ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಅನೇಕ ಬಾರಿ ನನ್ನ ಹೆಸರು ಸಚಿವರ ಪಟ್ಟಿಯಲ್ಲಿತ್ತು. ನವದೆಹಲಿ ಮಟ್ಟದಲ್ಲೂ ಕ್ಲಿಯರ್ ಆಗಿತ್ತು. ಆದರೆ, ಆ ನಂತರ ಕೈ ತಪ್ಪಿತು. ಅದಕ್ಕೆ ಅಸಮಾಧಾನ ಹೊರಹಾಕಲು ಆಗುತ್ತದೆಯೇ’ ಎಂದು ಕರ್ನಾಟಕ ಸಾಬೂನು-ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಸಚಿವ ಸ್ಥಾನ ಅಪೇಕ್ಷೆ ಪಡುವುದರಲ್ಲಿ ನೈತಿಕ ಹಕ್ಕಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಶವಂತರಾಯ ಗೌಡ ನನ್ನ ತಮ್ಮ, ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಂತೋಷಪಡುವೆ” ಎಂದರು.
“ನಾನು ನಿಷ್ಠಾವಂತ ಕಾಂಗ್ರೆಸ್ಸಿಗ, 1981ರಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಜೀವನದಲ್ಲಿರುವ ವ್ಯಕ್ತಿ. ಹೀಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ” ಎಂದರು.
“ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಬಂದರೆ ಬೇಡವೆನ್ನುವುದೇಕೆ? ನಾವೆಲ್ಲ ಒಟ್ಟಾಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗೋಣ, ನಮ್ಮಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷವೆಂದು ಹೇಳಿ ಬರೋಣ” ಎಂದು ಹೇಳಿದರು.
“ಲಿಂಗಾಯತ ಕೋಟಾ ಆಧರಿಸಿಯೇ ನಂತರ ಕೈ ತಪ್ಪಿತು. ಅದಕ್ಕೆ ಅಸಮಾಧಾನ ಹೊರಹಾಕಲು ಆಗುತ್ತದೆಯೇ? ಲಿಂಗಾಯತ ಕೋಟಾ ಆಧರಿಸಿಯೇ ಅನೇಕರು ಮಂತ್ರಿಯಾಗಿದ್ದಾರೆ. ನಾನು ಮಂತ್ರಿಯಾಗಬೇಕು ಎಂಬುದು ಅಪೇಕ್ಷೆ. ಆದರೆ ಬೇರೆಯವರಿಗೆ ಸಚಿವ ಸ್ಥಾನ ಕೊಡಬೇಡಿ ಎನ್ನುವ ಜಾಯಮಾನ ನನ್ನದಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸದಿದ್ದರೆ ಹೋರಾಟ ತೀವ್ರವಾಗುತ್ತದೆ: ಚಿಂತಕ ಸಿದ್ದನಗೌಡ ಪಾಟೀಲ
30 ಸ್ಥಳ ಪರಿಶೀಲನೆ: “ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕ ಸ್ಥಾಪನೆಗೆ ಇಟ್ಟಂಗಿಹಾಳದಲ್ಲಿ ಉದ್ದೇಶಿತ ಎಕರೆ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಬೇರೆ ಜಮೀನನ್ನು ಪರಿಶೀಲನೆ ಮಾಡಲಾಗಿದೆ. ಆದರೆ, ಅಲ್ಲಿ ನೆಡುತೋಪು ನಿರ್ಮಾಣ ಕಷ್ಟಸಾಧ್ಯ, ಉತ್ಪಾದನಾ ಘಟಕ ಮಾತ್ರ ನಿರ್ಮಾಣ ಸಾಧ್ಯ, ಈ ಎರಡು ವಿಷಯಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದರು.





