ವಿಜಯನಗರ | ನಿರಂತರ ಕರಡಿ ದಾಳಿ; ಕ್ರಮಕ್ಕೆ ರೈತರ ಅಗ್ರಹ

Date:

ಕರಡಿ ಮತ್ತು ಹಂದಿಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ಲಗ್ಗೆ ಇಡುತ್ತಿರುವುದಲ್ಲದೆ, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸರ್ಕಲ್ ಬಳಿ ಏಕಾಏಕಿ ರಾತ್ರಿ ಕರಡಿ ರಾಜಾರೋಷವಾಗಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ತಾಲೂಕಿನ ಹುಲಿಕುಂಟೆ, ಅಮಲಾಪುರ, ಕರಡಿಹಳ್ಳಿ, ನರಸಿಂಹನಗಿರಿ, ಕಾಟ್ರಹಳ್ಳಿ, ಕರಡಿಹಳ್ಳಿ, ಗೆದಲ್ಲಗಟ್ಟೆ ಗ್ರಾಮದಲ್ಲಿ ನಿರಂತರವಾಗಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಹುಲಿಕುಂಟೆ ಗ್ರಾಮದಲ್ಲಿ ಜೋಳದ ಜಮೀನುಗಳಿಗೆ ನುಗ್ಗಿ ಅಪಾರವಾದ ಬೆಳೆ ನಾಶಪಡಿಸಿರುವುದು ಕಂಡುಬಂದಿದೆ.

“ಗ್ರಾಮದ ಇಂದ್ರಮ್ಮ, ಮಲ್ಲಿಯಪ್ಪ, ಕೆಂಗಪ್ಪ, ಸಿದ್ದಪ್ಪ, ನೀರುಗಂಟೆತಿಪ್ಪೆಸ್ವಾಮಿ, ತಲವಾರು ಮಾರಪ್ಪ, ಸೂಲದಳ್ಳಿ ರಾಮಪ್ಪ, ಶಿವಣ್ಣ, ನಾಗೇಂದ್ರಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಜೋಳದ ಬೆಳೆಯು ಕಾಳುಗಟ್ಟುವ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಕರಡಿಗಳ ಗುಂಪು ದಾಳಿ ಮಾಡಿ ಸಂಪೂರ್ಣ ಹಾಳು ಮಾಡಿದ್ದು, ಅಪಾರ ನಷ್ಟವಾಗಿದೆ” ಎಂದು ಸ್ಥಳೀಯ ನಿವಾಸಿ ಅನಿಲ್ ಕುಮಾರ್ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಹಲವು ರೈತರ ಜಮೀನುಗಳಿಗೆ ಕರಡಿಗಳು ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶ ಪಡಿಸುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಬೆಳೆ ರಕ್ಷಣೆಗೆ ರಾತ್ರಿ ಹೊತ್ತು ಕಾವಲಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ನಿರಾಶ್ರಿತರಿಗೆ ನ್ಯಾಯ ಸಿಗದಿದ್ದರೆ ಹೋರಾಟ ಅನಿವಾರ್ಯ : ಕರಿಯಪ್ಪ ಗುಡಿಮನಿ

“ನಷ್ಟ ಪರಿಹಾರ ಹಾಗೂ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈಗಾಗಲೇ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಹಿತ ದೃಷ್ಟಿಯಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಹಾಗೂ ಪರಿಹಾರ ಒದಗಿಸಬೇಕು” ಎಂದು ರೈತರ ಪರವಾಗಿ ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಡಾಕ್ಟರೇಟ್ ಪದವಿ ಪಡೆದ ಗಿರೀಶ್ ಕುಮಾರ್ ಜಿ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಡಾ. ನಾಗೇಂದ್ರ ಮಾರ್ಗದರ್ಶನದಲ್ಲಿ ʼಕರ್ನಾಟಕದಲ್ಲಿ...

ವಿಜಯನಗರ | ಬಿಜೆಪಿ ಮನೆ ದೇವ್ರು ಸುಳ್ಳು, ಶತಭಂಡರು: ಸಿಎಂ ಸಿದ್ದರಾಮಯ್ಯ ಆಕ್ರೋಶ

'ಬಿಜೆಪಿಯವರ ಮನೇ ದೇವ್ರೇ ಸುಳ್ಳು. ಶತಭಂಡರು ಜನರಿಗೆ ಬರೀ ಸುಳ್ಳುಗಳನ್ನು ಹೇಳಿ...

ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಲ್ಹಾದ್ ಜೋಶಿ: ಸಿಎಂ ಸಿದ್ದರಾಮಯ್ಯ

ಕಬ್ಬು ಬೆಳೆಗಾರರಿಗೆ ನಿಜವಾಗಿಯೂ ದ್ರೋಹ ಬಗೆದದ್ದು ಪ್ರಲ್ಹಾದ್ ಜೋಶಿ. FRP ಮತ್ತು...

ವಿಜಯನಗರ | ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ರೈತ ಸಂಘ ಆಗ್ರಹ

ರೈತರ ಸಮಸ್ಯೆ ಹಾಗೂ ನಾನಾ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಬಗೆಹರಿಸಬೇಕು...