ವಿಜಯಪುರ | ಎಲ್ಲರ ಸಮಾನತೆ, ಘನತೆಯ ಬದುಕಿಗೆ ಸಂವಿಧಾನ ಅವಕಾಶ ಕೊಟ್ಟಿದೆ: ನ್ಯಾ.ಅರವಿಂದ ಎಸ್ ಹಂಗರಗಿ

Date:

ಸಂವಿಧಾನ ಹಬ್ಬ ಆಚರಿಸುವ ಮೂಲಕ ನಾವೆಲ್ಲರೂ ಸಂವಿಧಾನದ ಪರ ಇದ್ದೇವೆಂದು ತೋರಿಸಿಕೊಟ್ಟಿದ್ದೇವೆ. ಸಂವಿಧಾನ ಎಲ್ಲ ಸಮುದಾಯಗಳ ಪರವಿದೆ. ಎಲ್ಲರೂ ಸಮಾನತೆ ಹಾಗೂ ಘನತೆಯ ಬದುಕನ್ನು ಬದುಕಲು ಅವಕಾಶ ಕೊಟ್ಟಿದೆ. ಅನ್ಯಾಯದ ವಿರುದ್ದ, ಶೋಷಿತರ ಪರವಾಗಿ ನಮ್ಮ ಸಂವಿಧಾನ ನ್ಯಾಯ ಒದಗಿಸುತ್ತದೆ ಎಂದು ವಿಜಯಪುರ ಜಿಲ್ಲಾ ಕಾನೂನು ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್ ಹಂಗರಗಿ ಹೇಳಿದರು.

ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ನಗರದ ಬಾರಾಕಮಾನ ಉದ್ಯಾನವನದಲ್ಲಿ ನವೆಂಬರ್‌ 26ರಂದು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶರಣ ಚಿಂತಕರು ಹಾಗೂ ಪ್ರಗತಿಪರ ಹೋರಾಟಗಾರ ಜೆ ಎಸ್ ಪಾಟೀಲ್, ಮಾತನಾಡಿ, “ಕಳೆದ 75 ವರ್ಷಗಳಿಂದ ನಮ್ಮನ್ನು ಸಂವಿಧಾನ ರಕ್ಷಿಸುತ್ತಿದೆ. ನಾವು ನಮ್ಮ ಮನೆಗಳಲ್ಲಿ ಬೇರೆ ಬೇರೆ ಹಬ್ಬ ಸಂಪ್ರದಾಯಗಳನ್ನು ಆಚರಿಸುತ್ತೇವೆ. ಆದರೆ ಇವತ್ತು ನಮಗೆಲ್ಲ ಶಿಕ್ಷಣ ಪಡೆಯುವ ಹಕ್ಕು ಕೊಟ್ಟಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಈ ಸಂವಿಧಾನ ರಚಿಸುವುದರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರರ ಶ್ರಮ ಹಾಗೂ ತ್ಯಾಗ ಅಪಾರ” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬುದ್ದ ಬಸವಣ್ಣನವರ ಆಶಯಗಳು ನಮ್ಮ ಸಂವಿದಾನದಲ್ಲಿ ಅಡಕವಾಗಿವೆ. ಎಲ್ಲ ಜಾತಿ ಜನಾಂಗದವರಿಗೂ ಸಮಾನ ನ್ಯಾಯ ಬದ್ಧತೆಯಿದೆ. ಆದರೆ ಕೆಲವು ವರ್ಗದ ಜನರು ನಮ್ಮ ಸಂವಿಧಾನ ಬದಲಾಗಬೇಕೆಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ ಇನ್ನೂ ನೂರು ವರ್ಷವಾದರೂ ನಮ್ಮ ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ” ಎಂದು ಹೇಳಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶ್ರೀಮತಿ ವಿಧ್ಯಾವತಿ ಅಂಕಲಗಿ ಎವರು ಮಾತನಾಡುತ್ತ ನಮ್ಮ ಸಂವಿಧಾನ ತುಂಬಾ ಮಹತ್ವದಾಗಿದೆ. ಇಂದು ಸಂವಿಧಾನ ಇರಲಿಲ್ಲ ಅಂದರೆ ನಾವೆಲ್ಲಾ ಇವತ್ತು ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಸೇರುತ್ತಿರಲಿಲ್ಲ. ಎಲ್ಲರಲ್ಲೂ ಬ್ರಾತೃತ್ವ ಭಾವನೆಯಿಂದ ಒಗ್ಗೂಡಿಸುವುದೇ ನಮ್ಮ ಸಂವಿಧಾನವಾಗಿದೆ ಎಂದು ಹೇಳಿದರು.‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಪ್ರಾನ್ಸಿಸ್ ಮ್ಯಾನೆಜಸ್ಸ ಮಾತನಾಡಿ, “ಇಂದು ನಮ್ಮ ಸಂವಿಧಾನ ಹಬ್ಬ ಆಚರಿಸುತ್ತಿರುವ ನಾವು ಸಂವಿಧಾನ ಉಳಿಸುತ್ತೇವೆ ಮತ್ತು ಬೆಳೆಸುತ್ತೇವೆಂದು ಸಂಕಲ್ಪ ಮಾಡೋಣ. ಸಂವಿಧಾನದ ಪ್ರಕಾರ ನಡೆಯೋಣ ಹಾಗೂ ನುಡಿಯೋಣ. ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ” ಎಂದು ಹೇಳಿದರು.

