ಬಸವ ಅನುಯಾಯಿಗಳ ನಂಬಿಕೆ, ಅಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಬಸವ ಶ್ರೀಗಳಿಗೆ ʼತಾಲಿಬಾನ್ʼ ಎಂದು ಕನ್ನೇರಿ ಸ್ವಾಮಿಗಳು ನೀಡಿರುವ ಅವಮಾನಕಾರಿ ಹೇಳಿಕೆ ಅತ್ಯಂತ ಖಂಡನೀಯ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಜಿಲ್ಲಾ ಸಂಯೋಜಕ ಮಂಜುನಾಥ ಕಟ್ಟಿಮನಿ, “ಇದೊಂದು ಕೇವಲ ವೈಯಕ್ತಿಕ ಅವಹೇಳನವಲ್ಲ, ಬಸವ ಅನುಯಾಯಿಗಳ ಭಾವನೆಗಳ ಮೇಲೆ ಮಾಡಿರುವ ನೇರ ದಾಳಿ. ಕನ್ನೇರಿ ಶ್ರೀಗಳ ಈ ಹೇಳಿಕೆ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವುದು ಹಾಗೂ ಧಾರ್ಮಿಕ ವೈಮನಸ್ಯವನ್ನು ಹುಟ್ಟುಹಾಕುವ ಸ್ವರೂಪದ್ದು. ಧರ್ಮಗುರುಗಳ ಸ್ಥಾನಮಾನ ಹೊಂದಿರುವ ವ್ಯಕ್ತಿಯಿಂದ ಇಂತಹ ಭಾಷೆ ಬರುತ್ತಿರುವುದು ವಿಷಾದನೀಯ ಮತ್ತು ಬೇಜವಾಬ್ದಾರಯಿಂದ ವರ್ತಿಸಿದ್ದಾರೆ”
ಇದನ್ನೂ ಓದಿ: ವಿಜಯಪುರ | ನಾವು ಬೇಡ ಅಂದ್ರೂ ಸರ್ಕಾರ ಉಳಿಯುತ್ತೆ: ಸಚಿವ ಶಿವನಾಂದ ಪಾಟೀಲ
“ಸಮಸ್ತ ಬಸವ ಅನುಯಾಯಿಗಳ ಪರವಾಗಿ ಈ ಹೇಳಿಕೆಯನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ” ಎಂದಿದ್ದಾರೆ.





