜೆಪಿ ನಾಯಕರ ಮಾತಿಗೆ ಉಗ್ರಪ್ಪ ಅವರು ತಿರುಗೇಟು ನೀಡಿದ್ದು, “ಯಾವ ಪುರುಷಾರ್ಥಕ್ಕೆ ನಿಮಗೆ 400 ಸೀಟ್ ಕೊಡಬೇಕು?. ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿದಂತೆ ಅಕ್ಕಪಕ್ಕದ ದೇಶಗಳು ನಮ್ಮ ವಿರುದ್ಧ ಇವೆ” ಎಂದು ತಿಳಿಸಿದರು.




