ವಿಜಯನಗರ | ಇನ್ಮುಂದೆ ನವೆಂಬರ್‌ ತಿಂಗಳಲ್ಲಿಯೇ ʼಹಂಪಿ ಉತ್ಸವʼ : ಸಿಎಂ ಸಿದ್ದರಾಮಯ್ಯ ಘೋಷಣೆ

Date:

ಇನ್ಮುಂದೆ ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿಯೇ ಹಂಪಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಇದೇ ವರ್ಷ ನವೆಂಬರ್‌ ತಿಂಗಳು ಹಂಪಿ ಉತ್ಸವ ಮತ್ತೆ ನಡೆಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ವರ್ಣರಂಜಿತ ವೇದಿಕೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ “ಐತಿಹಾಸಿಕ ಹಂಪಿ ಉತ್ಸವ-2026” ಅನ್ನು ಉದ್ಘಾಟಿಸಿ ಅವರು ಮಾತನಾಡಿ, ʼಕಲೆ, ಸಾಹಿತ್ಯ, ಸಂಗೀತದ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸುವ ಕಾರ್ಯವನ್ನು ಹಂಪಿ ಉತ್ಸವದ ಮೂಲಕ ನಮ್ಮ ಸರ್ಕಾರವು ಜತನದಿಂದ ಮಾಡುತ್ತಿದೆʼ ಎಂದು ಹೇಳಿದರು.

ಹಂಪಿ ಉತ್ಸವ ಆರಂಭವಾಗಲು ಕಾರಣವಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರು. ಆಗ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಅವರು ನನ್ನ ಮುಂದೆ ಒಂದು ಮಹತ್ವದ ಪ್ರಶ್ನೆಯನ್ನು ಇಟ್ಟರು. ಮೈಸೂರುನಲ್ಲಿ ನಾವು ದಸರಾ ಉತ್ಸವವನ್ನು ಭವ್ಯವಾಗಿ ಆಚರಿಸುತ್ತೇವೆ. ಹಾಗಿದ್ದರೆ ಹಂಪಿಯಲ್ಲಿ ಯಾಕೆ ಅದೇ ರೀತಿ ಉತ್ಸವ ಮಾಡಬಾರದು? ಎಂದು ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2026 02 13 at 10.32.45 PM

ʼಆ ಸಮಯದಲ್ಲಿ ನಾನು ಹಣಕಾಸು ಸಚಿವನಾಗಿದ್ದೆ. ʼನೀವು ಒಳ್ಳೆಯ ಉದ್ದೇಶದಿಂದ ಹೇಳುತ್ತಿದ್ದರೆ, ಅಗತ್ಯವಿರುವ ಸಹಕಾರವನ್ನು ನಾನು ಕೊಡುತ್ತೇನೆ’ ಎಂದು ನಾನು ಹೇಳಿದ್ದೇನೆ. ಆ ಬಳಿಕ ಹಂಪಿ ಉತ್ಸವ ಆರಂಭವಾಯಿತು. ಇಂದು ಹಂಪಿ ಉತ್ಸವವು ವಿಶ್ವದ ಜನರನ್ನು ಆಕರ್ಷಿಸುವ ಮಟ್ಟಿಗೆ ಬೆಳೆಯುತ್ತಿರುವುದಾದರೆ, ಅದರ ಹಿಂದೆ ಎಂ.ಪಿ.ಪ್ರಕಾಶ್ ಅವರ ದೃಢ ಸಂಕಲ್ಪ ಮತ್ತು ದೂರದೃಷ್ಟಿಯೇ ಕಾರಣʼ ಎಂದು ಸ್ಮರಿಸಿದರು.

ʼಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರು ಪ್ರತಿ ವರ್ಷ ನವೆಂಬರ್‌ 2,3 ಹಾಗೂ 4 ರಂದು ಹಂಪಿ ಉತ್ಸವ ನಡೆಸುತ್ತಿದ್ದರು. ಹಾಗಾಗಿ ಈಗಲೂ ನವೆಂಬರ್‌ ತಿಂಗಳಲ್ಲಿಯೇ ಹಂಪಿ ಉತ್ಸವ ನಡೆಸಬೇಕೆಂದು ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಸೇರಿ ಎಲ್ಲರೂ ನನಗೆ ತಿಳಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ನಡೆಯುವ ಕಾಲ ಇರುವುದರಿಂದ ನವೆಂಬರ್‌ ತಿಂಗಳಲ್ಲಿ ಉತ್ಸವ ನಡೆಸುವುದೇ ಉತ್ತಮ ಎಂದು ನನಗೂ ಅನಿಸಿದೆ. ಹೀಗಾಗಿ ಇದೇ ವರ್ಷದಿಂದ ನವೆಂಬರ್‌ ತಿಂಗಳಲ್ಲಿ ಪ್ರತಿವರ್ಷ ಹಂಪಿ ಉತ್ಸವ ಮಾಡಲಾಗುವುದುʼ ಎಂದು ಘೋಷಿಸಿದ್ದಾರೆ.

ʼಹಂಪಿಯ ಇತಿಹಾಸವನ್ನು ನಾವು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಇತಿಹಾಸದಲ್ಲಿ ಇಲ್ಲಿ ಏನೇನು ನಡೆದಿತ್ತು, ಯಾರು ಈ ಸಾಮ್ರಾಜ್ಯವನ್ನು ಕಟ್ಟಿದರು, ಎಷ್ಟರ ಮಟ್ಟಿಗೆ ಸಂಪತ್ತು, ವೈಭವ ಇತ್ತು ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಕರ್ತವ್ಯ. ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ನಿರ್ಮಿಸುವುದು, ಸೇತುವೆಗಳನ್ನು ಕಟ್ಟುವುದು, ಕಟ್ಟಡಗಳನ್ನು ಎತ್ತುವುದು ಮಾತ್ರವಲ್ಲ. ಒಂದು ನಾಡಿನ ಸಮಗ್ರ ಅಭಿವೃದ್ಧಿ ಎಂದರೆ ಅಲ್ಲಿನ ಸಾಹಿತ್ಯ, ಕಲೆ, ಸಂಸ್ಕೃತಿ, ಚಿತ್ರಕಲೆ, ನಾಟಕ, ಸಂಗೀತ, ನೃತ್ಯ ಇವುಗಳನ್ನು ಎಷ್ಟರ ಮಟ್ಟಿಗೆ ಉಳಿಸಿ ಬೆಳೆಸುತ್ತೇವೆ ಎಂಬುದರಲ್ಲಿ ಇದೆʼ ಎಂದರು.

ʼನಮ್ಮ ಸರ್ಕಾರ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿಜಯನಗರ ಅರಸರ ಕಾಲದಲ್ಲಿ ಹಂಪಿ ಅಪಾರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಮಹಾನಗರವಾಗಿತ್ತು. ಆ ವೈಭವವನ್ನು ನಾವು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಪರ್ಷಿಯನ್ ಪ್ರವಾಸಿಗ ಅಬ್ದುಲ್ ರಝಾಕ್ ತಮ್ಮ ಬರಹಗಳಲ್ಲಿ ವಿಜಯನಗರದ ವೈಭವವನ್ನು ವರ್ಣಿಸಿದ್ದಾರೆ. ಇಂತಹ ಲೇಖನಗಳನ್ನು ನಾವು ಓದಬೇಕು, ತಿಳಿದುಕೊಳ್ಳಬೇಕುʼ ಎಂದು ಹೇಳಿದರು.

