ವಿಜಯಪುರ | ವಿವಿಧತೆಯಲ್ಲಿ ಏಕತೆಯೇ ಈ ದೇಶದ ನಿಜ ಸಂಸ್ಕೃತಿ: ನಜೀರ್‌ ಅಹಮದ್‌ ಕಾಜಿ

Date:

ವಿವಿಧತೆಯಲ್ಲಿ ಏಕತೆಯೇ ಈ ದೇಶದ ನಿಜ ಸಂಸ್ಕೃತಿ. ಹಲವು ಧರ್ಮಗಳನ್ನು ಪಾಲಿಸುವ ಜನರು ಸಾವಿರಾರು ವರ್ಷಗಳಿಂದ ಪ್ರೀತಿಯಿಂದ ಕೂಡಿಬಾಳುತ್ತಿರುವ ನೆಲ ಇದು ಎಂದು ಜಮಾಅತೆ ಇಸ್ಲಾಮಿ ಹಿಂದ್‌ ವಿಜಯಪುರ ಘಟಕದ ಮುಖಂಡ, ನಿವೃತ್ತ ಉಪನ್ಯಾಸಕ ನಜೀರ್‌ ಅಹಮದ್‌ ಕಾಜಿ ಹೇಳಿದರು.

ನಗರದ ಆನೌಪಚಾರಿಕ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ ಆಯೋಜಿಸಿದ್ದ “ನೆರೆಹೊರೆಯವರ ಹಕ್ಕುಗಳು” ವಿಷಯದ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಾಡಿನಲ್ಲಿ ಒಂದು ಕಾಲದಲ್ಲಿ ನೆರೆಹೊರೆಯವರು ಮನೆಯವರಂತಿದ್ದರು. ಆದರೆ ಇಂದು ಬಹಳ ಮಂದಿಯ ಬದುಕು ನನ್ನ ಮನೆ ನನ್ನ ಜೀವನ ಎಂಬುದಕ್ಕೆ ಮಾತ್ರ ಸೀಮಿತವಾಗಿದೆ. ಜಗತ್ತಿನ ಪ್ರಮುಖ ಧರ್ಮಗಳ ಗ್ರಂಥಗಳಲ್ಲಿ, ಬಸವಣ್ಣನವರ ವಚನಗಳಲ್ಲಿ, ಡಾ ಬಾಬಾಸಾಹೇಬ ಅಂಬೇಡ್ಕರ್‌ ಅವರ ಹಿತನುಡಿಗಳಲ್ಲಿ ನೆರೆಹೊರೆಯವರ ಹಕ್ಕುಗಳನ್ನು ಸರಿಯಾಗಿ ಪಾಲಿಸಿರಿ ಅಂತಾ ಹೇಳಲಾಗಿದೆ. ಕರ್ನಾಟಕ ಶಾಂತಿಯ ತೋಟ ಅಂತಾ ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಆದರೆ ವಿಜಯಪುರ ನಗರದಲ್ಲಿ ಕೆಲವು ಕೋಮುವಾದಿ ಶಕ್ತಿಗಳು ಅಶಾಂತಿ ಹರಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಾದರ್ ಎಮ್ ಕೆ ಸಿಕ್ಕೇರಾ ಮಾತನಾಡಿ, “ಇಸ್ಲಾಮಿನ ಪ್ರಕಾರ ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿ ಅದರ ಪ್ರತಿಫಲ ಬಯಸಬಾರದು. ಕಷ್ಟದಲ್ಲಿರುವ ನಮ್ಮ ನೆರೆಹೊರೆಯವರ ಕಷ್ಟಗಳನ್ನು ದೂರ ಮಾಡಲು ಪ್ರಯತ್ನಿಸಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿರಿಯ ನ್ಯಾಯವಾದಿ ಮಹಮುದ್ ಕಾಜಿ ಮಾತನಾಡಿ, “ಇಂದು ಜಗತ್ತು ತಂತ್ರಜ್ಞಾನದಲ್ಲಿ ಮುಂದುವರೆಯತ್ತಿದೆ. ಆದರೆ ಮನುಷ್ಯರ ಸಂಬಂಧಗಳು ದೂರವಾಗುತ್ತಿವೆ. ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತರು, ಹಿಂದುಳಿದವರು, ಮಹಿಳೆಯರ ಏಳಿಗೆಗಾಗಿ ಬಹಳ ಶ್ರಮ ಪಟ್ಟರು. ಅದನ್ನು ಇಂದಿನ ಪೀಳಿಗೆ ಸಾರ್ಥಕಗೊಳಿಸಬೇಕಿದೆ” ಎಂದರು.

ಇದನ್ನೂ ಓದಿ: ವಿಜಯಪುರ | ನಾವು ಬೇಡ ಅಂದ್ರೂ ಸರ್ಕಾರ ಉಳಿಯುತ್ತೆ: ಸಚಿವ ಶಿವನಾಂದ ಪಾಟೀಲ

ಸಿ ಎನ್ ಎಫ್ ಇ ಮುಖಂಡರಾದ ರೇಣುಕಾ ಮಾತನಾಡಿ, “ಧರ್ಮದ ಹೆಸರಿನಲ್ಲಿ ಕಚ್ಚಾಡುವುದನ್ನು ಬಿಟ್ಟು ಎಲ್ಲರೂ ಕೂಡಿ ಬಾಳೋಣ. ಇಂದಿನ ವಾತಾವರಣದಲ್ಲಿ ಒಂದು ಮಾದರಿಯ ಸಮಾಜದ ಆವಶ್ಯಕತೆ ಇದೆ. ಮಾನವರ ಬದುಕಿನ ಅಡಿಪಾಯ ಸಂಬಂಧ, ಈಸಂಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ನೆರೆಹೊರೆಯವರ ಸಂಬಂಧವಾಗಿದೆ. ಅದನ್ನು ಗಟ್ಟಿಗೊಳಿಸಿಕೊಳ್ಳೋಣ” ಎಂದರು.

ಅಬ್ದುಲ್ ಕಾದಿರ್‌, ಕಾರ್ಯಕ್ರಮ ಸಂಚಾಲಕ ಜ ಸಮದಾನಿ ಕಾಜಿ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...