ವಿಜಯಪುರ | ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ; ಶತಮಾನೋತ್ಸವ ಸಂಭ್ರಮಕ್ಕೆ ಸ್ಥಳೀಯರ ಕಾತರ

Date:

ಬ್ರಿಟಿಷ್ ಸರ್ಕಾರದಲ್ಲಿ ಪ್ರಾರಂಭವಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ ನೂರಾರು ವಿದ್ಯಾರ್ಥಿಗಳ ಜೀವನ ರೂಪಿಸಿದೆ. ನೂರಕ್ಕೂ ಹೆಚ್ಚು ವರ್ಷ ಕಂಡಿರುವ ಶಾಲೆ ಈಗ ಶತಮಾನೋತ್ಸವ ಸಂಭ್ರಮದ ಕನಸು ಕಾಣುತ್ತಿದೆ.

ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ 1890ರಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. ನಂತರ ದಿನಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಪ್ರತ್ಯೇಕ ಶಾಲೆಯಾಗಿ ಮಾರ್ಪಟ್ಟಿತು. 2015ರಲ್ಲಿ ಒಂದೇ ಗ್ರಾಮದಲ್ಲಿರುವ ಎರಡೂ ಶಾಲೆ ವಿಲೀನ ಮಾಡಬೇಕೆಂಬ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಂಪಿಎಸ್ ಬಿದರಕುಂದಿ ಶಾಲೆಯಾಗಿ ಹೊರಹೊಮ್ಮಿತು. ಸದ್ಯಕ್ಕೆ ಈ ಶಾಲೆಗೆ 135 ವರ್ಷವಾಗಿದೆ. 323 ಮಕ್ಕಳು ಕಲಿಕೆ ನಡೆಸಿದ್ದು, 2023ರಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ವರ್ಗಗಳನ್ನೂ ಪ್ರಾರಂಭಿಸಲಾಗಿದೆ. ಒಟ್ಟು 354 ಮಂದಿ ಮಕ್ಕಳು ಕಲಿಯುತ್ತಿದ್ದು, 10 ಮಂದಿ ಶಿಕ್ಷಕರಿದ್ದಾರೆ. ಮುಖ್ಯಗುರು ಹುದ್ದೆ ಖಾಲಿಯಿದ್ದು, ಎಸ್ ಎನ್ ಲಿಂಗದಳ್ಳಿಯವರು ಪ್ರಭಾರ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ 1

ಪ್ರಭಾರ ಮುಖ್ಯಗುರು ಲಿಂಗದಳ್ಳಿ ಮಾತನಾಡಿ, “ಹಳೇ ವಿದ್ಯಾರ್ಥಿಗಳು ಶಾಲೆಯೊಳಗೆ ಸುಂದರವಾದ ವಾತಾವರಣ ನಿರ್ಮಿಸುವ ಕಾರ್ಯ ಮಾಡಿದರು. ಶಾಲೆ ಮುಂಭಾಗದಲ್ಲಿ ಅಲಂಕಾರಿತ ಹೂವಿನ ಗಿಡಗಳು ಹಾಗೂ ಮರಗಳನ್ನು ನೆಟ್ಟು ಶಾಲೆ ಸೌಂದರ್ಯ ಹೆಚ್ಚಿಸಿದರು. ಅಲ್ಲದೆ, ಶತಮಾನೋತ್ಸವ ಆಚರಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರೊಂದಿಗೆ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಕಲಿತ ನಿವೃತ್ತ ಡಿವೈಎಸ್‌ಪಿ ಎಸ್‌ ಎಸ್ ಹುಲ್ಲೂರ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರೇ ಶಾಲಾ ಶತಮಾನೋತ್ಸವ ಆಚರಣೆ ಮಾಡಿ ಋಣ ಮುಟ್ಟಿಸಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ 2

“ಶಾಲೆಯಲ್ಲಿ ಶೌಚಾಲಯ ಕೊರತೆಯಿದೆ. ಬಾಲಕಿಯರಿಗೆ ಮಾತ್ರ ಶೌಚಾಲಯವಿದ್ದು, ಬಾಲಕರು, ಶಿಕ್ಷಕರ ಶೌಚಕ್ಕೆ ಹೊರವಲಯವೇ ಗತಿಯಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯವನ್ನು ಒದಗಿಸುವ ಕೆಲಸ ಊರಿನ ಗುರು ಹಿರಿಯರು ಹಾಗೂ ಇಲಾಖೆಯ ಸಹಯೋಗದೊಂದಿಗೆ ಬಗೆಹರಿಸುತ್ತದೆ” ಎಂದು ವಚನ ಸಾಹಿತ್ಯ ಚಿಂತಕ ಅಬ್ದುಲ್ ರೆಹಮಾನ್ ಬೀದರಕುಂದಿ ತಿಳಿಸಿದರು.

ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ 3

ಶಾಲೆಯ ಪ್ರಧಾನ ಗುರುಗಳು ಮಾತನಾಡಿ, “ಶಾಲೆಯಲ್ಲಿ 18 ಕೋಣೆಗಳಿವೆ. ಮೂರು ಕೋಣೆಗಳ ದುರಸ್ತಿ ನಡೆದಿದೆ. ಶೌಚಾಲಯ ಕಟ್ಟಡ ಅರ್ಧಕ್ಕೆ ನಿಂತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಂಪೌಂಡ್ ಎತ್ತರಕ್ಕೆ ಏರಿಸಿದರೆ ಒಳ್ಳೆಯದಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಎಲ್‌ಕೆಜಿಯಲ್ಲಿ 21 ಮಂದಿ ಮಕ್ಕಳಿದ್ದು, ಯುಕೆಜಿಯಲ್ಲಿ 11 ಮಂದಿ ಇದ್ದಾರೆ. ಒಂದನೇ ತರಗತಿಯಲ್ಲಿ 15 ಮಂದಿ ಗಂಡು ಮಕ್ಕಳಿದ್ದು, 23 ಮಂದಿ ಹೆಣ್ಣುಮಕ್ಕಳಿದ್ದಾರೆ. ಎರಡನೇ ತರಗತಿಯಲ್ಲಿ 11 ಮಂದಿ ಗಂಡುಮಕ್ಕಳಿದ್ದು, 29 ಮಂದಿ ಹೆಣ್ಣುಮಕ್ಕಳಿದ್ದಾರೆ. ಮೂರನೇ ತರಗತಿಯಲ್ಲಿ ತಲಾ 29 ಮಂದಿ ಸೇರಿ ಒಟ್ಟು 58 ಮಂದಿ ಮಕ್ಕಳಿದ್ದಾರೆ. ನಾಲ್ಕನೇ ತರಗತಿಯಲ್ಲಿ 28 ಮಂದಿ ಗಂಡುಮಕ್ಕಳಿದ್ದು, 25 ಮಂದಿ ಹೆಣ್ಣುಮಕ್ಕಳಿದ್ದಾರೆ. ಐದನೇ ತರಗತಿಯಲ್ಲಿ 23 ಮಂದಿ ಗಂಡುಮಕ್ಕಳಿದ್ದು, 22 ಮಂದಿ ಹೆಣ್ಣುಮಕ್ಕಳಿದ್ದಾರೆ. ಆರನೇ ತರಗತಿಯಲ್ಲಿ 24 ಮಂದಿ ಗಂಡುಮಕ್ಕಳಿದ್ದು, 17 ಮಂದಿ ಹೆಣ್ಣುಮಕ್ಕಳಿದ್ದಾರೆ. ಏಳನೇ ತರಗತಿಯಲ್ಲಿ 23 ಮಂದಿ ಗಂಡುಮಕ್ಕಳಿದ್ದು, 24 ಮಂದಿ ಹೆಣ್ಣುಮಕ್ಕಳಿದ್ದಾರೆ ಒಟ್ಟಾರೆಯಾಗಿ 354 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಆದಷ್ಟೂ ಬೇಗ ಶೌಚಾಲಯ ನಿರ್ಮಾಣವಾದರೆ ಸಾಕೆಂಬ ನಿರೀಕ್ಷೆಯಲ್ಲಿದ್ದೇವೆ” ಎಂದರು.

ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ 4

ಈ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಡಿವೈಎಸ್‌ಪಿ ಎಸ್‌ ಎಸ್‌ ಹುಲ್ಲೂರ್ ಮಾತನಾಡಿ, “ನಾನು ಕಲಿತ ಶಾಲೆಗೆ 100 ವರ್ಷ ಕಳೆದಿದೆ. ನನ್ನಂತೆ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅವರೆಲ್ಲರ ಜೊತೆಗೂಡಿ ಚರ್ಚಿಸಿ ಆದಷ್ಟು ಬೇಗ ಶತಮಾನೋತ್ಸವದ ಆಚರಣೆ ಮಾಡುತ್ತೇವೆ” ಎಂದುರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಿಎಂಗೆ ಮಾದಿಗ ಹೋರಾಟ ಸಮಿತಿ ಮನವಿ

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್ ಹಿರೇಕುರುಬರ್ ಮಾತನಾಡಿ, “ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆಯು 135ನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಇಲ್ಲಿ ಹಲವರು ಕಲಿತು ಉನ್ನತ ಹುದ್ದೆಯಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ವಿಚಾರಿಸಿ ಶತಮಾನೋತ್ಸವ ಕಾರ್ಯಕ್ರಮವನ್ನು ನಿರ್ಧರಿಸಲಾಗುವುದು” ಎಂದರು.

ಒಟ್ಟಾರೆ ಶತಮಾನೋತ್ಸವ ಕಂಡ ಈ ಶಾಲೆಯ ವೈಭೋಗವನ್ನು ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಜನರು ಹಾಗೂ ಶಿಕ್ಷಣ ಪ್ರೇಮಿಗಳು ಶತಮಾನೋತ್ಸವದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...