ವಿಜಯಪುರ | ರೇಷನ್ ಕೊಡದ ಅನ್ನಭಾಗ್ಯ ವಿತರಕರ ಲೈಸೆನ್ಸ್ ರದ್ದುಗೊಳಿಸುವಂತೆ ರೈತ ಸಂಘ ಒತ್ತಾಯ

Date:

ಅಲಮೇಲ ತಾಲೂಕಿನ ಆಹೇರಿ ಗ್ರಾಮದ ಅನ್ನಭಾಗ್ಯ ದಿನಸಿ ವಿತರಕ ಗ್ರಾಹಕರಿಗೆ 2-3 ತಿಂಗಳಿಂದ ರೇಷನ್ ಕೊಡದೆ ಸತಾಯಿಸಿ, ಪ್ರಶ್ನಿಸಿದರೆ ಪಡಿತರ ಚೀಟಿ ರದ್ದುಗೊಳಿಸುವುದಾಗಿ ಹೆದರಿಸುತ್ತಾರೆ. ಅಂತಹ ಅನ್ನಭಾಗ್ಯ ವಿತರಕರ ಲೈಸೆನ್ಸ್ ರದ್ದುಗೊಳಿಸುವಂತೆ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಅಲಮೇಲ ತಾಲೂಕು ಆಹೇರಿ ಗ್ರಾಮದ ನ್ಯಾಯಬೆಲೆ ಅಂಗಡಿಯ ದಿನಸಿ ಹಂಚುವ ವಿತರಕ ತಿಂಗಳ ದಿನಸಿ ಕೊಡದೆ 2-3 ತಿಂಗಳು ಮುಂದೂಡುತ್ತಿದ್ದು, ಜನರು ಪ್ರಶ್ನಿಸಿದರೆ ಪಡಿತರ ಚೀಟಿ ರದ್ದುಗೊಳಿಸುವುದಾಗಿ ಎದುರಿಸಿದ ವಿತರಕರ ಲೈಸನ್ಸ್ ರದ್ದು ಮಾಡುವಂತೆ ರೈತ ಸಂಘಟಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ‌ ಅವರಿಗೆ ಒತ್ತಾಯಿಸಿದರು.

ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಆಹೇರಿ(ಜ) ಗ್ರಾಮದ ದಿನಸಿ ಹಂಚುವ ವಿತರಕರು ಫಲಾನುಭವಿಗಳಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಮುಂದಿನ ತಿಂಗಳು ಬನ್ನಿ ಎಂದು 2 ತಿಂಗಳಿಂದ ದಿನಸಿ ಕೊಡದೇ ಮುಂದೂಡುತ್ತಿದ್ದಾರೆ. ಹೆಚ್ಚಿಗೆ ಕೇಳಿದರೆ ನಿಮ್ಮ ರೇಷನ್ ಕಾರ್ಡ್‌ ರದ್ದು ಪಡಿಸುವುದಾಗಿ ಹೆದರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗ್ರಾಮದ ರೈತ ಸಂಘದ ಅಧ್ಯಕ್ಷ ಆತ್ಮಾನಂದ ಭೈರೋಡಗಿ ಮಾತನಾಡಿ, ಈ ವಿತರಕರು ಪ್ರತಿ ತಿಂಗಳು 100 ಜನರಿಗೆ ರೇಷನ್ ಖಾಲಿ ಆಗಿದೆ, ಮೇಲಿನಿಂದಲೇ ಕಡಿಮೆ ಕಳುಹಿಸಿದ್ದಾರೆ, ಮುಂದಿನ ತಿಂಗಳು ಬನ್ನಿ ಎಂದು ಕಳುಹಿಸುತ್ತಿದ್ದಾರೆ. ಪ್ರಶ್ನಿಸಿದವರಿಗೆ ರೇಷನ್ ಕೊಡುವುದಿಲ್ಲ ಎಂದರು.

ಮನವಿ ಸ್ವೀಕರಿಸಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಮಾತನಾಡಿ, ಹೆಬ್ಬೆಟ್ಟು ಒತ್ತಿಸಿಕೊಂಡು 2-3 ತಿಂಗಳ ನಂತರ ದಿನಸಿ ಕೊಡುವ ಯಾವುದೇ ಪದ್ದತಿ ಇಲ್ಲ, ಹೆಬ್ಬೆಟ್ಟು ಒತ್ತಿಸಿಕೊಂಡ ತಕ್ಷಣದಲ್ಲಿ ದಿನಸಿ ವಿತರಣೆ ಮಾಡಬೇಕು. ಸಾರ್ವಜನಿಕರು ಇಂತಹ ಕಡೆಗೆ ಅನ್ಯಾಯವಾದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಈ ಕೂಡಲೇ ತನಿಖಾ ತಂಡ ರಚಿಸಿ‌ ತಪ್ಪು ಜರುಗಿದ್ದರೆ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ಕೊಡುತ್ತೇವೆ ಎಂದರು.

ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ತಾಲೂಕಾ ಸಮೂಹ ಮಾಧ್ಯಮ ಪ್ರತಿನಿಧಿ ಜಯಸಿಂಗ ರಜಪೂತ, ಅರವಿಂದ ರಜಪೂತ, ತಿಪ್ಪರಾಯ ಭೈರೊಡಗಿ, ಚನ್ನವೀರ ವಾಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...