ವಿಜಯಪುರ | ನೆಮ್ಮದಿಯ ಬದುಕು ಬೇಕೋ ಬಿಜೆಪಿಯ ಸುಳ್ಳು ಬೇಕೊ ನೀವೇ ನಿರ್ಧರಿಸಿ: ಅಪ್ಪಾಜಿ ನಾಡಗೌಡ

Date:

ಮೋದಿ ಸರ್ಕಾರದ ಸುಳ್ಳು ಭರವಸೆ, ಭಾವನೆ ಕೆರಳಿಸುವ ವಿಚಾರ ಬೇಕೋ ಕಾಂಗ್ರೆಸ್ ಪಕ್ಷದ ಕಳಕಳಿ ಯೋಜನೆಗಳು ಬೇಕೊ ನೀವೇ ನಿರ್ಧರಿಸಿ ಎಂದು ಶಾಸಕ ಹಾಗೂ ಸಾಬೂನು-ಮಾರ್ಜಕ ನಿಗಮದ ಆಧ್ಯಕ್ಷರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಮಿಣಜಗಿಯಲ್ಲಿ ಮಂಗಳವಾರ (ಏ.16) ನಡೆದ ಜಿಪಂ ವ್ಯಾಪ್ತಿಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಂಡು ಹೆಣ್ಣುಮಕ್ಕಳ, ಯುವಕರ ಮನಸ್ಸು ಗೆದ್ದಿದೆ. ಕೆಲವೇ ತಿಂಗಳಲ್ಲಿ ಹೇಳಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಮೋದಿ ನೀಡಿದ್ದ ಯಾವೊಂದು ಮಾತನ್ನೂ ಉಳಿಸಿಕೊಂಡಿಲ್ಲ. ಬದಲಾಗಿ ದೇಶಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದ್ದಾರೆ ಎಂದು ಹೇಳಿದರು.

ವಿದ್ಯಾವಂತ, ಪ್ರಬುದ್ಧ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ ಅದು ವ್ಯರ್ಥವಾಗುವುದಿಲ್ಲ. ದಶಕಗಳ ಮೇಲಾಯ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಕಾರಣ ಏನೇ ಇರಲಿ, ಇದೀಗ ನಮ್ಮ ಲೋಕಸಭೆ ಸದಸ್ಯ ಹೇಗಿರಬೇಕು ನೀವು ನಿರ್ಧರಿಸಬೇಕು. ನೀವು ನೀಡಿದ ಮತ ಸಮಾನತೆ, ಸಾಮರಸ್ಯ, ಸುಭದ್ರತೆ ಹಾಗೂ ಅಭಿವೃದ್ಧಿಗೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೃಷ್ಣಾ ನದಿ ನೀರಿನ ಹಂಚಿಕೆ ಬಗೆಹರಿಸಲಿಲ್ಲ. ಯಾವೊಂದು ಜ್ವಲಂತ ಸಮಸ್ಯೆಗಳನ್ನು ಬಿಜೆಪಿಯವರು ಬಗೆಹರಿಸಲಿಲ್ಲ. ನೀರಿನ ಬಳಕೆ ಸರಿಯಾಗಿದ್ದರೆ ನಮ್ಮ ಬದುಕು ಬಂಗಾರವಾಗುತ್ತಿತ್ತು. ಒಂದೆಡೆ ರಾಜ್ಯ ಸರಕಾರ ಅನೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೆಟ್ಟಗಿನ ಬರ ಪರಿಹಾರ ಕೊಡಲಿಲ್ಲ ಕೋರ್ಟ್ ಛೀಮಾರಿ ಹಾಕುವ ಪ್ರಸಂಗ ಒದಗಿತು. ನೀರಿನ ಪಾಲೂ ಇಲ್ಲ. ಗಡಿ ವಿವಾದವೂ ಬಗೆಹರಿಸಲಿಲ್ಲ. ದೇಶದೆಲ್ಲೆಡೆ ವಿಪ್ಲವ ಪರಿಸ್ಥಿತಿ ಇದೆ. ಇಂತಹ ಮೋದಿಯವರ ಸರಕಾರ ನಮಗೆ ಬೇಕೆ? ದೇವರ ಹೆಸರೇಳಿ ಅಧಿಕಾರ ಮಾಡುತ್ತಾರೆ ಇವರಿಗೆ ನಾಚಿಕೆ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಉದ್ಯೋಗ, ಮೂಲಭೂತ ಸಮಸ್ಯೆ ನೀಗಿಸದೇ ದೇಶ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಆರ್ಥಿಕ ದಿವಾಳಿತನ ಸೃಷ್ಟಿಸಿದೆ. ಹಾಗಾಗಿ ಕಾಂಗ್ರೆಸ್ ನಮಗೆ ಅನಿವಾರ್ಯವಾಗಿದೆ. ಇಂದಿನ ಯುವಕರಿಗೆ ಬುದ್ಧಿ ಹೇಳಿ ಭ್ರಷ್ಟ, ಸುಳ್ಳಿನ ಕೇಂದ್ರ ಸರ್ಕಾರವನ್ನು ಓಡಿಸಬೇಕು. ನಲವತ್ತು ಸಾವಿರ ಕೋಟಿ ರೂ.ಗಳನ್ನು ಬಾಂಡ್‌ಗಳ ಮೂಲಕ ಸಂಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಗಟ್ಟಿತನದಿಂದ ಇದು ಹೊರಬಂತು. ಇದರಿಂದ ಸ್ವಚ್ಛತೆ ಮುಖ ಹಾಕಿದವರು ಬಯಲಾಗಿ ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಬಸವೇಶ್ವರ ಹಾಗೂ ಅಂಬೇಡ್ಕರ್‌ರ ದಾರಿಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ನಮ್ಮ ಗ್ಯಾರಂಟಿಗಳನ್ನೇ ದೇಶದೆಲ್ಲೆಡೆ ಕಾಪಿ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುತ್ತೆ ಎಂದು ಟೀಕಿಸಿದ ಮೋದಿಯವರೇ ‘ಮೋದಿ ಗ್ಯಾರಂಟಿ’ ಎಂದು ಪ್ರಚಾರ ಪಡೆಯುತ್ತಿರುವುದು ವಿಪರ್ಯಾಸ. ಇಲ್ಲಿನ ಬಿಜೆಪಿ ಸಂಸದ ಕಳೆದ ಹದಿನೈದು ವರ್ಷಗಳ ಅಧಿಕಾರ ಅನುಭವಿಸಿದರೇ ಹೊರತು ಏನೊಂದು ಕೆಲಸ ಮಾಡಲಿಲ್ಲ ಎಂದರು.

