ವಿಜಯಪುರ | ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ: ನೀಲಮ್ಮ ಹತ್ತಳ್ಳಿ

Date:

“ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ, ಚೇತನ್ಯ ಸ್ವರೂಪಿ, ಸಮಾಜದ ಬಹುಮುಖ್ಯ ಅಂಗ ಹೆಣ್ಣು” ಎಂದು ಶಿಕ್ಷಕಿ ನೀಲಮ್ಮ ಹತ್ತಳ್ಳಿ ಹೇಳಿದರು.

ವಿಜಯಪುರ ಪಟ್ಟಣದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ  ಆಯೋಜಿಸಿದ್ದ ಮಹಿಳಾ ಕಲಾವಿದರ  ಮನದಂಗಳ ಚಿತ್ರಕಲಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಂಕ್ರಮ್ಮ ಹೂಗಾರ ಮಾತನಾಡಿ, “ಹೆಣ್ಣು ಸಂಸಾರದ ಕಣ್ಣಾದರೆ ಕಲಾವಿದ ಸಮಾಜದ ಕಣ್ಣು. ಸ್ತ್ರೀ ತಾನು ಏನೆಂದು ನಿರೂಪಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಾಳೆ. 12ನೇ ಶತಮಾನದ ಅಕ್ಕಮಹಾದೇವಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡದಿದ್ದರೆ, ಇಂದು ನಾವು ಅವರನ್ನು ಓದುತ್ತಿರಲಿಲ್ಲ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಕಲಾ ಶಿಬಿರಗಳು ಆಯೋಜನೆ ಆಗಬೇಕು. ಬೇರೆ ರಾಜ್ಯದ ಮಹಿಳಾ ಕಲಾವಿದರು ಚಿತ್ರ ರಚಿಸುವುದನ್ನು ಜಿಲ್ಲೆಯ ಕಲಾವಿದರು ನಾಗರಿಕರು ನೋಡುವಂತಾಗಬೇಕು. ಎಂಬ  ಆಶಯವನ್ನು ಕಲಾವಿದ ರಮೇಶ್ ಚೌಹಾನ್ ತಿಳಿಸಿದರ.

ಶರಣಮ್ಮ ಕುಂಸಿ ಸ್ಥಳದಲ್ಲಿಯೇ ಕವನ ರಚಿಸಿ ಹಾಡಿದರು, ಅನನ್ಯ ಯಳಮೇಲಿ, ಸುಚಿತ್ರಾ ಲಿಂಗದಳ್ಳಿ, ಧನಲಕ್ಷ್ಮಿ ದೊಡ್ಡಮನಿ, ದಾಕ್ಷಾಯಿಣಿ ಇಮ್ನಾದ,ಗಿರಿಜಾ ಬಿರಾದರ, ಹಾಜಮಾ ಹುದ್ದಾರ್ ,ಕಲ್ಪನಾ ಬಾಬಕರ್ ,ಲಕ್ಷ್ಮಿ ಬಿರಾದರ, ಮಹದೇವಿ ಕೊಪ್ಪದ,ರಾಜೇಶ್ವರಿ ಕೌಲಗಿ, ಯಾಮಿನಿ ಶಹಾ ಇವರುಗಳು ತಮ್ಮ ಮನದಂಗಳದಿಂದ ಮೂಡಿಬಂದ ಚಿತ್ರಗಳನ್ನು ಬಣ್ಣಗಳ ಮೂಲಕ ಕ್ಯಾನ್ವಾಸ್ ಮೇಲೆ ಚಿತ್ರ ಬರೆದು ಸಂಭ್ರಮಿಸಿದರು.

ಅಕಾಡೆಮಿಯ ಜೀವಮಾನ ಸಾಧನೆಯ ಪುರಸ್ಕಾರ ಲಭಿಸಿರುವ ಸುಭಾಸ ಕೆಂಭಾವಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ 52ನೇ ವಾರ್ಷಿಕ ಕಲಾ ಪ್ರಶಸ್ತಿ ವಿಜೇತರಾದ ರಮೇಶ್ ಚೌಹಾನ ಇವರನ್ನು ಕಲಾಸಂಘದ ವತಿಯಿಂದ ಮಹಿಳಾ ಸದಸ್ಯರೆಲ್ಲರೂ ಗೌರವಿಸಿ ಸನ್ಮಾನಿಸಿದರು.

ಈ ಸುದ್ದಿ ಓದಿದ್ದೀರಾ? ಗುಬ್ಬಿ | ಕಿಡಿಗೇಡಿಗಳಿಂದ ಸುರಿಗೇನಹಳ್ಳಿ ಕಾಡಿಗೆ ಬೆಂಕಿ : ಕಂಗಾಲಾದ ಮರಗಿಡಗಳಲ್ಲಿನ ಪಕ್ಷಿ ಸಂಕುಲ

ಕಾರ್ಯಕ್ರಮದಲ್ಲಿ ಕಲಾವಿದರಾದ ಪಿ ಎಸ್ ಕಡೆಮನಿ, ವಿದ್ಯಾಧರ ಸಾಲಿ, ವೀರಯ್ಯ ಹಿರೇಮಠ, ಲಿಂಗರಾಜ ಕಜಾಪುರ, ಆನಂದ ಝ೦ಡೆ, ಮಲ್ಲಿಕಾರ್ಜುನ ಕನ್ನೂರ , ಸಿದ್ದು ಬಳಲಗಿಡದ, ಮುರಳಿಧರ ಭೋವಿ, ವಿಜಯ ರವಿ ನಾಯಕ, ಶಿವಾನಂದ ಅಥಣಿ, ಕಮಲೇಶ ಭಜಂತ್ರಿ, ರವಿ ಮುದುಗಲ್, ಬಿ ಎಸ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ವಿವಿ ಹಿರೇಮಠ ಪ್ರಾರ್ಥಿಸಿದರು, ಸ್ವಪ್ನ ಕಲಾದಗಿ ಸ್ವಾಗತಿಸಿದರು, ಕಲಾ ಸಂಘದ ಅಧ್ಯಕ್ಷೆ ರಾಜೇಶ್ವರಿ ಮೋಪಗಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಕಲ್ಪನಾ ಬಾಬಕರ ನಿರೂಪಿಸಿದರು ಹಾಗೂ ಧನಲಕ್ಷ್ಮಿ ದೊಡ್ಡಮನಿ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...