ವಿಜಯಪುರ | 8 ಮಂದಿ ಮಕ್ಕಳೊಂದಿಗೆ ಆರಂಭವಾದ ಶಾಲೆಯಲ್ಲಿ ಇಂದು 148 ದಾಖಲಾತಿ; ಕಾರಣವೇನು?

Date:

2008ರಲ್ಲಿ ಒಬ್ಬರು ಶಿಕ್ಷಕರು, 8 ಮಂದಿ ಮಕ್ಕಳೊಂದಿಗೆ ಆರಂಭವಾದ ಈ ಶಾಲೆಗೆ 2016ರಲ್ಲಿ ಇನ್ನೊಬ್ಬರು ಶಿಕ್ಷಕರು ನೇಮಕವಾದರು. 2021ರಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಮೇಲ್ದರ್ಜೆಗೇರಿತು. ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿ ಹೆಚ್ಚಾಗುತ್ತಿದ್ದು, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕಲಿಯುತ್ತಿದ್ದ ಮಕ್ಕಳೂ ಕೂಡ ಈ ಶಾಲೆ ಬರುತ್ತಿದ್ದಾರೆ.

2024-25ನೇ ಸಾಲಿನಲ್ಲಿ 148 ಮಂದಿ ಮಕ್ಕಳಿದ್ದರು. ಮುಖ್ಯ ಶಿಕ್ಷಿಕ ಆರ್ ಎ ನದಾಫ್, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ ಎಚ್ ಲಷ್ಕರಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಿ ಎಂ ಬಾಗೇವಾಡಿಯವರ ಕ್ರಿಯಾಶೀಲ ಚಟುವಟಿಕೆಯಿಂದ ಶಾಲೆ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ.

ಶಿಕ್ಷಕರ ಶ್ರಮ, ದಾನಿಗಳ ನೆರವು ಸಮುದಾಯದ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಎಲ್ ಟಿ ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹುನಗುಂದ-ವಿಜಯಪುರ ಟೋಲ್ ಪ್ರೈವೇಟ್ ಲಿಮಿಟೆಡ್‌ನಿಂದ ₹2.65 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಪ್ಯಾನೆಲ್ ಬೋರ್ಡ್, 50 ಕುರ್ಚಿ ಮತ್ತು 150 ಸ್ಕೂಲ್ ಬ್ಯಾಗ್ ನೀಡಿದೆ.

ನಿಡಗುಂದಿ ಎಲ್‌ ಟಿ ಶಾಲೆ ಮಕ್ಕಳು

ಪಂಪ ಸದಸ್ಯ ಸಂಜೀವ ರಾಥೋಡ, ಗುತ್ತಿಗೆದಾರರ ಸಹಯೋಗದೊಂದಿಗೆ ₹2 ಲಕ್ಷದಲ್ಲಿ ಗ್ರಾನೈಟ್ ಕಲ್ಲಿನ ವೇದಿಕೆ ನಿರ್ಮಿಸಲಾಗಿದೆ. ಕೆಎನ್‌ಆರ್ ಕಂಪೆನಿಯಿಂದ ಪ್ರವೇಶ ದ್ವಾರದ ಕಮಾನು, ಶಿಕ್ಷಕರು ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ₹50,000ದ ಗೇಟ್ ನಿರ್ಮಾಣ, ಎಸ್‌ಡಿಎಂಸಿಯಿಂದ ಕಾರ್ಯಾಲಯದ ಪೀಠೋಪಿಕರಣಕ್ಕೆ ₹1 ಲಕ್ಷ, ಶಿಕ್ಷಕ ಲಸ್ಕರಿ ಅವರಿಂದ ಸ್ಮಾರ್ಟ್ ಟಿವಿ, ಮುಖ್ಯ ಶಿಕ್ಷಕ ನದಾಫ್ ಅವರಿಂದ ನಲಿಕಲಿ ಟೇಬಲ್‌ಗಳು ಹೀಗೆ ಇನ್ನೂ ಅನೇಕ ದಾನಿಗಳು ಅಲ್ಮಾರು, ಆರ್ ಓ ಪ್ಲಾಂಟ್, ಪಾದರಕ್ಷೆ ಬಿಡುವ ಫ್ರೇಮ್, ಸಿಂಟೆಕ್ಸ್ ಸೇರಿದಂತೆ ನಾನಾ ಸೌಲಭ್ಯಗಳ ಕೊಡುಗೆ ನೀಡಿದ್ದಾರೆ.

ಬಂಜಾರ ಸಮಾಜ ಹಾಗೂ ಭಿಕ್ಷಾಟನೆನಿರತ ಮಕ್ಕಳು ಮಾತ್ರ ಹೋಗುವ ಶಾಲೆ ಎಂದೇ ಮೂಗು ಮುರಿಯುತ್ತಿದ್ದವರಿಗೆ ಶಾಲಾ ಪ್ರವೇಶಕ್ಕೆ ಮುಗಿ ಬೀಳುತ್ತಿದ್ದಾರೆ. ಶೇ.40 ರಷ್ಟು ಮಕ್ಕಳು ಪಟ್ಟಣದ ನಾನಾ ಭಾಗಗಳಿಂದ ತಾವೇ ವಾಹನ ವ್ಯವಸ್ಥೆ ಮಾಡಿಕೊಂಡು ಶಾಲೆಗೆ ಬರುತ್ತಿದ್ದಾರೆ.

