ವಿಜಯಪುರ | ಕಬ್ಬು ದರ ನಿಗದಿ ಕೇಂದ್ರದ ಅಧಿಕಾರ; ರಾಜ್ಯದ್ದು ಜಾರಿಯ ಕೆಲಸ: ಸಚಿವ ಎಂ ಬಿ ಪಾಟೀಲ್

Date:

ಕಬ್ಬು ದರ ನಿಗದಿ ಮಾಡುವುದು ಕೇಂದ್ರದ ಅಧಿಕಾರ; ರಾಜ್ಯ ಸರ್ಕಾರ ಕೇವಲ ಜಾರಿಮಾಡುವುದಷ್ಟೇ ಎಂದು ಸಚಿವ ಎಂ ಬಿ ಪಾಟೀಲ್‌ ಹೇಳಿದರು.

ರಾಜ್ಯ ಸರ್ಕಾರ ಕಬ್ಬಿನದರ 3300 ಘೋಷಣೆ ಮಾಡಿರುವುದರ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗ ಆಗಿರುವ ದರ ನಿರ್ಧಾರದ ಕುರಿತು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ರೈತರಲ್ಲಿ ಗೊಂದಲಗಳಿವೆ. ಎಲ್ಲಾ ಕಾರ್ಖಾನೆಯವರನ್ನು ಒಪ್ಪಿಸಿ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಕಾರ್ಖಾನೆಯವರೆಲ್ಲ ಒಪ್ಪಿದ್ದಾರೆ. ಸಕ್ಕರೆ ವಿಚಾರದಲ್ಲಿ ಎಲ್ಲವೂ ಕೇಂದ್ರ ಸರ್ಕಾರದ್ದು, ಅದರಂತೆ ರೂ.3550 ಎಫ್ಆರ್ಪಿ ದರ ನಿಗದಿ ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರ ಗ್ರಾಹಕರ ಇಲಾಖೆಯ ಮಂತ್ರಿ ಯಾರು? ಪ್ರಲ್ಹಾದ್ ಜೋಶಿ. ಕಬ್ಬು ಕಟಾವು, ಸಾಗಾಟ ವೆಚ್ಚ ಸೇರಿ ಒಟ್ಟು ಕೇಂದ್ರದ ಎಫ್ಆರ್ಪಿ ಪ್ರಕಾರ 2600, 2700 ಆಗುತ್ತದೆ. ಈಗ ಎಫ್ಆರ್ಪಿ ದರಕ್ಕಿಂತ ಏಳು ನೂರು ಹೆಚ್ಚಾಗಿದೆ. ಸಕ್ಕರೆ ರಫ್ತು, ಆಮದು ಮಾಡುವ ನಿರ್ಧಾರ ಕೇಂದ್ರ ಸರ್ಕಾರವೇ ಮಾಡುತ್ತದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್ಆರ್ಪಿ ಗಿಂತ 700 ಹೆಚ್ಚು ಕೊಡಿಸಿದ್ದೇವೆ” ಎಂದರು.

“ರೈತರ ಬಗ್ಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ರೈತರ ಹೋರಾಟದಲ್ಲಿ ಬಿಜೆಪಿಯವರು ರಾಜಕೀಯ ಮಾಡಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಲ್ಲಿ ಹೋಗಿ ಮಲಗಿ ನಾಟಕ ಮಾಡಿದರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪ್ರಧಾನಿ ಹಾಗೂ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರ ಸಿಎಂ ಬಿಜೆಪಿಯವರು. ಎಂಎಸ್‌ಪಿ ಸಕ್ಕರೆ ದರ 31 ಇರೋದನ್ನು 41ಕ್ಕೆ ಏರಿಸಿ ಎಂದು ಪತ್ರ ಬರೆದಿದ್ದಾರೆ. ಸಕ್ಕರೆ ದರ ಏರಿಕೆಯಾದರೆ ರೈತರಿಗೆ ಅನುಕೂಲ ಆಗುತ್ತೆ. ನಮ್ಮ ರಾಜ್ಯದ್ದು ಎಥೆನಾಲ್ ಶೇ 70% ರಷ್ಟು ಖರೀದಿಯಾಗುತ್ತೆ. ಗುಜರಾತ್ ನಲ್ಲಿ 75% ರಷ್ಟು ಖರೀದಿ ಆಗುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಜಯಪುರ ರೈತರದ್ದು ಏನಿದೆ ಅದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಜೊತೆಗೆ ಚರ್ಚಿಸುವೆ. ಅವರು ಇವತ್ತು ನಾಳೆ ಬರಬಹುದು ಅವರು ಬಂದು ವಿವರಣೆ ಕೊಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ

“ಲೋಕಸಭೆಯಲ್ಲಿ ಪ್ರಲ್ಹಾದ್ ಜೋಶಿ‌ ಅವರು ಆಗಸ್ಟ್, ಅಕ್ಟೋಬರ್ ತಿಂಗಳಲ್ಲಿ ಉತ್ತರ ಕೊಟ್ಟ ಪ್ರತಿ ನನ್ನ ಬಳಿ ಇದೆ. ಮತ್ತೆ ಲೋಕಸಭೆಯಲ್ಲಿ ಅವರು ತಪ್ಪು ಉತ್ತರ ಕೊಡುತ್ತಿದ್ದರೆ ನನಗೆ ಗೊತ್ತಿಲ್ಲ. ಕೇಂದ್ರದ ಜವಾಬ್ದಾರಿ ಬಿಟ್ಟು ರಾಜ್ಯ ಸರ್ಕಾರದ ಮೇಲೆ ರೈತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದರು. ಕಬ್ಬು ದರ ವಿಚಾರ ರಾಜ್ಯ ಸರ್ಕಾರದಲ್ಲ ಅನ್ನೋದು ತಿಳಿದಿದೆ. ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು. ವಿಜಯೇಂದ್ರ ಅಲ್ಲಿಗೆ ಹೋಗಿ ಮಲಗಿದ್ದಾದರೂ ಯಾಕೆ? ಬಿಜೆಪಿಯವರು ರಾಜಕೀಯ ಮಾಡಿದ್ರು, ಮತ್ತೆ ಬಿಜೆಪಿಯವರ ಫ್ಯಾಕ್ಟರಿ ಇವೆ, ಇಲ್ಲವೇನು?” ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...