ʼನಮ್ಮ ಸಮಾಜದಲ್ಲಿ ಅಸಮಾನತೆ, ಬಡತನ, ಸಿರಿತನ, ವಿವಿಧ ಜಾತಿ-ವರ್ಗಗಳ ವ್ಯತ್ಯಾಸಗಳಿವೆ. ಆದರೆ ಸಂವಿಧಾನದ ಮೂಲಕ ನಮಗೆ ಸಮಾನ ಅವಕಾಶಗಳನ್ನು ನೀಡಲಾಗಿದೆ. ಡಾ.ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವೇ ಇಂದು ಸಾಮಾನ್ಯ ವ್ಯಕ್ತಿಗೂ ಸಚಿವರಾಗಲು, ನಾಯಕತ್ವ ವಹಿಸಲು ಅವಕಾಶ ನೀಡಿದೆ. ಅದರ ಮೂಲಕ ನಾವು ಎಲ್ಲರೂ ಸಮಾನತೆಯೊಂದಿಗೆ, ಒಗ್ಗಟ್ಟಿನಿಂದ ಮುಂದುವರಿಯಬೇಕು. ಹಂಪಿಯಂತಹ ಐತಿಹಾಸಿಕ ತಾಣಗಳು ನಮ್ಮಗೆ ಒಗ್ಗಟ್ಟು, ಸಂಸ್ಕೃತಿ ಮತ್ತು ಹೆಮ್ಮೆಯ ಸಂಕೇತವಾಗಿವೆʼ ಎಂದು ತಿಳಿಸಿದರು.

ʼಸಮಾಜದಲ್ಲಿ ಅಸಮಾನತೆ ಇದ್ದೇ ಇದೆ. ಸಮಾಜದಲ್ಲಿ ಅಸಮಾನತೆ ಹೋಗದಿದ್ದರೆ ಜಾತಿಯತೆ ಹೋಗಲು ಸಾಧ್ಯವಿಲ್ಲ. ಜಾತಿವ್ಯವಸ್ಥೆ ಹೋಗಿ ಎಲ್ಲರಿಗೂ ಸಮಾನ ಅವಕಾಶಗಳನ್ನು ದೊರಕುವ ವ್ಯವಸ್ಥೆ ನಿರ್ಮಾಣವಾದರೆ ಮಾತ್ರ ಎಲ್ಲರೂ ಮುಖ್ಯವಾಹಿನಿಗೆ ಬರಲು ಸಾಧ್ಯ. ಬರೀ ಸ್ವಾತಂತ್ರ್ಯ, ಪ್ರಜಾಪ್ರಭುತ್ವವಿದ್ದರೆ ಸಾಲದು, ಜೊತೆಗೆ ಆರ್ಥಿಕ, ಸಾಮಾಜಿಕ ಸಮಾನತೆ ಕೂಡ ಇರಬೇಕೆಂಬ ದೃಷ್ಟಿಯಿಂದ ಅಸಮಾನತೆ ಹೋಗಲಾಡಿಸುವ ಉದ್ದೇಶದಿಂದ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆʼ ಎಂದು ಅಭಿಪ್ರಾಯಪಟ್ಟರು.

ʼನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಇವೆಲ್ಲವೂ ಜನರಿಗೆ ಅರ್ಥವಾಗಬೇಕು. ನಾಡಿನ ಪರಂಪರೆಯನ್ನು ಮುಂದಿನ ಯುವಪೀಳಿಗೆಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಇಂತಹ ಉತ್ಸವಗಳನ್ನು ನಡೆಸಲು ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಿ ಆಯೋಜಿಸುತ್ತಿದೆʼ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮಾತನಾಡಿ, ʼನೂತನ ವಿಜಯನಗರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ, ಜಿಲ್ಲಾ ನ್ಯಾಯಾಲಯ ಕಟ್ಟಡ, ಜಿಲ್ಲಾ ಆಸ್ಪತ್ರೆ ಉಪಕರಣಗಳು, ವಸತಿ ನಿಲಯ, ಅರಣ್ಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಒಟ್ಟು
390 ಕೋಟಿ ಅಗತ್ಯವಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒದಗಿಸಬೇಕುʼ ಎಂದು ಮನವಿ ಮಾಡಿದರು.

ಇದನ್ನೂ ಓದಿ : ʼಅಮೃತಭೂಮಿ’ ಸೊಬಗು ಕಂಡಿರಾ?

ಸಚಿವರಾದ ಎಚ್.ಕೆ.ಪಾಟೀಲ್‌, ಶಿವರಾಜ್ ಎಸ್. ತಂಗಡಗಿ, ಬೈರತಿ ಸುರೇಶ್, ಖ್ಯಾತ ನಟ ಶಿವರಾಜಕುಮಾರ್, ಸಂಸದರಾದ ತುಕಾರಾಮ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಶಾಸಕರು, ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...