ನೀವು ನನ್ನ ಮೇಲೆ ವಿಶ್ವಾಸ ಇಟ್ಟರೆ ನಿಮ್ಮ ಜೀತದ ಆಳಾಗಿ ದುಡಿಯುತ್ತೇನೆ. ಜಿಲ್ಲೆಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತೇನೆ. ಈ ಸಲ ಜಿಲ್ಲೆಗಾಗಿ ಬದಲಾವಣೆ ಮಾಡಿ. ನನಗೆ ಕೊಡುವ ಮತ ನಾಡಗೌಡರಿಗೆ, ಸಿದ್ದರಾಮಯ್ಯರ ಕಾಳಜಿಗೆ ಎಂದು ಮನವಿ ಮಾಡಿದರು.

ಶಿವಶಂಕರಗೌಡ ಹಿರೇಗೌಡ ಪ್ರಸ್ತಾವಿಕ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಫಲ್ಯತೆ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಭರವಸೆಗಳನ್ನು ವಿವರಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಎಸ್.ಹುಲ್ಲೂರ ಮಾತನಾಡಿ, ತಕ್ಕಡಿಯಲ್ಲಿ ತೂಗಿ ಯಾರಿಂದ ಕೆಲಸವಾಗುತ್ತದೆ ಎಂದು ಯೋಚಿಸಿ ಅವರಿಗೆ ನಿಮ್ಮ ಪವಿತ್ರ ಮತ ನೀಡಿ ಎಂದು ಕೋರಿದರು.

ಹಿರಿಯ ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಶಕೀಲ್ ಖಾಜಿ, ಅಕ್ಕಮಹಾದೇವಿ ಕಟ್ಟಿಮನಿ, ಸಿದ್ದನಗೌಡ ಪಾಟೀಲ, ಸಿ.ಬಿ.ಅಸ್ಕಿ, ಕಾಶೀಂ ಪಟೇಲ, ಜೆ.ಬಿ. ಪಾಟೀಲ, ಅಶೋಕಗೌಡ ಪಾಟೀಲ, ಬಸವನಗೌಡ ಬಗಲಿ, ಶಿವಾನಂದಯ್ಯ ಹಿರೇಮಠ, ಐ.ಜಿ.ಯರನಾಳ ಅನೇಕರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...