ಉತ್ತಮ ಶಿಕ್ಷಕ ಪ್ರಶಸ್ತಿ

ಬೆಳಿಗ್ಗೆ 10ರಿಂದ ಸಂಜೆ 4-20ರವರೆಗಿನ ಶಾಲಾ ಅವಧಿ ಬದಲು ಬೆಳಿಗ್ಗೆ 9ರಿಂದ ಸಂಜೆ 5-20ರವರೆಗೆ ನಡೆಯುತ್ತದೆ. ಶುಕ್ರವಾರ ವಿಶೇಷ ಶೈಕ್ಷಣಿಕ ಚಟುವಟಿಕೆ ಕೈಗೊಂಡು ವಿಜೇತರಿಗೆ ಶಿಕ್ಷಕರು ಸ್ವಂತ ಹಣದಿಂದ ಪ್ರೋತ್ಸಾಹ ಧನ ನೀಡುತ್ತಾರೆ. ಕೇವಲ ಎರಡು ಕೊಠಡಿಗಳನ್ನು ಹೊಂದಿದ್ದು ಏಳು ತರಗತಿ ನಿಭಾಯಿಸುತ್ತಿರುವುದು ವಿಶೇಷ. ಶಾಲೆಗೆ ಭೇಟಿ ನೀಡಿದ ಕ್ಷೇತ್ರದ ಸಚಿವ ಶಿವಾನಂದ ಪಾಟೀಲ ಅವರು ₹2 ಲಕ್ಷ ಕೊಡುಗೆ ಕೊಟ್ಟು ಮೂರು ಕೊಠಡಿ, ಹೈಟೆಕ್ ಶೌಚಾಲಯ ಮಂಜೂರು ಮಾಡಿಸಿದ್ದಾರೆ.

ನಲಿಕಲಿ ಎಂ ಎಚ್ ಲಷ್ಕರಿ ಎಂಬ ಹೆಸರಿನ ಯುಟ್ಯೂಬ್ ಚಾನೆಲ್ ಹೊಂದಿದ್ದು, ನಿಮ್ಮ ಮಕ್ಕಳ ಮೌಲ್ಯ ಶಿಕ್ಷಣ ಚಟುವಟಿಕೆ ಆಧಾರಿತ ಕಲಿಕೆಗಾಗಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿ ಎಂಬ ಹ್ಯಾಶ್ ಟ್ಯಾಗ್ ಹೊಂದಿದೆ. ನಾನಾ ಶೈಕ್ಷಣಿಕ ಚಟುವಟಿಕೆ, ಪಾಠಗಳ 160 ವಿಡಿಯೋಗಳನ್ನು ನೋಡಬಹುದಾಗಿದೆ. ಕೆಲ ವಿಡಿಯೋಗಳು 8 ಲಕ್ಷಕ್ಕೂ ಹೆಚ್ಚಿನ ವ್ಯೂಸ್ ಹೊಂದಿದೆ.

ನಿಡಗುಂದಿ ಎಲ್‌ ಟಿ ಶಾಲೆ

“ಜಿಲ್ಲಾಮಟ್ಟ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಬಂದ ಮೊತ್ತ 55,000ದ ಜೊತೆಗೆ ಮತ್ತಷ್ಟು ಹಣ ಸೇರಿಸಿ ಶಾಲಾ ಪ್ರಯೋಗಾಲಯ ಹಾಗೂ ಆಟೋಟ ಸಾಮಗ್ರಿಗಳನ್ನು ಒದಗಿಸಿದ್ದೇನೆ” ಎನ್ನುತ್ತಾರೆ ಶಿಕ್ಷಕ ಎಂ ಎಚ್ ಲಷ್ಕರಿ.

“ಸರ್ಕಾರದ ನಾನಾ ಯೋಜನೆಗಳ ಸದ್ಬಳಕೆ, ಶಿಕ್ಷಕ ಎಂ ಎಚ್ ಲಷ್ಕರಿ, ಡಿಎಂ ಬಾಗೇವಾಡಿ ಅವರದು ಉತ್ತಮ ಕಾರ್ಯ ನಿರ್ವಹಣೆ, ಎಸ್‌ಡಿಎಂಸಿ ಹಾಗೂ ಸ್ಥಳೀಯ ಸರ್ಕಾರದಿಂದ ನಮ್ಮ ಶಾಲೆ ಪ್ರಗತಿಯತ್ತ ಸಾಗುತ್ತಿದೆ” ಎನ್ನುತ್ತಾರೆ ಮುಖ್ಯ ಶಿಕ್ಷಕ ನದಾಫ್.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮಕ್ಕಳಿಗೆ ನೈತಿಕ ಶಿಕ್ಷಣ ಬಹಳ ಮುಖ್ಯ : ಲಕ್ಷ್ಮೀ ಹಿರೇಮಠ

“ಮೊದಲು ತಾಂಡಾದ ಮಕ್ಕಳು ಪಟ್ಟಣದ ಶಾಲೆಗೆ ಹೋಗುತ್ತಿದ್ದರು. ಶಿಕ್ಷಕರ ಪರಿಶ್ರಮದಿಂದ ಈಗ ತಾಂಡ ಶಾಲಾ ಮಕ್ಕಳು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಪಟ್ಟಣದ ಮಕ್ಕಳೂ ಕೂಡ ಇಲ್ಲಿಗೆ ಬರುತ್ತಿದ್ದಾರೆ” ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ರಾಠೋಡ.

ಇಂದಿನ ದಿನಮಾನಗಳಲ್ಲಿ ಶಿಕ್ಷಣವು ದುಡ್ಡಿಗೆ ಬಿಕರಿಯಾಗುವದನ್ನು ಕಾಣುತ್ತೇವೆ. ಆದರೆ ವಿಜಯಪುರ ಜಿಲ್ಲೆಯ ನಿಡಗುಂದಿ ಎಲ್ ಟಿ ಯ ತಾಂಡಾ ಶಾಲೆಯು ಬಡಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುತ್ತಿರುವುದು ಸಂತೋಷದಾಯಕ ಬೆಳವಣಿಗೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...