ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಆದಷ್ಟು ಬೇಗ ಪರಿಹಾರ ಕೊಡಿಸಿ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು.
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ವಿತರಣಾ ತೊಟ್ಟಿ-1ಎರ ಕಾಜಿಬೀಳಗಿ ಪಶ್ಚಿಮ ಕಾಲುವೆಯ ವಿತರಣಾ ಕಾಲುವೆ-10 ರ ಮೇನ್ ಮತ್ತು ವಿತರಣಾ ಕಾಲುವೆ 11 ರ ನಿರ್ಮಾಣಕ್ಕಾಗಿ ಅನೇಕ ರೈತರ ಜಮೀನುಗಳನ್ನು 2020 ರಲ್ಲಿ ಕೇವಲ ಭೂಸ್ವಾಧಿನ ನೋಟಿಸ್ ಕೊಟ್ಟು ಕೆಲಸ ಮುಗಿಸಿ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ ಎಂಉ ರೂತರು ಆರೋಪಿಸಿದರು.
ಕಾಮಗಾರಿ ಪ್ರಾರಂಭಕ್ಕೂ ಮೊದಲೇ ರೈತರಿಗೆ ಹಣ ಬಿಡುಗಡೆ ಮಾಡಿ ನಂತರ ಕಾಮಗಾರಿ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಿ ಗುತ್ತಿಗೆದಾರರು ತಮ್ಮ ಕೆಲಸ ಬೇಗ ಮುಗಿಸಿ ಬಿಲ್ ಪಡೆದುಕೊಳ್ಳುವು ತರಾತುರಿಯಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಭೂಮಿ ಕಳೆದುಕೊಂಡ ರೈತರು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯವರಿಗೂ ಯಾವುದೇ ಪ್ರಯೋಜನ ಆಗಿರುವುದಿಲ್ಲ, ಆದ್ದರಿಂದ ಕೂಡಲೇ ರೈತರಿಗೆ ಭೂ ಪರಿಹಾರ ಒದಗಿಸಿಕೊಡಬೇಕು, ಇಲ್ಲದಿದ್ದಲಿ ಎಲ್ಲಾ ರೈತರು ಸೇರಿಕೊಂಡು ಕಾಲುವೆಗಳನ್ನು ಮುಚ್ಚಿ ಹೋರಾಟ ಮಾಡಬೇಕಾಗುವುದು ಅನಿವಾರ್ಯವಾಗಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಲ್ಲಿಯವರೆಗೆ ರೈತರಿಗೆ ಭೂ ಸ್ವಾಧಿನದ ಹಣ ಬರದಿರುವುದನ್ನು ಸರ್ಕಾರಕ್ಕೆ ತಿಳಿಸಿ ಹಣ ಮಂಜೂರಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿ, ಮಹಿಳಾ ಅಧ್ಯಕ್ಷರಾದ ರೇಖಾ ಪಾಟೀಲ, ಈರಪ್ಪ ಕುಳೆಕುಮಟಗಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಬನಸೋಡೆ, ಶ್ರೀಶೈಲ ವಾಲಿಕಾರ, ಶಿವಾನಂದಯ್ಯ ಹಿರೇಮಠ, ಸುಭಾಸ ಸಜ್ಜನ, ನಜೀರ ನಂದರಗಿ, ಶಾನೂರ ನಂದರಗಿ, ಖಾದರಸಾಬ ವಾಲಿಕಾರ, ರಾಮನಗೌಡ ಪಾಟೀಲ, ಮಹಾದೇವ ತೇಲಿ, ಅರುಣಗೌಡ ತೇರದಾಳ, ಸಂಗಪ್ಪ ಟಕ್ಕೆ, ಸಂಪತ್ತ ಜಮಾದಾರ, ಸಂಗಮೇಶ ಹುಣಸಗಿ, ಹಣಮಂತ ಬ್ಯಾಡಗಿ, ಎಚ್.ಎನ್.ಪಾಟೀಲ, ಮಹಾದೇವ ಕದಂ, ಸೇರಿದಂತೆ ಅನೇಕರು ಇದ್ದರು.




