ವಿವಿಧ ಸಾಮಾಜಿಕ ಭದ್ರತೆ ಯೋಜೇನಗಳ ಪರಿಣಾಮಕಾರಿ ಅನುಷ್ಠಾನಕ್ಕೆ ವಿಜಯಪುರ ಜಿಲ್ಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ. ನ.15ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ 15 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ತಿಳಿಸಿದ್ದಾರೆ.
ಹಿರೇಆಸಂಗಿ, ಚಿಕ್ಕರೋಗಿ, ಗೂಗದಡ್ಡಿ, ಕಳ್ಳವಟಗಿ, ದೇವಾಪುರ, ಮುತ್ತಗಿ, ಗುಡದಿನ್ನಿ, ಅರಷಣಗಿ, ಜಂಗಮೂರಾಳ, ತಾಳಿಕೋಟಿ ಪಟ್ಟಣದ ವಾರ್ಡ್ ನ. 11ರ ನಗರೇಶ್ವರ ದೇವಸ್ಥಾನ, ಲೋಣಿ ಕೆ ಡಿ, ಕನಕನಾಳ, ಕೆರೋರ, ಕಡ್ಲೆವಾಡ, ಮೊರಟಗಿಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.
ಪಿಂಚಣಿ ಸಾಮಾಜಿಕ ಯೋಜನೆಯಡಿ ವಿವಿಧ ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಪಿಂಚಣಿ ಪಾವತಿಸಲಾಗುವುದರಿಂದ ಸಂಬಂಧಿಸಿದ ಬ್ಯಾಂಕ್ -ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದಲ್ಲಿ ತಪ್ಪದೇ ಮಾಡಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ವಿಜಯಪುರ | ಕಬ್ಬು ದರ ನಿಗದಿ ಕೇಂದ್ರದ ಅಧಿಕಾರ; ರಾಜ್ಯದ್ದು ಜಾರಿಯ ಕೆಲಸ: ಸಚಿವ ಎಂ ಬಿ ಪಾಟೀಲ್
ಅದಾಲತ್ ನಲ್ಲಿ ಗ್ರಾಮ ಲೆಕ್ಕಿಗರು, ಪಂಚಾಯತಿ ಕಾರ್ಯದರ್ಶಿಗಳು, ಪಿಡಿಒಗಳು, ಅಂಚೆ ಕಚೇರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಿದ್ದಾರೆ.





