ನಮ್ಮ ಪಕ್ಷ ಬಹಳ ದೊಡ್ಡದು. ನಮ್ಮಲ್ಲಿ ಯಾರೇ ಮುಖ್ಯಮಂತ್ರಿಯಾದರು ಪಕ್ಷವನ್ನು ನಾವು ಬಿಟ್ಟುಕೊಡುವುದಿಲ್ಲ. ಪಕ್ಷಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಬೇಡ ಅಂದರೂ ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಚಿಂತನೆ ಕುರಿತು ಪ್ರತಿಕ್ರಿಸಿದ ಅವರು, “ಈಗಾಗಲೇ ಸಿಎಂ, ಡಿಸಿಎಂ ಪ್ರತಿಕ್ರಿಯೆಸಿದ್ದಾರೆ. 140 ಜನ ಶಾಸಕರು ನಾವು ಒಗ್ಗಟ್ಟಾಗಿಲ್ವಾ ಹೇಗೆ? ನಮ್ಮ ಒಗ್ಗಟ್ಟಿನ ಬಗ್ಗೆ ಸಂಶಯ ಇದೆಯಾ? ಬಿಜೆಪಿಗೆ ಬೇಗ ಗದ್ದುಗೆ ಏರುವ ಆತುರತೆ ಇದೆ. ನಮ್ಮ ನಾಯಕರುಗಳು, ನಾವು ಒಗ್ಗಟ್ಟಾಗಿದ್ದೇವೆ” ಎಂದರು.
ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ರೈತರ ಹೋರಾಟ ಕುರಿತು ಪ್ರತಿಕ್ರಿಯಿಸಿ, “ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾನು ಪತ್ರ ಬರೆದು ಮನವಿ ಮಾಡಿದ್ದೇನೆ. ರಾಜ್ಯದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದೆ. ಆತಂಕದ ಪರಿಸ್ಥಿತಿ ಇದೆ. ಕಳೆದ ಅಕ್ಟೋಬರ್ ನಲ್ಲೆ ಪತ್ರ ಬರೆದು ಕೇಂದ್ರಕ್ಕೆ ಮಾಹಿತಿ ನೀಡಿದ್ದೇನೆ. ಮೆಕ್ಕೆಜೋಳ ಖರೀದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ 1800 ಹಾಗೂ 2000 ಇದೆ. ಇದನ್ನು ಏಕೆ ಬಿಜೆಪಿ ನಾಯಕರು ಕೇಂದ್ರಕ್ಕೆ ಪ್ರಶ್ನೆ ಮಾಡುವುದಿಲ್ಲ? ಪಾರ್ಲಿಮೆಂಟ್ ನಡೆದಿದೆ. ರಾಜ್ಯದವರು ಇದನ್ನು ಏಕೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತಿಲ್ಲ? ನಾಳೆ ಪ್ರಸ್ತಾಪ ಮಾಡಲಿ. ಕೊನೆಪಕ್ಷ ಮಾಧ್ಯಮಗಳಗಾದರೂ ಬೊಮ್ಮಾಯಿ ಹೇಳಿಕೆ ಪಡೆಯಲಿ” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಡಿ.7ರಂದು ವೃಕ್ಷಥಾನ್ ಹೆರಿಟೇಜ್; ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ
“ಕರ್ನಾಟಕವನ್ನು ಬಿಜೆಪಿ ಸಂಸದರು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಕೇಂದ್ರಕ್ಕೆ ಎಷ್ಟೇ ಪತ್ರ ಬರೆದರೂ ನಮಗೆ ಮಾತುಕತೆಗೆ ಕರೆಯುತ್ತಿಲ್ಲ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ಮಾಧ್ಯಮಗಳೇ ಇದರ ಬಗ್ಗೆ ಅಧ್ಯಯನ ಮಾಡಲಿ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಯಾರ ಅಧಿಕಾರ ಜಾಸ್ತಿ ಇದೆ ಅನ್ನೋದನ್ನ ನೀವೇ ಜನರಿಗೆ ತಿಳಿಸಿ” ಎಂದರು.