ಫಾದರ್ ಟಿಯೋಲ್ ಮಚಾದೊ ಪ್ರಾಸ್ತಾವಿಕವಾಗಿ ಮಾತನಾಡಿ, “ನಮ್ಮ ಸಂವಿಧಾನ ಪೀಠಿಕೆಯಲ್ಲಿ ನಾವು ಹಿಂದುಗಳು, ಮುಸ್ಲಿಂರು, ಕ್ರೈಸ್ತರೆಂದು ಹೇಳಲಿಲ್ಲ, ʼಭಾರತದ ಪ್ರಜೆಗಳಾದ ನಾವುʼ ಎಂದು ಹೇಳುತ್ತದೆ. ಭಾರತ ದೇಶದಲ್ಲಿರುವ ನಾವೆಲ್ಲರೂ ಒಂದೆ. ನಾವು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ಹಾಗಾಗಿ ಇಂದು ನಮ್ಮ ನಮ್ಮ ಮನೆಯಿಂದ ತಂದಿರುವ ಊಟದ ಬುತ್ತಿಯನ್ನು ಪರಸ್ಪರ ಹಂಚಿಕೊಂಡು ಸಹಭೋಜನ ಮಾಡುವ ಮೂಲಕ ನಾವೆಲ್ಲರೂ ಒಂದೇ ಕುಟುಂಬವದರೆಂದು ಗಂಟಾಘೋಷವಾಗಿ ಸಾರೋಣ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ, ಕಾರ್ಮಿಕರ ಎಚ್ಚರಿಕೆ ಜಾಥಾ

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಸಂವಿಧಾನ ಕುರಿತಾಗಿದ್ದು, ಎಲ್ಲರೂ ಆಸಕ್ತಿಯಿಂದ ಭಾಗಿಯಾಗಿ ಬಹುಮಾನಗಳನ್ನು ಪಡೆದುಕೊಂಡರು. ಮಕ್ಕಳ ಸಾಂಸೃತಿಕ ಕಾರ್ಯಕ್ರಮಗಳು ಲಂಬಾಣಿ ನೃತ್ಯ, ಮಂಗಳಮುಖಿಯರ ಹಾಡು ಸಂವಿಧಾನ ಕುರಿತಾಗಿ ಕಿರುನಾಟಕ ಎಲ್ಲರ ಗಮನ ಸೇಳೆದವು.

ಕಾರ್ಯಕ್ರಮದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಯ ಪಧಾದಿಕಾರಿಗಳಾದ ಗಂಗಾಧರ ಹಿರೇಮಠ, ಆಶೋಕ ಕಾಳೆ, ರಿಯಾನಾ, ಶಬ್ಬೀರ್ ಕಾಗಜಕೋಟ, ಸರ್ಕಾರಿ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...