ಸಮಾನತೆಯ ಹರಿಕಾರ, ಸುಂದರ ಸಮಾಜದ ಕನಸುಗಾರ, ಕರುನಾಡು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಇಂದಿಗೂ ಪ್ರಸ್ತುತ. ಇವರ ಒಂದೊಂದು ವಚನಗಳೂ ನಮಗೆ ದಾರಿದೀಪ ಎಂದು ದ ಸಂ ಸ ವಿಜಯಪುರ ಜಿಲ್ಲಾ ಸಂಚಾಲಕ ವೈ ಸಿ ಮಯೂರ್ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ದ.ಸಂ.ಸ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಆಚರಣೆಯಲ್ಲಿ ಬಸವಣ್ಣನವರ ಫೋಟೋಗೆ ಪೂಜೆ ಸಲ್ಲಿಸಿ ಮಾತನಾಡಿದರು.
“ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೇಲು-ಕೀಳು, ಜಾತಿ ಧರ್ಮ ಹೀಗೆ ನೊಂದವರ ಪರವಾಗಿ ನಿಂತ ಮಹಾನುಭಾವ. ಬಸವ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರು ಕ್ರಾಂತಿಯ ಬೀಜವನ್ನು ಬಿತ್ತಿದ ಹರಿಕಾರ. ‘ಕಾಯಕವೇ ಕೈಲಾಸ’, ‘ವಸುದೈವ ಕುಟುಂಬಕಂ’ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹಾನ್ ಭಾವನನ್ನು ಇಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಸವಣ್ಣ ಮಾನವ ಕುಲಕ್ಕೆ ಬೇಕಾಗಿರುವಂತಹ ವಿಶ್ವಗುರು: ಬಸವಪ್ರಭು ಸ್ವಾಮೀಜಿ
ಬಸವ ದಳದ ತಾಲೂಕು ಮುಖಂಡ ಜಗದೀಶ್ ಕಲಬುರ್ಗಿ, ಗುರುಪಾದ ಕಲಬುರ್ಗಿ, ಸಂಗಣ್ಣ ಬ್ಯಾಕೋಡ ಹಾಗೂ ಸಾಮಾಜಿಕ ಹೋರಾಟಗಾರ ಪ್ರವೀಣ್ ಹಾಲಹಳ್ಳಿ, ದ.ಸಂ.ಸ ಜಿಲ್ಲಾ ಸಂಚಾಲಕ ವೈ ಸಿ ಮಯೂರ್, ತಾ. ಸಂಚಾಲಕ ಶರಣು ಚಲವಾದಿ, ಸಂಘಟನಾ ಸಂಚಾಲಕ ನೀಲಕಂಠ ಹೂಸಮನಿ, ಶಿವುಪುತ್ರ ಮೆಲಿನಮನಿ, ಜೈ ಭೀಮ್ ಕೊಚಬಾಳ, ಜೈ ಭೀಮ್ ತಳಕೇರಿ, ಮುತ್ತು ಮಲಘಾಣ ಶೇಖರ್ ಬಂದಾಳ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಇದ್ದರು,





