ವಿಜಯಪುರ | ಮಳೆಹಾನಿ ಸಮಸ್ಯೆ; ಸಹಾಯವಾಣಿಗೆ ಕರೆ ಮಾಡುವಂತೆ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸೂಚನೆ

Date:

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯು ವಾಡಿಕೆ ಅವಧಿಗಿಂತ ಮೊದಲೇ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಮಳೆ-ಗಾಳಿಯ ರಭಸಕ್ಕೆ ವಿದ್ಯುತ್ ಮೂಲಭೂತ ಸಲಕರಣೆಗಳು, ವಿದ್ಯುತ್ ಕಂಬಗಳು ಹರಿದು ಬಿದ್ದು, ಜನ-ಜಾನುವಾರುಗಳಿಗೆ ಹಾನಿಯನ್ನುಂಟುಮಾಡುವ ಸಂಭವಿಸಿರುವುದರಿಂದ ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಹೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜೀವಗಳ ಹಾನಿ ತಪ್ಪಿಸಲು ಸಹಕರಿಸುವಂತೆ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ತಿಳಿದ್ದಾರೆ.

ಮಳೆ-ಗಾಳಿಯ ರಭಸಕ್ಕೆ ಹಾಗೂ ಇತರೆ ಅನೇಕ ಕಾರಣಗಳಿಂದಾಗಿ, ಗಿಡಮರಗಳು, ವಿದ್ಯುತ್ ಕಂಬಗಳು ಪರಿವರ್ತಕಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ತಂತಿಗಳು ತುಂಡಾಗಿ ನೆಲದ ಮೇಲೆ ಬೀಳುತ್ತವೆ. ಇದನ್ನು ಅರಿಯದೇವಿಜಯಪುರ ಜನ-ಜಾನುವಾರುಯಗಳು ಆಕಸ್ಮಿಕವಾಗಿ ವಿದ್ಯುತ್‌ ಸಂಪರ್ಕಕಕ್ಕೆ ಬಂದು ಅಪಘಾತಗಳು ಉಂಟಾಗುವ ಸಂಭವವಿರುತ್ತದೆ.

ಸಾರ್ವಜನಿಕರು ಇಂತಹ ತುಂಡಾಗಿ ಬಿದ್ದ ವಿದ್ಯುತ್ ಸಲಕರಣೆಗಳನ್ನು ನೋಡಿದ ತಕ್ಷಣ ಅವುಗಳನ್ನು ಮುಟ್ಟದೆ ತಮ್ಮ ಹತ್ತಿರದ ಮಾರ್ಗದಾಳು 9 (ಲೈನ್‌ಮನ್) ತನಿಖಾಧಿಕಾರಿ, ಉಪವಿಭಾಗಾಧಿಕಾರಿ ದೂರವಾಣಿ ಸಂಖ್ಯೆ ಅಥವಾ ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾದ ಉಚಿತ ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ತಿಳಿಸಿ, ಸಂಭವಿಸಬಹುದಾದ ಜೀವಹಾನಿಗಳನ್ನು ತಪ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಪರ್ಕ ಸಂಖ್ಯೆಗಳು: ವಿಜಯಪುರ ವಿಭಾಗದ ಎಂಜಿನಿಯರ್ ಕಾರ್ಯನಿರ್ವಾಹಕ ಮಹಾಂತೇಶ ಚನಗೊಂಡ ಮೊ: 9448370248, ವಿಜಯಪುರ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯವ್ಯ ದಿಕ್ಕಿನ ಪ್ರದೇಶಕ್ಕಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೊಡ್ಡಪ್ಪ ಮೂಲಿಮನಿ ಮೊ: 9448370250, ವಿಜಯಪುರ ಮಹಾತ್ಮ ಗಾಂಧಿ ವೃತ್ತದಿಂದ ದಕ್ಷಿಣ, ನೈರುತ್ಯ ಮತ್ತು ಅಗ್ನಿ ದಿಕ್ಕಿನ ಪ್ರದೇಶಕ್ಕಾಗಿ ಪೂಜಾರ ಭಾರತಿ ಮೊ: 09448375711, ವಿಜಯಪುರ ತಾಲೂಕಿನ ಗ್ರಾಮೀಣ ಪ್ರದೇಶಕ್ಕಾಗಿ – ಬಾಲಾಜಿಸಿಂಗ ರಾಠೋಡ ಮೊ: 9448370251, ತಿಕೋಟಾ ಜಿ. ತಾಲೂಕಿನ ವ್ಯಾಪ್ತಿಯಲ್ಲಿ ಗೋವಿಂದ – ದೇಶಮುಖ ಮೊ: 9448971001 ಹಾಗೂ ಬಬಲೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ಮಹಾದೇವ ತಳವಾರ ಮೊ: 9449825955ಕ್ಕೆ ಸಂಪರ್ಕಿಸಬಹುದಾಗಿದೆ.

ఇంಡಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಸಿದ್ದಪ್ಪ :9448143362, ఇంಡಿ ತಾಲೂಕಿನ ವ್ಯಾಪ್ತಿಯಲ್ಲಿ 5 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮೆಡೆಗಾರ ಮೊ: 9448370250, ಚಡಚಣ ತಾಲೂಕಿನ ವ್ಯಾಪ್ತಿಯಲ್ಲಿ ಈ ವಿಜಯಕುಮಾರ ಹವಾಲ್ದಾರ ಮೊ: 9449858124, ಸಿಂದಗಿ ಮತ್ತು ಅಲಮೇಲ ತಾಲೂಕಿನ ವ್ಯಾಪ್ತಿಯಲ್ಲಿ ಚಂದ್ರಕಾಂತ ನಾಯ್ಕ ಮೊ: 9448370254 ಹಾಗೂ ದೇವರಹಿಪ್ಪರಗಿ ತಾಲೂಕಿನ ವ್ಯಾಪ್ತಿಯಲ್ಲಿ ಪ್ರಭುಸಿಂಗ ಹಜೇರಿ ಮೊ: 9480882923 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.‌

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ

ಬಸವನಬಾಗೇವಾಡಿ ವಿಭಾಗದ ಕಾರ್ಯನಿರ್ವಾಹಕ ಸಿದ್ದರಾಮ ಎಂಜಿನಿಯರ್ ಬಿರಾದಾರ ಮೊ: 9480882627, ಬಸವನಬಾಗೇವಾಡಿ ತಾಲೂಕಿನ ವ್ಯಾಪ್ತಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಕೊಟ್ರೇಶ ಹರನಾಳ 9448370256, ಎಂಜಿನಿಯರ್ ಮೊ: ಕೊಲ್ಲಾರ ತಾಲೂಕಿನ ವ್ಯಾಪ್ತಿಯಲ್ಲಿ ಪರಶುರಾಮ ನಾಗನೂರ ಮೊ: 9480883663.

ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ರಾಜಶೇಖರ ಹಾದಿಮನಿ ಮೊ: 9448370258 ಹಾಗೂ ತಾಳಿಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ವಿಜಯಕುಮಾರ ಬಿರಾದಾರ ಮೊ: 9480883664 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...