ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ದಲಿತ ಬಾಲಕಿ ಮೇಲೆ ನಿರಂತರವಾಗಿ 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಮಾಡಿರುವುದನ್ನು ಖಂಡಿಸಿ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಒಗ್ಗೂಡಿ ಪ್ರತಿಭಟನೆ ನಡೆಸಿದರು.
ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಯುತ್ತಿದೆ. ದಲಿತ ಸಮುದಾಯದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಮಾಡಿರುವುದನ್ನು ಖಂಡಿಸಿ, ನ್ಯಾಯ ಕೊಡಿಸೋಣ ಬನ್ನಿ ಎಂದು ದಲಿತ ಸಂಘಟನೆ ನಾಯಕರು, ಮಹಿಳಾ ಸಂಘಟನೆ ನಾಯಕಿಯರು, ಜನಪರ ಸಂಘಟನೆ ನಾಯಕರು, ಮುದ್ದೇಬಿಹಾಳ ತಾಲೂಕಿನ ಸಮಸ್ತ ನಾಗರಿಕರು ಪ್ರತಿಭಟನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗಾಂಧಿ ಕೊಂದ ಮನಸ್ಥಿತಿಗಳಿಂದ ಸಿಜೆಐ ಮೇಲೆ ಶೂ ಎಸೆಯುವ ಪ್ರಯತ್ನ : ನವೀನ್ ಪೂಜಾರಹಳ್ಳಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಮುದ್ದೇಬಿಹಾಳ ಪಿಎಸ್‌ಐ ಅವರನ್ನು ಸಂಪರ್ಕಿಸಿದೆಯಾದರೆ ಕರೆಗೆ ಲಭ್ಯವಾಗಿಲ್ಲ.





