ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸುವುದು ವಿಜಯಪುರ ಜಿಲ್ಲೆಯ ಎಲ್ಲ ನಾಗರಿಕರ ಆದ್ಯ ಕರ್ತವ್ಯ. ಅತ್ಯಂತ ಹಿಂದುಳಿದ ಜಿಲ್ಲೆಗೆ ಅವಕಾಶ ಕೊಡಬೇಕು. ನಮ್ಮ ಕ್ಷೇತ್ರದ ಜನತೆ ಸಂಪೂರ್ಣವಾಗಿ ಇದಕ್ಕೆ ಬೆಂಬಲಿಸುತ್ತಾರೆ. ಯಾರೇ ಜನಪರ ಹೋರಾಟ ಮಾಡಲಿ ಅದರಲ್ಲಿ ಭಾಗವಹಿಸಿವುದು ನಮ್ಮ ಕರ್ತವ್ಯ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಇದರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಎಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, “ಯಾವುದೇ ಪಕ್ಷ ಇರಲಿ, ವ್ಯಕ್ತಿ ಇರಲಿ, ಅಧಿಕಾರ ಶಾಶ್ವತ ಅಲ್ಲ. ಉತ್ತಮ ಕೆಲಸಕ್ಕಾಗಿ ಹೋರಾಟ ನಡೆಯುತ್ತಿದೆ. ಯಾರೂ ಕೂಡಾ ರಾಜಕಾರಣ ಮಾಡಬಾರದು, ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬಾರದು. ಇದು ಜನಪರವಾದ ಈ ಹೋರಾಟಕ್ಕೆ ಮುಖ್ಯಮಂತ್ರಿ ಸ್ಪಂದಿಸಲಿದ್ದಾರೆ” ಎಂದು ಹೇಳಿದರು.
“ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ನಾನೊಬ್ಬ ಶಾಸಕನಾಗಿ ಬಂದಿಲ್ಲ. ಜಿಲ್ಲೆಯ ಒಬ್ಬ ಜನಸಾಮಾನ್ಯನಾಗಿ ಬಂದಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲೇಬೇಕು. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಇದು ಸಹಾಯವಾಗುತ್ತದೆ” ಎಂದರು.
ಬಾಗಲಕೋಟೆಯ ನಾಗರಾಜ ಕಲ್ಲಕೂಟಕರ ಮಾತನಾಡಿ, “ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ. ನಾವು ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅ. 13ರಂದು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಬಹಿರಂಗ ಹರಾಜು
ಕೆಪಿಸಿಸಿ ವಕ್ತಾರಾ ಎಸ್ ಎಂ ಪಾಟೀಲ ಗಣಿಹಾರ, ಕರ್ನಾಟಕ ರಾಷ್ಟೀಯ ಸಮಿತಿ ರಾಜ್ಯ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಅಶೋಕ ಜಾಧವ, ಸೀನು ಹಿಪ್ಪರಗಿ, ಅನಿಲ ಹೊನಕಟ್ಟಿ, ಲಕ್ಷ್ಮಣ ಚಡಚಣ, ಗೊತಕನಾಥ, ಪಿ ಎಸ್ ಹನಕಟ್ಟಿ, ಮುತ್ತುರಾಜ ಹೊನಗೊಂಡ, ದೇಸು ಚೌವ್ಹಾಣ, ಹೋರಾಟ ಸಮಿತಿಯ ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್ ಟಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಿಗಿ, ಕೆ ಎಫ್ ಅಂಕಲಿಗಿ, ಸಿದ್ದಲಿಂಗ ಬಾಗೇವಾಡಿ, ಅಕ್ರಮ ಮಾಶಾಳಕರ, ಶ್ರೀನಾಥ ಪೂಜಾರಿ, ಸುರೇಶ ಬಿಜಾಪುರ್, ಡಾ. ಎಂ ಆರ್ ಗುರಿಕಾರ, ಗೀತಾ ಎಚ್ ಟಿ, ನಿಂಗರಾಜ ಬಿದರಕುಂದಿ, ಕಲ್ಲಪ್ಪ ಬಬಲಾದಿ, ನೀಲಾಂಬಿಕಾ ಬಿರಾದಾರ, ಸುಶೀಲಾ ಮೀಣಜಗಿ, ಮಲ್ಲಪ್ಪ ಬಿರಾದಾರ, ಅಕ್ಷಯಕುಮಾರ ಅಜಮನಿ, ಸಿದ್ದರಾಮ ಹಿರೇಮಠ ಇದ್ದರು.





