ವಿಜಯಪುರ | ಮಹಾತ್ಮಾ ಗಾಂಧಿಯವರ 76ನೇ ಪುಣ್ಯತಿಥಿ, ಹುತಾತ್ಮ ದಿನ ಆಚರಣೆ

Date:

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 76ನೇ ಪುಣ್ಯತಿಥಿಯ ಅಂಗವಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹುತಾತ್ಮರ ದಿನವನ್ನು ಆಚರಿಸಿದ್ದಾರೆ.

ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಅಹಿಂಸಾಮೂರ್ತಿ, ಸರಳತೆಯ ಪ್ರತಿಪಾದಕ, ಜಗತ್ತಿನ ಹಲವಾರು ಮಹಾನ್ ಚಳುವಳಿಗಳಿಗೆ ಪ್ರೇರಕರಾಗಿದ್ದ ಮಹಾತ್ಮಾ ಗಾಂಧಿಯವರ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಸತ್ಯ, ಶಾಂತಿ, ಅಹಿಂಸೆ, ಅಷ್ಪ್ರಶ್ಯತೆ ನಿವಾರಣೆಗಾಗಿ ಗಾಂಧಿಜಿಯವರು ಪಾಲಿಸಿದ ತತ್ವಗಳು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಬ್ಲಾಕ್ ಅಧ್ಯಕ್ಷರಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಅಶ್ಫಾಕ ಮನಗೂಳಿ, ಎಸ್‍ಟಿ ಘಟಕದ ಅಧ್ಯಕ್ಷರಾದ ದೇವಾನಂದ ಲಚ್ಯಾಣ, ಅಬ್ಬುಲ್‍ಪೀರಾ ಜಮಖಂಡಿ, ಫಿರೋಜ ಶೇಖ, ಅನಸೂಯಾ ನಿಂಬರಗಿ, ಆಸ್ಮಾ ಕಾಲೇಬಾಗ, ಶಮಿಮಾ ಅಕ್ಕಲಕೋಟ, ರುಬಿನಾ ಹಳ್ಳೂರ, ಕಾಶಿಬಾಯಿ ಹಡಪದ, ಗಂಗಾಬಾಯಿ ಕಣಮುಚನಾಳ, ಅಬುಬಕರ ಕಂಬಾಗಿ, ಕೃಷ್ಣಾ ಲಮಾಣಿ, ತಾಜುದ್ದೀನ ಖಲೀಫಾ, ಪರಶುರಾಮ ಹೊಸಮನಿ, ಮಂಜುನಾಥ ನಿಡೋಣಿ, ಜಾಫರ ಸುತಾರ, ಮಹೇಶ ಶಹಾಪೂರ, ವರ್ಷಾ ಭೋವಿ, ಹಮಿದಾ ಪಟೇಲ, ಮುಂತಾದವರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...